ಕೋವಿಡ್‌ ಸಂದರ್ಭ ಹಿಂದು ಸಂಘಟನೆಗಳ ಕೆಲಸದ ದಾಖಲೆ ಕೊಡಬಹುದು, ಆದರೆ ನೀವೆಲ್ಲಿದ್ರಿ?: ಎಚ್‌ಡಿಕೆಗೆ ಶಾಸಕ ಕಾಮತ್‌ ತಿರುಗೇಟು

Upayuktha
0

ಮಂಗಳೂರು: ಹಿಂದು ಸಂಘಟನೆಯ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಏನು ಮಾಡಿದ್ದಾರೆ ಎನ್ನುವುದರ ದಾಖಲೆ ಕೊಡುತ್ತೇನೆ. ಆದರೆ ಕುಮಾರಸ್ವಾಮಿಯವರು ಆ ಸಂದರ್ಭದಲ್ಲಿ ಸಮಾಜಕ್ಕಾಗಿ ಏನು ಮಾಡಿದ್ದರೆ ಎನ್ನುವುದನ್ನು ಹೇಳಲಿ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ. 


ಆರೆಸ್ಸೆಸ್, ವಿಶ್ವಹಿಂದು ಪರಿಷತ್, ಬಜರಂಗದಳ‌, ಹಿಂದು ಜಾಗರಣಾ ವೇದಿಕೆ ಸೇರಿದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಎಲ್ಲಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಜನರ ನಡುವೆ ಕೆಲಸ ಮಾಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.


ಬಜರಂಗದಳ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಅಸಹಾಯಕರಿಗೆ ಸಹಾಯ ಮಾಡಿದ್ದಾರೆ. ಕೋವಿಡ್ ಸೋಂಕಿತರ ಶವ ಮುಟ್ಟಲು ಮನೆಯವರು ಹಿಂಜರಿದಂತಹ ಸಂದರ್ಭದಲ್ಲಿ 400ಕ್ಕೂ ಅಧಿಕ ಶವಗಳ ಅಂತ್ಯ ಸಂಸ್ಕಾರ ಮಾಡುವ ಮೂಲಕ ಜಿಲ್ಲಾಡಳಿತದೊಂದಿಗೆ ಕಾರ್ಯ ನಿರತರಾಗಿದ್ದರು. ಯಾರನ್ನೋ ಓಲೈಸಲು ಮಾಜಿ ಮುಖ್ಯಮಂತ್ರಿ‌ ಕುಮಾರಸ್ವಾಮಿಯವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ.


ಮಂಗಳೂರಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತಿದ್ದಾಗ ಆರ್.ಎಸ್.ಎಸ್ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರು ಹೆಲ್ಪ್ ಲೈನ್ ತೆರೆದು ಅವಶ್ಯಕತೆ ಉಳ್ಳವರಿಗೆ ನೆರವಾಗಿದ್ದಾರೆ. ಉಚಿತ ಆಂಬ್ಯುಲೆನ್ಸ್ ಸೇವೆ, ಐಸೋಲೇಷನ್ ಸೆಂಟರ್, ರಕ್ತದ ಅವಶ್ಯಕತೆಯಿರುವಾಗ 2847 ಯುನಿಟ್ ರಕ್ತದ ವ್ಯವಸ್ಥೆ, ತುರ್ತಾಗಿ ಆಕ್ಸಿಜನ್ ಪೂರೈಕೆ, ಸಾವಿರಾರು ಜನರಿಗೆ ಊಟದ‌ ವ್ಯವಸ್ಥೆ, 16 ಸಾವಿರ ಕುಟುಂಬಗಳಿಗೆ ರೇಷನ್ ಕಿಟ್, 552 ಜನರಿಗೆ ಔಷಧ ವಿತರಣೆ ಸೇರಿದಂತೆ ಅನೇಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.


ಕೋವಿಡ್ ಸಂಕಷ್ಟದ ಕಾಲದಲ್ಲಿ ಕುಮಾರಸ್ವಾಮಿಯವರು ಹೇಳಿಕೆ, ಪುಕ್ಕಟ್ಟೆ ಸಲಹೆಗಳನ್ನು ಕೊಡುವುದಲ್ಲದೆ ಬೇರೆ ಏನು ಮಾಡಿದ್ದಾರೆ. ಸಂಘಟನೆಯ ಕಾರ್ಯಕರ್ತರು ಹಗಲು ಇರುಳೆನ್ನದೆ ಸಮಾಜದ ನಡುವೆ ಸೇವೆ ಮಾಡಿ ಅನೇಕ ಕಾರ್ಯಕರ್ತರು ಕೋವಿಡ್ ಸೋಂಕಿಗೂ ಒಳಗಾಗಿದ್ದಾರೆ. ಇವೆಲ್ಲದರ ದಾಖಲೆ ಬೇಕಿದ್ದರೆ ಕುಮಾರಸ್ವಾಮಿ ಅವರಿಗೆ ಕೊಡುತ್ತೇವೆ. ಹಾಗೆಯೇ ಕುಮಾರಸ್ವಾಮಿಯವರು ಏನು ಮಾಡಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top