ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ನವಜಾತ ಪುತ್ರ ಸಾವು

Upayuktha Writers
0

ಇಂಗ್ಲೆಂಡ್: ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿದೆ.


ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ರೊನಾಲ್ಡೋ ಬಹಿರಂಗಪಡಿಸಿದ್ದಾರೆ. ರೊನಾಲ್ಡೋ ಪತ್ನಿ ಜಾರ್ಜಿನಾ ರೊಡ್ರಿಗಸ್ ಮತ್ತು ತಮ್ಮ ಸಹಿ ಇರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.




ನಮ್ಮ ಅವಳಿ ಮಕ್ಕಳಲ್ಲಿ ಗಂಡು ಮಗು ತೀರಿಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗಿದೆ. ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು ಇದು ಎಂದು ಪೋಸ್ಟ್‌ ಹಾಕಿದ್ದಾರೆ.


ವರ್ಷದ ಹಿಂದೆ ರೊನಾಲ್ಡೋ ದಂಪತಿ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದರು. ಈಗ ಅವಳಿ ಮಕ್ಕಳಲ್ಲಿ ಗಂಡು ಮಗು ಮೃತಪಟ್ಟಿದ್ದು, "ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣದಲ್ಲಿ ನಮಗೆ ಭರವಸೆ ಮತ್ತು ಸಂತೋಷದಿಂದ ಬದುಕಲು ನಮಗೆ ಶಕ್ತಿಯನ್ನು ನೀಡುತ್ತದೆ. ಈ ನಷ್ಟದಿಂದ ನಾವು ನಲುಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಖಾಸಗಿತನವನ್ನು ಬೇಡುತ್ತೇವೆ" ಎಂದು ರೊನಾಲ್ಡೊ ಮನವಿ ಮಾಡಿದ್ದಾರೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top