ಕಾರ್ಡ್ ರಹಿತ ನಗದು ಪಡೆಯುವ ಸೌಲಭ್ಯ: ಆರ್​ಬಿಐ

Upayuktha Writers
0

ಮುಂಬಯಿ: ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ಸೆಂಟರ್‌ಗಳಲ್ಲಿ ಯುಪಿಐ ಅನ್ನು ಬಳಸುವ ಮೂಲಕ ಕಾರ್ಡ್-ರಹಿತ ನಗದು ಲಭ್ಯವಾಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದೆ. 


ಹಣಕಾಸು ನೀತಿಯನ್ನು ಪ್ರಕಟಿಸುವ ವೇಳೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಹೇಳಿಕೆ ನೀಡಿದ್ದಾರೆ.


ಎಟಿಎಂ ಕೇಂದ್ರಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯವನ್ನು ಕೆಲವೇ ಬ್ಯಾಂಕ್‌ಗಳು ನೀಡುತ್ತಿವೆ. ಈಗ ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ಕೇಂದ್ರಗಳಲ್ಲಿ ಯುಪಿಐ ಅನ್ನು ಬಳಸಿ ಕಾರ್ಡ್‌ರಹಿತ ನಗದು ಪಡೆಯುವ ಸೌಲಭ್ಯ ಲಭ್ಯವಾಗುವಂತೆ ಪ್ರಸ್ತಾಪಿಸಲಾಗಿದೆ. ಕಾರ್ಡ್ ರಹಿತ ನಗದು ಪಡೆಯುವ ಸೌಲಭ್ಯದ ಅಡಿಯಲ್ಲಿ, ಗ್ರಾಹಕರು ಎಟಿಎಂಗಳಿಂದ ಹಣವನ್ನು ಪಡೆಯುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಈ ಮೂಲಕ ವಹಿವಾಟು ಹೆಚ್ಚಾಗಿರುತ್ತದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ದುರುಪಯೋಗ ತಪ್ಪುತ್ತದೆ ಎಂದು ಆರ್ ಬಿಐ  ಗವರ್ನರ್ ಹೇಳಿದ್ದಾರೆ.


hit counter

Post a Comment

0 Comments
Post a Comment (0)
Advt Slider:
To Top