ಮಂಗಳೂರು: ಮಂಗಳಾ ಅಲುಮ್ನಿ ಅಸೋಸಿಯೇಷನ್ (MAA) ತನ್ನ ಮಾಜಿ ಗೌರವಾಧ್ಯಕ್ಷ (ದಿವಂಗತ) ಅನಂತಕೃಷ್ಣ ಅವರ ಹೆಸರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕವನ್ನು ಸ್ಥಾಪಿಸಿದೆ. ಅನಂತಕೃಷ್ಣ ಅವರು ಮಂಗಳಗಂಗೋತ್ರಿ ಕ್ಯಾಂಪಸ್ನಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಅತೀ ಹೆಚ್ಚು ಅಂಕಗಳೊಂದಿಗೆ ಪೂರೈಸಿದ್ದರು.
ಸುಮಾರು ಒಂದು ದಶಕದ ಕಾಲ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದ ಅನಂತಕೃಷ್ಣ, ಬ್ಯಾಂಕನ್ನು ಶ್ರೇಷ್ಠತೆಯ ಎತ್ತರಕ್ಕೆ ಕೊಂಡೊಯ್ಯಲು ಅನೇಕ ನವೀನ ಕ್ರಮಗಳನ್ನು ಪರಿಚಯಿಸಿದರು. ಬ್ಯಾಂಕ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಡುವಿನ ಸಹಕಾರವನ್ನು ಬಲಪಡಿಸಲು ಅವರು ಅನುಸರಿಸಿದ ಕ್ರಮಗಳು ಪ್ರಶಂಸನೀಯ. ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿ ಬ್ಯಾಂಕಿಂಗ್ ಕ್ಷೇತ್ರದ ಮೂಲಕ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲು MAA ಅವರ ಹೆಸರಿನಲ್ಲಿ ಚಿನ್ನದ ಪದಕವನ್ನು ಸ್ಥಾಪಿಸಲು ಹೆಮ್ಮೆಪಡುತ್ತದೆ, ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ