ಮಂಗಳೂರು: ಕೊಂಕಣಿ ಅಧ್ಯಯನ ಪೀಠ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಜಂಟಿಯಾಗಿ ಇತ್ತೀಚೆಗೆ ಕಾಲೇಜಿನಲ್ಲಿ ಭಾಷಾ ಸಾಮರಸ್ಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ಕಾರ್ಯಕ್ರಮವನ್ನು ಕೊಂಕಣಿ ಸಂಸ್ಕೃತಿಯ ಸಂಕೇತವಾದ ಗುಮಟಾ ವಾದನದೊಂದಿಗೆ ಉದ್ಘಾಟಿಸಲಾಯಿತು. ಭಾಷಾ ಸಾಮರಸ್ಯ ಕುರಿತು ಉಪನ್ಯಾಸ ನೀಡಿದ ನಾರಾವಿಯ ಸೈಂಟ್ ಅಂತೋನಿ ಕಾಲೇಜಿನ ಪ್ರಾಂಶುಪಾಲ ಫಾ. ಅಲ್ವಿನ್ ಸೆರಾವೋ, ಭಾಷಾ ಬಹುತ್ವ ನಮ್ಮ ದೇಶದ ಹೆಗ್ಗುರುತಾಗಿದೆ. ಭಾಷಾ ಬಹುತ್ವ ಒಪ್ಪಿಕೊಳ್ಳುವಿಕೆಯೇ ಭಾಷಾ ಸಾಮರಸ್ಯದ ಮುನ್ನುಡಿ, ಎಂದರು.
ಇನ್ನೋರ್ವ ಪ್ರಸಿದ್ದ ಕೊಂಕಣಿ ಸಾಹಿತಿ ಹಾಗೂ ವಿಮರ್ಶಕ ಎಚ್.ಎ0 ಪೆರ್ನಾಲ್, ಭಾಷಾ ಗುಣಮಟ್ಟದ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ ಎಂಬ ಕುರಿತು ಉಪನ್ಯಾಸ ನೀಡಿದರು. “ಸಾಮಾಜಿಕ ಮಾಧ್ಯಮ ಭಾಷೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಸಾಮಾಜಿಕ ಮಾಧ್ಯಮ ಭಾಷೆಯನ್ನು ಜನಸಾಮಾನ್ಯರತ್ತ ಕೊಂಡೊಯ್ಯುತ್ತದೆಯಾದರೂ ಕೆಲವೊಮ್ಮೆ ಗೊಂದಲಗಳಿಗೆ ಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ರೋಶನಿ ನಿಲಯ ಸಂಸ್ಥೆಯ ಕಾರ್ಯದರ್ಶಿ ಸಿ. ಎವ್ಲಿನ್ ಬೆನ್ನಿಸ್ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಅಧ್ಯಯನ ಪೀಠದ ಸ0ಯೋಜಕ ಡಾ. ಜಯವಂತ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊ0ಕಣಿ ಅಧ್ಯಯನ ಪೀಠದ ಕಾರ್ಯ ಚಟುವಟಿಕೆಯ ವಿವರ ನೀಡಿದರು. ಕಾಲೇಜಿನ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ವಂದನಾ ಡಿಸೋಜ ಕಾರ್ಯಕ್ರಮ ಸಂಯೋಜಿಸಿದರು. ದೀಪ್ತಿ ಮೊರಾಸ್ ಸ್ವಾಗತಿಸಿ, ವೆರ್ನೋನ್ ಕ್ರಿಸ್ ಪಿಂಟೋ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗಿಯಾಗಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ