ಹೈದರಾಬಾದ್: ಆಂಧ್ರಪ್ರದೇಶದಲ್ಲಿ ವಿದ್ಯುತ್ ಅಭಾವ ಎದುರಾಗಿದೆ. ಇದರಿಂದ ಗುರುವಾರ ಮಧ್ಯರಾತ್ರಿಯಿಂದಲೇ (ಏ.8ರಿಂದ 22ರವರೆಗೆ) 'ವಿದ್ಯುತ್ ರಜೆ'ಗಳನ್ನು ಸರ್ಕಾರ ಘೋಷಿಸಿದೆ.
ಆಂಧ್ರ ಪ್ರದೇಶಕ್ಕೆ ಅಗತ್ಯವಾದ ವಿದ್ಯುತ್ನಲ್ಲಿ ದಿನಕ್ಕೆ 40ರಿಂದ 50 ಮಿಲಿಯನ್ ಯೂನಿಟ್ಗಳ ಕೊರತೆ ಉಂಟಾಗಿದ್ದು, ಅಗತ್ಯವಾದಷ್ಟು ವಿದ್ಯುತ್ ಸಿಗುತ್ತಿಲ್ಲ. ಲಭ್ಯ ವಿದ್ಯುತ್ನಲ್ಲಿ ಗೃಹ ಬಳಕೆ ಮತ್ತು ಕೃಷಿ ಹಾಗೂ ಶಾಲಾ-ಕಾಲೇಜುಗಳ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗಾಗಿ ಒದಗಿಸಬೇಕಿದೆ. ಹೀಗಾಗಿ 'ವಿದ್ಯುತ್ ರಜೆ'ಗಳನ್ನು ಘೋಷಿಸದೇ ಯಾವುದೇ ಆಯ್ಕೆ ಸರ್ಕಾರದ ಮುಂದಿರಲಿಲ್ಲ. 15 ದಿನಗಳಲ್ಲಿ ವಿದ್ಯುತ್ ಸಮಸ್ಯೆ ಪರಿಹಾರ ಆಗುವ ನಿರೀಕ್ಷೆ ಇದೆ ಎಂದು ಆಂಧ್ರ ಪ್ರದೇಶದ ವಿದ್ಯುತ್ ವಿತರಣಾ ಕಂಪನಿಯ ಮುಖ್ಯಸ್ಥ ಜೆ.ಪದ್ಮ ಜನಾರ್ಧನರೆಡ್ಡಿ ಹೇಳಿದ್ದಾರೆ.
ಪವರ್ ರಜೆಯ ನಿಯಮಗಳು:
• ಕೈಗಾರಿಕೆಗಳು ಕಡ್ಡಾಯವಾಗಿ ವಾರಾಂತ್ಯದ ರಜೆಯೊಂದಿಗೆ ಮತ್ತೊಂದು ದಿನ ರಜೆ ಘೋಷಿಸಬೇಕು.
•ಪ್ರತಿ ಸಂಜೆ 6 ಗಂಟೆ ನಂತರ ಕೇವಲ ಪಾಳಿಯಲ್ಲಿ ಕೆಲಸ ಮಾತ್ರ ಮಾಡಿಸಬೇಕು.
•ದಿನದ 24 ಗಂಟೆಯ ವಿದ್ಯುತ್ ಬಳಕೆಯಲ್ಲಿ ಶೇ.50ರಷ್ಟು ವಿದ್ಯುತ್ ಮಾತ್ರವೇ ಬಳಕೆ ಮಾಡಬೇಕು.
•ಸರ್ಕಾರಿ, ಖಾಸಗಿ ಕಚೇರಿಗಳು, ಶಾಂಪಿಂಗ್ ಮಾಲ್ಗಳಲ್ಲಿ ಎಸಿ ಬಳಕೆಯನ್ನು ಅರ್ಧದಷ್ಟು ಕಡಿಮೆ ಮಾಡಬೇಕು.
•ವಿದ್ಯುತ್ ಅವಲಂಬಿತ ಜಾಹೀರಾತು ಫಲಕಗಳನ್ನು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಕೆ ಮಾಡಬಾರದು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ