|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷ ಕನ್ನಿಕೆ ನಾಗರಾಜ್ ಪೂಜಾರಿ ದೇವಲ್ಕುಂದ

ಯಕ್ಷ ಕನ್ನಿಕೆ ನಾಗರಾಜ್ ಪೂಜಾರಿ ದೇವಲ್ಕುಂದ


ಓದಿದ್ದು ವಾಣಿಜ್ಯ ವಿಭಾಗದಲ್ಲಿ ಪದವಿ, ಆಯ್ಕೆ ಮಾಡಿಕೊಂಡಿದ್ದು ಯಕ್ಷಗಾನ. ಪೆರ್ಡೂರು ಮೇಳದಲ್ಲಿ ಸ್ತ್ರೀವೇಷ ಕಲಾವಿದರಾಗಿರುವ ಇವರ ಕಲಾಸಕ್ತಿ, ಕಲೆಯ ಮೇಲಿನ ಶ್ರದ್ಧೆ, ಪ್ರತಿಭೆಗೆ ಡೇರೆ ಮೇಳದಲ್ಲಿಯೇ ಅವಕಾಶ ಸಿಕ್ಕಿತು. ಸಿಕ್ಕಿದ ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಂಡ ಇವರು ತನಗೆ ಲಭಿಸಿದ ಪೋಷಕ ಪಾತ್ರಗಳಾದರೂ ಕೂಡ ಅದಕ್ಕೆ ಗರಿಷ್ಠ ನ್ಯಾಯ ನೀಡುವ ಗಮನ ಸೆಳೆಯುವಂತೆ ಮಾಡಿದರು. 


ಚಂದ್ರ ಪೂಜಾರಿ ಮತ್ತು ತುಂಗಾ ಪೂಜಾರಿ ದಂಪತಿಗಳ ಪುತ್ರರಾಗಿ ನಾಗರಾಜ್ ಪೂಜಾರಿಗೆ ಎಳವೆಯಲ್ಲಿಯೇ ಕಲಾಸಕ್ತಿ. ಕೋಟೇಶ್ವರದ ಶ್ರೀ ವರದರಾಜ ಎಮ್. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದ ಇವರು, ಯಕ್ಷಗಾನ ಕಲಿಯುವ ತುಡಿತ, ಸಾಲಿಗ್ರಾಮ ಮೇಳದ ಡಾ. ಚಂದ್ರಶೇಖರ ಶೆಟ್ಟಿ ಅವರ ಈಶ್ವರಿ ಪರಮೇಶ್ವರಿಯ ಸುಬ್ರಮಣ್ಯ ಹೆಗಡೆ ಯಲಗುಪ್ಪ, ಶಶಿಕಾಂತ ಶೆಟ್ಟಿ ಅವರ ಪಾತ್ರ ಯಕ್ಷಗಾನಕ್ಕೆ ಬರಲು ಪ್ರೇರಣೆ ನೀಡಿತು.


ಶಂಕರಪ್ಪನಕೊಡ್ಲು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಗತಿಯಲ್ಲಿ ಯಕ್ಷ ಗುರು ನವೀನ್ ಕೋಟ ಇವರಿಂದ ಹೆಜ್ಜೆ ಕಲಿತರು. ಇದು ಭದ್ರ ಬುನಾದಿ ಆಯಿತು. ಹಿರಿಯ ಕಲಾವಿದರ ಪಾತ್ರ ನಿರ್ವಹಣೆ, ಮುಖವರ್ಣಿಕೆ, ರಂಗ ನಿಲುವು ಇತ್ಯಾದಿ ರಂಗ ಪಠ್ಯವನ್ನು ಅಭ್ಯಸಿಸುತ್ತಾ ಮುನ್ನಡೆದ ಇವರು ಹಟ್ಟಿಯಂಗಡಿ ಮೇಳದಲ್ಲಿ ವೃತ್ತಿ ತಿರುಗಾಟವನ್ನು ಪ್ರಾರಂಭಿಸಿದರು. ನೈಲಾಡಿ ಪ್ರಶಾಂತ್ ಗಾಣಿಗರ " ಗಾನ ತರಂಗಿಣಿ"ಯ ಕವಿತಾ ಪಾತ್ರ ಯಕ್ಷಗಾನದಲ್ಲಿ ಒಬ್ಬ ಸ್ತ್ರೀ ವೇಷಧಾರಿಯನ್ನು ಪರಿಚಯಿಸಿತು. ಒಂದು ವರ್ಷ ಅಲ್ಲಿ ತಿರುಗಾಟ ಮಾಡಿದ ಇವರು ನಂತರ ಹಾಲಾಡಿ ಮೇಳಕ್ಕೆ ನಿಯೋಜನೆಗೊಂಡರೂ, ಪೆರ್ಡೂರು ಮೇಳಕ್ಕೆ ಹೋಗುವ ಅವಕಾಶ ಲಭಿಸಿತ್ತು. ಪ್ರೊ.ಪವನ್ ಕಿರಣ್ ಕೆರೆ ಅವರ "ಶತಮಾನಂ ಭವತಿ" ಪ್ರಸಂಗದಲ್ಲಿ ಇವರಿಗೆ ಲಭಿಸಿದ ಪಾತ್ರ, ಉತ್ತಮ ನಿರ್ವಹಣೆಯಿಂದ ಜನಮನ್ನಣೆ ಗಳಿಸಿತ್ತು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-

ಹಳೆಯ ಪ್ರಸಂಗ ಬಂದರೆ ಮೊದಲೇ ಹಿರಿಯ ಕಲಾವಿದರ ವಿಡಿಯೋ ಯೂಟ್ಯೂಬ್ ನಲ್ಲಿ ನೋಡಿ, ಹಿರಿಯ ಕಲಾವಿದರ ಜೊತೆಗೆ ಕೇಳಿ, ಪದ್ಯಗಳನ್ನು ಭಾಗವತರ ಹತ್ತಿರ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ದೇವಲ್ಕುಂದ ಹೇಳುತ್ತಾರೆ.


ದೇವಿ ಮಹಾತ್ಮೆ, ಅಭಿಮನ್ಯು ಕಾಳಗ, ಸುದರ್ಶನ ವಿಜಯ, ಚಂದ್ರಹಾಸ ಚರಿತ್ರೆ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಮಾಲಿನಿ, ಪದ್ಮಾವತಿ, ರಾಧೆ, ಚಂದ್ರವಳಿ, ಲಕ್ಷ್ಮೀ, ಸುಭದ್ರೆ, ರತ್ನಾವತಿ, ಮೀನಾಕ್ಷಿ ಇವರ ನೆಚ್ಚಿನ ವೇಷಗಳು.


ಯಕ್ಷಗಾನ ಇಂದಿನ ಸ್ಥಿತಿ ಗತಿ ಹಾಗೂ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- 

ಯಕ್ಷಗಾನವನ್ನು ನಂಬಿಕೊಂಡವರಿಗೆ ಕಷ್ಟದ ವಾತಾವರಣ. ಕಲೆ ಕಲಾವಿದ ಉಳಿಯಬೇಕಾದರೆ ಪ್ರೇಕ್ಷಕರು ಮೊದಲು ಆಟಕ್ಕೆ ಬಂದು ಆಟ ನೋಡಬೇಕು. ಎಲ್ಲೋ ಕೂತುಕೊಂಡು ಯಾರೋ ಹೇಳಿದನ ವಿಮರ್ಶೆ ಮಾಡಬಾರದು ಅಭಿಮಾನಿ ಆದವರು ಕಲಾವಿದನ ಅಭಿಮಾನಿ ಆಗದೆ ಕಲೆಯ ಅಭಿಮಾನಿ ಆಗಬೇಕು.


ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ರಂಗದಲ್ಲಿ ಸಕ್ರಿಯವಾಗಿ ಬಳಸಿಕೊಂಡು ಉತ್ತಮ ಜನ ಮೆಚ್ಚುವ ಕಲಾವಿದ ಆಗಬೇಕು ಎಂದು ಹೇಳುತ್ತಾರೆ ದೇವಲ್ಕುಂದ.


ಯಕ್ಷಗಾನಕ್ಕೆ ಬೇಕಾದ ಶಿರೋಭೂಷಣ ಇತರೆ ಮಣಿ ಸಾಮಗ್ರಿ ಇಂದ ವೇಷದ ಸಾಮಗ್ರಿ ತಯಾರಿಸುವುದು ಇವರ ಹವ್ಯಾಸ.

ಗೆಜ್ಜೆನಾದ ಯಕ್ಷಗಾನ ಕಲಾ ಮಂಡಳಿಯಿಂದ "ಯಕ್ಷ ಕನ್ನಿಕೆ" ಬಿರುದು ಸನ್ಮಾನ ಇವರಿಗೆ ಲಭಿಸುರುತ್ತದೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم