|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಸಂಸ್ಕೃತಿ ಮರೆಯುವುದು ಮುಂದಿನ ಜನಾಂಗಕ್ಕೆ ಮಾಡುವ ಅನ್ಯಾಯ'

'ಸಂಸ್ಕೃತಿ ಮರೆಯುವುದು ಮುಂದಿನ ಜನಾಂಗಕ್ಕೆ ಮಾಡುವ ಅನ್ಯಾಯ'

ಮಂಗಳೂರು ವಿವಿಯ ತುಳುಪೀಠ, ಶ್ರೀರಾಮ ಭಜನಾ ಮಂದಿರ ಸಹಯೋಗದಲ್ಲಿ ಮರೋಳಿಯಲ್ಲಿ 'ಬಿಸು ಪರ್ಬ' ಆಚರಣೆ



ಮಂಗಳೂರು: ತುಳುನಾಡಿನ ಹಬ್ಬಗಳಿಗೆ ಸುಂದರ ಹಿನ್ನೆಲೆಯಿದೆ. ತುಳುವರ ಕೃಷಿ ಸಂಸ್ಕೃತಿಗೂ ಹಬ್ಬಗಳಿಗೂ ಅಪರೂಪದ ಅನುಬಂಧವಿದೆ. ಜನಜೀವನ ಬದಲಾದಂತೆ ನಗರಗಳಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಹಬ್ಬಗಳ ಆಚರಣೆ ಕಡಿಮೆಯಾಗುತ್ತಿದೆ, ಎಂದು ತುಳು ವಿದ್ವಾಂಸ, ಕಾರ್ಮಿಕ ಭವಿಷ್ಯ ನಿಧಿ ನಿವೃತ್ತ ಲೆಕ್ಕಾಧಿಕಾರಿ ಚಂದ್ರಹಾಸ ಕಣಂತೂರು ವಿಷಾದ ವ್ಯಕ್ತಪಡಿಸಿದ್ದಾರೆ. 


ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ  ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಮರೋಳಿಯ ಶ್ರೀರಾಮ ಭಜನಾ ಮಂಡಳಿ (ರಿ) ಜಂಟಿಯಾಗಿ ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಶ್ರೀರಾಮ ಭಜನಾ ಮಂದಿರದಲ್ಲಿ ಶುಕ್ರವಾರ ನಡೆದ ʼಬಿಸು ಪರ್ಬʼ ಆಚರಣೆಯಲ್ಲಿ ಅವರು ಬಿಸು ಅಥವಾ ವಿಷು ಹಬ್ಬ, ಅಂದು ಇಡುವ ಕಣಿಗೆ ಇರುವ ಮಹತ್ವ ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ ಪಿ ಶೆಟ್ಟಿ, ಬಿಸು ಆಚರಣೆಯಿಂದ ನಮ್ಮ ಧಾರ್ಮಿಕತೆಗೆ ಗಟ್ಟಿ ಸ್ವರೂಪ  ಬರಲಿ, ಸಂಸ್ಕಾರದ ಅರಿವು ಮೂಡಲಿ ಎಂದು ಆಶಿಸಿದರು.  


ಅಧ್ಯಕ್ಷತೆ ವಹಿಸಿದ್ದ  ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಶೆಟ್ಟಿ ಜಪ್ಪುಗುಡ್ಡೆಗುತ್ತು, “ಯುಗಾದಿಯನ್ನು ʼಧಾರ್ಮಿಕ ಆಚರಣೆ ದಿನʼ ಎಂದು ಪರಿಗಣಿಸಲು ಸರಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿದ್ದ ನಾವು ಮತ್ತೆ ನಮ್ಮತನದ ಮಹತ್ವ ಅರಿತಿರುವುದು ಒಳ್ಳೆಯ ಲಕ್ಷಣ. ಪ್ರತಿಯೊಂದು ಹಬ್ಬ, ಆಚರಣೆಯ ಮಹತ್ವವನ್ನು ಜನರಿಗೆ ತಿಳಿಸಿಕೊಡುವ ಕೆಲಸವನ್ನು ದೇವಸ್ಥಾನದ ಆಡಳಿತ ಮಂಡಳಿಗಳು, ಜ್ಞಾನಿಗಳು ಮಾಡಬೇಕು. ನಾವು ಸಂಸ್ಕೃತಿ ಮರೆಯುವುದು ಮುಂದಿನ ಜನಾಂಗಕ್ಕೆ ಮಾಡುವ ಅನ್ಯಾಯ” ಎಂದರು.  


ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ಮರೋಳಿ ಮಾತನಾಡಿ, ಮಕ್ಕಳಲ್ಲಿ ಮಾತ್ರವಲ್ಲ ಹಿರಿಯರಲ್ಲೂ ತುಳು ಸಂಸ್ಕೃತಿಯ ಅರಿವಿನ ಕೊರತೆಯಿದೆ, ಎಂದರು. ಪಾಲಿಕೆ ಸದಸ್ಯ ಕೇಶವ ಮರೋಳಿ, ಉದ್ಯಮಿ ಗುಣನಾಥ ಬಂಗೇರ, ಮರೋಳಿ ಗ್ರಾಮ ಸಮಿತಿ ಅಧ್ಯಕ್ಷ ಹರಿಣಾಕ್ಷ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ದಿನವಿಡೀ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಸಬಿ ಸವಾಲ್ (ರಸಪ್ರಶ್ನೆ) ನಲ್ಲಿ ಉತ್ತರಿಸಿದವರಿಗೆ ಬಹುಮಾನ ವಿತರಿಸಲಾಯಿತು. 


ತುಳು ಪೀಠದ ಸಂಯೋಜಕ ಡಾ. ಮಾಧವ ಎಂ.ಕೆ ಸ್ವಾಗತಿಸಿ ಪೀಠದ ಕಾರ್ಯಗಳ ಪರಿಚಯ ಮಾಡಿಸಿದರು. ವಿಜಯಲಕ್ಷ್ಮಿ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ರಾವ್ ಅವರ ಗಮಕ ವಾಚನ ಗಮನ ಸೆಳೆಯಿತು. ಕಾರ್ಯಕ್ರಮ ಸಂಯೋಜಕರಾದ ಡಾ. ವಿನೋದಾ, ವೀಣಾ, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post