||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರು: ಹನುಮಗಿರಿಯಲ್ಲಿ ವೈಭವದ ಶ್ರೀರಾಮನವಮಿ ಉತ್ಸವ, ಶೋಭಾಯಾತ್ರೆ

ಬೆಂಗಳೂರು: ಹನುಮಗಿರಿಯಲ್ಲಿ ವೈಭವದ ಶ್ರೀರಾಮನವಮಿ ಉತ್ಸವ, ಶೋಭಾಯಾತ್ರೆ


ಬೆಂಗಳೂರು: ಬನಶಂಕರಿಯ 3ನೇ ಹಂತದ ಇಟ್ಟಮಡು ಹಾಗೂ ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎ. ಜಿ. ಎಸ್ ಬಡಾವಣೆಯ ಸಮೀಪದಲ್ಲಿರುವ ಹನುಮಗಿರಿ ಬೆಟ್ಟದಲ್ಲಿ ಶ್ರೀ ರಾಮನ ದೂತ ಹನುಮನ ಸನ್ನಿಧಿಯಲ್ಲಿ ಶ್ರೀ  ರಾಮ ನವಮಿ ಮಹೋತ್ಸವ ಮತ್ತು ಶೋಭಾ ಯಾತ್ರೆ ಭಾನುವಾರ ಜರುಗಿತು.


ಶ್ರೀ ಹನುಮಗಿರಿ ಸಂಘದ ಮಾಧವ ಜಿ.ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾವುಗಳು ಇಂದು ಶ್ರೀ ರಾಮ ನವಮಿ ಮಹೋತ್ಸವ ಹಾಗೂ ಶೋಭಾ ಯಾತ್ರೆಯನ್ನು ನಡೆಸುತ್ತಿದ್ದು ಭಗವಂತನ ಆರಾಧನೆಯಲ್ಲಿ ಭಾಗವಹಿಸಿ ಪುನಿತರಾಗಿದ್ದೇವೆ ಎಂದು ನುಡಿದರು.


ಓಂಕಾರ ಆಶ್ರಮದ ಶ್ರೀ ಶ್ರೀ ಮಧುಸೂದನನಂದಪುರಿ ಸ್ವಾಮೀಜಿ ಶೋಭಯಾತ್ರೆಗೆ ಚಾಲನೆ ನೀಡಿದರು.  ಹನುಮಗಿರಿಯ ಬೆಟ್ಟಕ್ಕೆ ನಾನು ಹಲವಾರು ವರ್ಷಗಳಿಂದ ಹಲವಾರು ಬಾರಿ ಭೇಟಿ ನೀಡಿ ಹನುಮಗಿರಿಯ ಬೆಟ್ಟದ ತುತ್ತ ತುದಿಯಲ್ಲಿ ಧ್ಯಾನ ಮಾಡಿದಾಗ ಮನಸ್ಸಿಗೆ ಸಂತೋಷ ಮತ್ತು ಆಹ್ಲಾದ ನೀಡುತ್ತದೆ ಎಂದು  ನುಡಿದರು.

ಆರೆಸ್ಸೆಸ್‌ನ ಹಿರಿಯ‌ ಪ್ರಚಾರಕರಾದ ಪ.ರ. ಕೃಷ್ಣಮೂರ್ತಿ ಅವರು ಶ್ರೀ ರಾಮ ನವಮಿ ಮಹೋತ್ಸವದಲ್ಲಿ ಭಾಗವಹಿಸಿದರು.

ವಾಗ್ದೇವಿ ಹಾಗೂ ಶ್ರೀಚಿತ್ತ ಭಜನಾ ಮಂಡಳಿ ಅವರಿಂದ ಹನುಮಗಿರಿ ಬೆಟ್ಟದಲ್ಲಿ ಶ್ರೀರಾಮನ ಕುರಿತು ವಿಶೇಷ ಭಜನೆ ಜರುಗಿತು.


ಶ್ರೀ ರಾಮ ನವಮಿ ಮಹೋತ್ಸವ ಮತ್ತು  ಶೋಭಾ ಯಾತ್ರೆ ಏಪ್ರಿಲ್ 10 ರ ಭಾನುವಾರ ಬೆಳಗ್ಗೆ 11-00 ಕ್ಕೆ  ಇಟ್ಟಮಡುವಿನ ಶ್ರೀ ಭವಾನಿ ಶಂಕರ ಸ್ವಾಮಿ ದೇವಸ್ಥಾನ ದಿಂದ ಆರಂಭಗೊಂಡು, ಇಟ್ಟಮಡುವಿನ  ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದಲ್ಲಿ ಸಾಗಿ ಎಡಕ್ಕೆ ತಿರುಗಿ ವಿ.ಬಿ. ಬೇಕರಿ, ಬಸ್ ನಿಲ್ದಾಣದ ಮೂಲಕ ಸಾಗಿ ಏ.ಜಿ.ಎಸ್ ಬಡಾವಣೆ ಮೂಲಕ ಶ್ರೀ ಕಬ್ಬಾಳಮ್ಮ ದೇವಾಲಯದ ಮಾರ್ಗದ ಮೂಲಕ ಶ್ರೀ ಹನುಮಗಿರ ಬೆಟ್ಟವನ್ನು ಪ್ರದಕ್ಷಿಣೆ ಹಾಕಲಾಯಿತು.


ತಾಳ- ಮೇಳ- ವಾದ್ಯ ಹಾಗೂ ಡೊಳ್ಳು ಕುಣಿತ ಮತ್ತು ಪೂಜಾ ಕುಣಿತ ದೊಂದಿಗೆ ಕೇಸರಿ ಬಾವುಟವನ್ನು  ಹಿಡಿದು ಸಾಗುತ್ತಿದ್ದ ಭಕ್ತರು ಪಲ್ಲಕ್ಕಿಯಲ್ಲಿ ಶ್ರೀ ರಾಮ ದೇವರನ್ನು ಕುಳ್ಳರಿಸಿ ಯಾತ್ರೆ ಸಾಗುತ್ತಾ ಇದ್ದರೆ  ರಿ ಉದ್ದಕ್ಕೂ ಭಕ್ತರು ಭಗವಂತನ ದರ್ಶನ ಪಡೆದು ಪುನೀತರಾದರು.


ಶೋಭಾಯಾತ್ರೆಯ ಬಳಿಕ ಮಹಾ ಮಂಗಳಾರತಿ, ತೀರ್ಥ- ಪ್ರಸಾದ ವಿತರಣೆ ನಡೆಯಿತು. ಭಕ್ತರಿಗೆ ಪಾನಕ -ಕೋಸಂಬರಿ- ಪುಳಿಯೋಗರೆ, ಮೊಸರನ್ನವನ್ನು ಪ್ರಸಾದವಾಗಿ ನೀಡಲಾಯಿತು.


ಹನುಮಗಿರಿ  ಕ್ಷೇತ್ರದ ಬಗ್ಗೆ: 

ಮಾಂಡವ್ಯರ ತಪೋಭೂಮಿಯಲ್ಲಿ ನೆಲೆಸಿದ ಹನುಮನ ಕ್ಷೇತ್ರ ’ಹನುಮಗಿರಿ’- ತ್ರೇತಾಯುಗದಲ್ಲಿ ಹನುಮಂತ ಲಕ್ಷ್ಮಣನಿಗಾಗಿ ಸಂಜೀವಿನಿ ಹೊತ್ತೊಯ್ಯುತ್ತಿದ್ದಾಗ ಪರ್ವತದ ಒಂದು ತುಣುಕು ಬಿದ್ದ ಸ್ಥಳ, ಮಾಂಡವ್ಯ ಮಹರ್ಷಿಗಳ ತಪೋಭೂಮಿ ಎಂಬೆಲ್ಲ ಐತಿಹ್ಯವಿರುವ ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎಜಿಎಸ್ ಬಡಾವಣೆಯ ಸಮೀಪ ದಲ್ಲಿದೆ.


ಹನುಮಗಿರಿ ಕ್ಷೇತ್ರವು ಬಹಳ ಐತಿಹಾಸಿಕ ಮಹತ್ವ ಹೊಂದಿದ್ದು ಇದು ರಾಮಾಯಣದ ಹಿನ್ನೆಲೆಯ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆ. ಇಲ್ಲಿ ಅರ್ಕೆಶ್ವರ, ವೀರ ಹನುಮಾನ್ ಗೆ ಪ್ರತಿ ಶನಿವಾರ ಬೆಳಗ್ಗೆ 7-30 ರಿಂದ  8-30 ರವರಗೆ ಪೂಜೆ ನಡೆಯುತ್ತದೆ ಎಂದು ದೇವಸ್ಥಾನದ ಪ್ರಧಾನ ಆರ್ಚಕರು ಹೇಳುತ್ತಾರೆ.


ಶ್ರೀ ಹನುಮ ಗಿರಿಯ ಶಿಖರದ ತುತ್ತ ತುದಿಯಲ್ಲಿ ನಿಂತರೆ ನಮಗೆ ಭವ್ಯವಾದ ಬೆಂಗಳೂರು ನಗರದ ದರ್ಶನ ಲಭ್ಯ. ಅನೇಕ ವರ್ಷಗಳಿಂದಲೂ ಹನುಮಗಿರಿ ಬೆಟ್ಟದಲ್ಲಿ ಸತತವಾಗಿ ನಡೆಯುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಶ್ರೀ ಹನುಮ ಜಯಂತಿ ಮಹೋತ್ಸವ, ಶ್ರೀ ರಾಮನವಮಿ ಕಾರ್ಯಕ್ರಮಗಳು ಹಾಗೂ ಮಹಾಶಿವರಾತ್ರಿ ಪೂಜಾ ಮಹೋತ್ಸವದ ಜೊತೆ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಜರುಗುವ ಗಾಳಿಪಟ ಹಬ್ಬವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

 

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

ಚಿತ್ರ: ಕೃಷ್ಣಮೂರ್ತಿ ಜೋಯಿಸ್, ಬೆಂಗಳೂರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post