ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮುಲ್ಕಿ ಘಟಕದ ಗೃಹರಕ್ಷಕರಾದ ದಿ|| ರಾಕೇಶ್ ಇವರು ಇತ್ತೀಚೆಗೆ ರಸ್ತೆ ಅಪಘಾತದಿಂದ ಮೃತಹೊಂದಿರುತ್ತಾರೆ. ಇವರ ಕುಟುಂಬದವರಿಗೆ ಕೇಂದ್ರ ಕಛೇರಿಯಿಂದ ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನವನ್ನು ನೀಡಿರುತ್ತಾರೆ.
ಈ ನಿಟ್ಟಿನಲ್ಲಿ ದಿನಾಂಕ 24-03-2022ನೇ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ದಿ|| ರಾಕೇಶ್ ರವರ ತಂದೆ ಶಾಂತರಾಮ ಪಿ. ಪೂಜಾರಿ ಮತ್ತು ತಾಯಿ ವಾರಿಜಾ ಇವರಿಗೆ ರೂಪಾಯಿ 10,000/- ಮೌಲ್ಯದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಕಛೇರಿಯ ಉಪಸಮಾದೇಷ್ಟರಾದ ರಮೇಶ್, ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ದಲಾಯತ್ ಮೀನಾಕ್ಷಿ, ಗೃಹರಕ್ಷಕರಾದ ಸುಲೋಚನಾ, ಜಯಲಕ್ಷ್ಮಿ, ದಿವಾಕರ್, ದುಷ್ಯಂತ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ