ಮಂಗಳೂರು: ಕಾಸರಗೋಡು-ಮಂಗಳೂರು ನಡುವೆ ಮಿತ ನಿಲುಗಡೆಯ ಬಸ್‌ಗಳನ್ನು ಆರಂಭಿಸುವಂತೆ ಕೋರಿ ಕಾಸರಗೋಡಿನ 'ಸಹಯಾತ್ರಿ' ನಿಯೋಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಡಿ.ಸಿ ಅರುಣ್ ಅವರಿಗೆ ಮನವಿ ಸಲ್ಲಿಸಿದೆ.
ಉಭಯ ರಾಜ್ಯಗಳ ನಡುವೆ ದಿನನಿತ್ಯ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಕರಾರಸಾಸಂ ಬಸ್‌ಗಳ ಸೇವೆಯಲ್ಲಿ ಸುಧಾರಣೆ ತರುವಂತೆ ಮನವರಿಕೆ ಮಾಡಲಾಯಿತು.
ಈಗ ಸಂಚರಿಸುತ್ತಿರುವ ಎಲ್ಲ ಬಸ್‌ಗಳೂ ಬಹು ನಿಲುಗಡೆಯ ಬಸ್‌ಗಳಾಗಿದ್ದು, ಎರಡು ನಗರಗಳ ನಡುವಣ 50 ಕಿ.ಮೀ ದೂರವನ್ನು ಕ್ರಮಿಸಲು ಸುಮಾರು 2 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕಚೇರಿಗಳಿಗೆ ತೆರಳುವ ಉದ್ಯೋಗಿಗಳಿಗೆ ಸಕಾಲದಲ್ಲಿ ಗಮ್ಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿಜವಾದ ಅರ್ಥದಲ್ಲಿ ಈ ಮಾರ್ಗದಲ್ಲಿ ನಿಯಮಿತ ನಿಲುಗಡೆಯ ಅಥವಾ ಎಕ್ಸ್‌ಪ್ರೆಸ್ ಬಸ್‌ಗಳ ಸೇವೆಯ ತುರ್ತು ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Dear Sir/Madam, We have received and gone through your request of operating express services from Kasaragod and Mangaluru. Due to COVID-19 the Corporation have not inducted new buses.
— KSRTC (@KSRTC_Journeys) March 18, 2022
(1/2)
ಮೊದಲು ಕಾಸರಗೋಡು- ಮಂಗಳೂರು, ಪುತ್ತೂರು- ಕಾಸರಗೋಡು, ಸುಳ್ಯ- ಕಾಸರಗೋಡು ನಡುವೆ ಓಡಾಡುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮಾಸಿಕ ಪಾಸ್ ವಿತರಿಸುವ ವ್ಯವಸ್ಥೆ ಇತ್ತು. ಪ್ರಸ್ತುತ ಅದು ನಿಂತು ಹೋಗಿದ್ದು ನಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಪುನಃ ಆರಂಭಿಸುವ ಅಗತ್ಯವಿದೆ. ಇಂತಹ ಮಾಸಿಕ ಪಾಸ್ ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಸಮಾನವಾಗಿ ಅನ್ವಯಿಸುವಂತೆ ರೂಪಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಸ್ವೀಕರಿಸಿದ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಡಿ.ಸಿ ಅರುಣ್ ಅವರು ಈ ಬೇಡಿಕೆಗಳನ್ನು ಸಕ್ರಿಯವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಸಹಯಾತ್ರಿ ನಿಯೋಗದಲ್ಲಿ ಕೃಷ್ಣ ಕಿಶೋರ್, ಲೋಕೇಶ್ ಜೋಡುಕಲ್ಲು, ಶಿವಕೃಷ್ಣ ನಿಡುವಜೆ ಹಾಗೂ ಗಣೇಶ್ ಭಟ್ ವಾರಣಾಸಿ ಸದಸ್ಯರಾಗಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ