||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಗೀತವನ್ನು ಕೇಳುವುದು ಮತ್ತು ಹಾಡುವುದು ಎರಡೂ ಒಂದೇ ರೀತಿಯ ಪ್ರಯೋಜನಗಳನ್ನು ಹೊಂದಿದೆಯೇ?

ಸಂಗೀತವನ್ನು ಕೇಳುವುದು ಮತ್ತು ಹಾಡುವುದು ಎರಡೂ ಒಂದೇ ರೀತಿಯ ಪ್ರಯೋಜನಗಳನ್ನು ಹೊಂದಿದೆಯೇ?


ಹಾಡುವುದರಿಂದ ಅನೇಕ ಪ್ರಯೋಜನಗಳಿವೆ. ಇದು ನಮ್ಮ ಉಸಿರಾಟ ವ್ಯವಸ್ಥೆ, ಮೆದುಳು ಮತ್ತು ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಎಲ್ಲರೂ ಸೊಗಸಾಗಿ ಹಾಡಲು ಸಾಧ್ಯವಿಲ್ಲ ಆದರೆ ಎಲ್ಲರೂ ಕನಿಷ್ಠ ಹಾಡುಗಳನ್ನು ಕೇಳುವ ಮೂಲಕ ಸಂಗೀತದ ಪ್ರಯೋಜನಗಳನ್ನು ಪಡೆಯಬಹುದು. ಸಂಗೀತ ಕೇಳುವುದು ಮತ್ತು ಹಾಡುವುದು ಎರಡೂ ನಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವುದರಲ್ಲಿ ಸಂದೇಹವಿಲ್ಲ ಆದರೆ ಪ್ರಯೋಜನಗಳು ಒಂದೇ ಆಗಿವೆಯೇ?


ನಾವು ಸಂಗೀತವನ್ನು ಕೇಳಿದಾಗ, ಧ್ವನಿ ತರಂಗಗಳು (sound waves) ನಮ್ಮ ಕಿವಿಯನ್ನು ತಲುಪುತ್ತವೆ ಮತ್ತು ಒಳಗೆ ಹರಿಯುತ್ತವೆ. ಅದು ಮೆದುಳಿಗೆ ತಲುಪಲು ಸಂಕೇತಗಳಾಗಿ ಬದಲಾಗುತ್ತದೆ. ಈ ಧ್ವನಿ ತರಂಗಗಳು ಎಂಡಾರ್ಫಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಅದು ನಮ್ಮ ಒತ್ತಡ, ಆತಂಕ ಮತ್ತು ಉದ್ವೇಗವನ್ನು ಕಡಿಮೆ ಮಾಡಿ ಸಂತೋಷವಾಗಿರಲು ಸಹಾಯ ಮಾಡುತ್ತದೆ. ಅದೇ ರೀತಿ ನಾವು ಹಾಡಿದಾಗ ನಾವು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತೇವೆ ಅದು ನಮ್ಮ ಶ್ವಾಸಕೋಶವನ್ನು ಬಲಪಡಿಸುತ್ತದೆ, ಮೆದುಳಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ. ನಾವು ಹಾಡುವಾಗ, ನಮ್ಮ ಗಂಟಲಿನಿಂದ ಬರುವ ಸಂಗೀತದ ಕಂಪನಗಳು (musical vibrations) ಮೆದುಳನ್ನು ತಲುಪುತ್ತವೆ ಮತ್ತು ಮತ್ತೆ ಅದೇ ರಾಸಾಯನಿಕ ಎಂಡಾರ್ಫಿನ್‌ಗಳ ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ, ಹೀಗಾಗಿ ಅದೇ ಪರಿಣಾಮವನ್ನು ಉಂಟುಮಾಡುತ್ತವೆ. ಆದ್ದರಿಂದ ಸಂಗೀತದ ಪ್ರಯೋಜನಗಳು ಚೆನ್ನಾಗಿ ಹಾಡುವ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಶ್ರವಣದ ಮೂಲಕ ಪ್ರಚೂದನಗೂಳ್ಳುತ್ತದೆ, ಇನ್ನೊಂದು ಗಂಟಲಿನ ಕಂಪನಗಳಿಂದ  ಆದರೆ ಎರಡೂ ಸಹ ಒಂದೇ ಹರ್ಮೋನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.


ಹಾಗಾದರೆ ಎರಡರ ನಡುವೆ ಯಾವುದೇ ವ್ಯತ್ಯಾಸವಿಲ್ಲವೇ? ನಿಸ್ಸಂದೇಹವಾಗಿ ಸಂಗೀತದ ಪ್ರಯೋಜನಗಳನ್ನು ಹಾಡುವ ಮೂಲಕ ಅಥವಾ ಕೇಳುವ ಮೂಲಕ ಪಡೆಯಬಹುದು ಆದರೆ ಸಂಗೀತವನ್ನು ಅಭ್ಯಾಸ ಮಾಡುವುದರಿಂದ  ಸಾಧ್ಯವಾದಷ್ಟು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು. ಹಾಡುಗಳನ್ನು ಕೇಳುವಾಗಲೂ ಏಕಾಗ್ರತೆಯಿಂದ ಸಂಗೀತದ ಮೇಲೆ ಕೇಂದ್ರೀಕರಿಸಿದಾಗ ನೀವು ಮಾನಸಿಕವಾಗಿ ಸಂಗೀತದ ಹರಿವಿನೊಂದಿಗೆ ಹೋಗುತ್ತೀರಿ, ಹೀಗೆ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತ  ರಕ್ತ ಪರಿಚಲನೆ ಸುಧಾರಿಸುತ್ತದೆ, ಮೆದುಳಿಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ.ಹೀಗಾಗಿ ಹಾಡುವುದರಲ್ಲಿ ಸಿಗುವ ಎಲ್ಲಾ ಪ್ರಯೋಜನಗಳನ್ನು ಸಂಗೀತ ಕೇಳುವುದರಿಂದಲೂ  ಪಡೆಯಬಹುದು.  


ರಾಗ- ಕುಂತಲವರಾಳಿ


ಆ-ಸ ಮ₁ ಪ ದ₂ ನಿ₂ ದ₂ ಸ

ಅವ-ಸ ನಿ₂ ದ₂ ಪ ಮ₁ ಸ


ಕುಂತಲವರಾಳಿ ಎಂಬುದು 28ನೇ ಮೇಳಕರ್ತ ರಾಗದ ಹರಿಕಾಂಬೋಜಿ/ಹರಿಕೇದಾರಗೌಳದ ಜನ್ಯ ರಾಗವಾಗಿದೆ. ಈ ರಾಗವು ಲಘು ಸಂಗೀತ, ಸಣ್ಣ ಹಾಡುಗಳು ಮತ್ತು ಜಾನಪದ ಹಾಡುಗಳಲ್ಲಿ ಬಳಸಲಾಗುವ ಚಿಕ್ಕ ರಾಗವಾಗಿದೆ. ಈ ರಾಗದ ತಾಳದ ಮಾದರಿಯು ಅದನ್ನು ಸುಂದರಗೊಳಿಸುತ್ತದೆ. ರಾಗ ಸ್ವರಗಳನ್ನು ಬೇರೆ ರೀತಿಯಲ್ಲಿ ಜೋಡಿಸಲಾಗಿದ್ದು ಅದು ಇತರ ರಾಗಗಳಿಗಿಂತ ವಿಶಿಷ್ಟವಾಗಿದೆ. ಈ ರಾಗವನ್ನು ವಿವಿಧ ತಮಿಳು ಹಾಡುಗಳಲ್ಲಿ ಬಳಸಲಾಗಿದೆ. ಈ ರಾಗವನ್ನು ಕಡಿಮೆ ಗಮಕಗಳೊಂದಿಗೆ ಮಧ್ಯಮ ಅಥವಾ ವೇಗದಲ್ಲಿ ಹಾಡಲಾಗುತ್ತದೆ.


ಈ ರಾಗದ ಪ್ರಯೋಜನಗಳು-

• ಈ ರಾಗದ ಹಾಡನ್ನು ಕೇಳುವ ವ್ಯಕ್ತಿಗೆ ಭಕ್ತಿ ಭಾವವನ್ನು (devotion) ನೀಡುತ್ತದೆ

• ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ

• ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ


-ಡಾ. ರಶ್ಮಿ ಭಟ್

ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post