ಅಂಡಮಾನ್ ನಿಕೋಬಾರ್: ದ್ವೀಪದ ಕ್ಯಾಂಪ್ಬೆಲ್ ಕೊಲ್ಲಿಯ ಈಶಾನ್ಯದಲ್ಲಿ ಭಾನುವಾರ ಬೆಳಗ್ಗೆ 7.02ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಗುರುತಿಸಲ್ಪಟ್ಟಿದೆ ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.
ಇದಕ್ಕಿಂತ ಮೊದಲು ಕ್ಯಾಂಪ್ಬೆಲ್ ಕೊಲ್ಲಿಯಲ್ಲಿ ಬುಧವಾರ ಸಂಜೆ 6.07ಕ್ಕೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 4.4ರಷ್ಟು ತೀವ್ರತೆ ದಾಖಲಾಗಿತ್ತು. ಈ ಭೂಕಂಪ ಜರುಗಿದ ಮೂರು ದಿನಗಳ ನಂತರ ಇದೇ ಕೊಲ್ಲಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ತಿಳಿಸಿದೆ.
Post Views:Earthquake of Magnitude:4.9, Occurred on 10-04-2022, 07:02:26 IST, Lat: 7.50 & Long: 94.31, Depth: 10 Km ,Location: 70km NE of Campbell Bay, Andaman and Nicobar island, India for more information Download the BhooKamp App https://t.co/5qRtopE3Po@Indiametdept @ndmaindia pic.twitter.com/jBWiFrDYyR
— National Center for Seismology (@NCS_Earthquake) April 10, 2022