||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಗುರೆಲೆ ಯುವ ದನಿ - 2022; ಚಿಗುರೆಲೆ ಸಾಹಿತ್ಯ ಬಳಗ ಉದ್ಘಾಟನೆ, ಕವಿಗೋಷ್ಠಿ

ಚಿಗುರೆಲೆ ಯುವ ದನಿ - 2022; ಚಿಗುರೆಲೆ ಸಾಹಿತ್ಯ ಬಳಗ ಉದ್ಘಾಟನೆ, ಕವಿಗೋಷ್ಠಿ

ಯುವ ಸಾಹಿತಿಗಳಿಗೆ ವೇದಿಕೆ ಕಲ್ಪಿಸುವುದು ಅಭಿನಂದನೀಯ: ಉಮೇಶ್ ನಾಯಕ್


ಪುತ್ತೂರು: ಯುವ ಸಾಹಿತಿಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ನೀಡುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶ. ಅದನ್ನು ಪುತ್ತೂರಿನಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಇಂದು ಕಾರ್ಯಗತಗೊಳಿಸಿದ್ದು ಉತ್ತಮ ವಿಚಾರ. ಅದಕ್ಕಾಗಿ ಈ ಬಳಗವನ್ನು ಅಭಿನಂದಿಸುತ್ತೇನೆ ಮತ್ತು ನಿರಂತರ ಈ ಬಳಗದ ಕಾರ್ಯಕ್ರಮಕ್ಕೆ ನಮ್ಮ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ವತಿಯಿಂದ ಸಂಪೂರ್ಣ ಸಹಕಾರವಿದೆ ಎಂದರು.


ಪುತ್ತೂರಿನ ಮಕ್ಕಳ ಮಂಟಪವು ಉತ್ತಮ ಪರಿಸರದಿಂದ ಕೂಡಿದ್ದು, ಚಿಗುರೆಲೆ ಸಾಹಿತ್ಯ ಬಳಗವು ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ವಿಚಾರವಾಗಿದೆ ಎಂದು ಎಂದು ದ.ಕ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು. ಅವರು ರವಿವಾರ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ವತಿಯಿಂದ ದರ್ಬೆ ಮಕ್ಕಳ ಮಂಟಪದಲ್ಲಿ ನಡೆದ ಚಿಗುರೆಲೆ ಸಾಹಿತ್ಯ ಬಳಗದ ಉದ್ಘಾಟನೆ ಹಾಗೂ 'ಚಿಗುರೆಲೆ ಯುವ ದನಿ-2022' ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ ಪೂಜಾರಿ ಬಿರಾವು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ವಿಜಯ ಹಾರ್ವಿನ್, ಮಕ್ಕಳ ಮಂಟಪದ ಸ್ಥಾಪಕ, ಶಿಕ್ಷಣ ಸಿದ್ಧಾಂತಿ ಡಾ. ಸುಕುಮಾರ ಗೌಡ ಮತ್ತು ನಟ, ಸಾಹಿತಿ ಭೀಮರಾವ್ ವಾಷ್ಠರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.


ಕವಿಗೋಷ್ಠಿ: 


ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕಿ ಹಾಗೂ ಯುವ ಸಾಹಿತಿ ವಿಂಧ್ಯಾ ಎಸ್. ರೈ ಮಾತನಾಡಿ, ಯುವ ಕವಿಗಳು ಆಧ್ಯಯನಶೀಲತೆಯುಳ್ಳ ಬರಹಗಳನ್ನು ಪರಿಚಯಿಸಬೇಕು. ಜತೆಗೆ ಓದುವ ರೂಢಿಯನ್ನು ಬೆಳಸಿಕೊಂಡಾಗ ಹೊಸ ಹೊಸ ಪದಗಳನ್ನು ಹೆಣೆಯಲು ಸಾಧ್ಯವಾಗುತ್ತದೆ. ಸಾಹಿತ್ಯ ಎಂಬುವುದು ಎಲ್ಲರಿಗೂ ದಕ್ಕುವುದಿಲ್ಲ, ಕಾವ್ಯ ಲಕ್ಷಣಗಳಿಗೆ ಅನುಗುಣವಾಗಿ ಕವಿಗಳಾಗುತ್ತಿರಿ ಎಂದರು.


ಕವಿಗಳ ಬರಹದ ಅನುಭವವು ವಾಚನದ ಮೂಲಕ ಬೇರೆಯವರಿಗೆ ಅನುಭಾವ ಆಗಬೇಕು ಹಾಗಿದ್ದರೆ ಮಾತ್ರ ಯಶಸ್ವಿ ಬರಹಗಾರರಾಗಿ ಮೂಡಿಬರಲು ಸಾಧ್ಯ ಎಂದರು. ಅವರು ಕವಿಗಳು ವಾಚಿಸಿದ ಎಲ್ಲಾ ಕವನ ಬಗ್ಗೆ ವಿಮರ್ಶಿಸಿ ಮಾತನಾಡಿದರು.


ಅನನ್ಯಾ ಎಚ್. ಸುಬ್ರಹ್ಮಣ್ಯ, ಶ್ರೇಯಾ ಪಿ.ಬಿ. ಕಡಬ, ಕೃಷ್ಣಪ್ಪ ಬಂಬಿಲ, ರಶ್ಮೀ ಸನಿಲ್, ವಿಖ್ಯಾತಿ ಬೆಜ್ಜಂಗಳ, ಶಶಿಧರ ಏಮಾಜೆ, ನವ್ಯಾ ಪ್ರಸಾದ್ ನೆಲ್ಯಾಡಿ, ವಿಭಾ ಭಟ್, ಸೌಮ್ಯಾ ಸಿ.ಡಿ. ಎಲಿಮಲೆ, ಪ್ರತೀಕ್ಷಾ ಕಾವು, ಚೈತ್ರಾ ಮಾಯಿಲಕೊಚ್ಚಿ, ಸುಜಯಾ ಮಣಿನಾಲ್ಕೂರು, ಪೂರ್ಣಿಮಾ ಪೆರ್ಲಂಪಾಡಿ, ಸಂದೀಪ್ ಎಸ್., ದೀಪ್ತಿ ಎ., ರಸಿಕಾ ಮುರುಳ್ಯ, ಅನ್ನಪೂರ್ಣ ಯನ್.ಕೆ., ಕಾವ್ಯ ಬಿ., ಸುಪ್ರೀತಾ ಚರಣ್ ಪಾಲಪ್ಪೆ ಕಡಬ, ಆನಂದ ರೈ ಅಡ್ಕಸ್ಥಳ, ಕಾವ್ಯಶ್ರೀ ಅಳಿಕೆ, ಸಂಜೀವ ಮಿತ್ತಳಿಕೆ, ಗೋಪಾಲಕೃಷ್ಣ ಶಾಸ್ತ್ರಿ, ಶ್ರೀಕಲಾ ಕಾರಂತ್, ಧನ್ವಿತಾ ಕಾರಂತ್, ಕವಿತಾ ಕುಮಾರಿ, ಮುಸ್ತಫ ಬೆಳ್ಳಾರೆ, ಅರ್ಚನಾ ಎಂ. ಬಂಗೇರ, ಶುಭ್ರ ಪುತ್ರಕಳ, ದಿವ್ಯಾ ಎಂ., ನಿರೀಕ್ಷಾ ಸಿ., ಸೌಮ್ಯಾ ಗೋಪಾಲ್, ಮೋಕ್ಷಿತಾ ಮತ್ತು ಕಾವ್ಯಶ್ರೀ ಸಿ. ಸ್ವರಚಿತ ಕವನ ವಾಚನ ಮಾಡಿದರು.


ಕವಿಗೋಷ್ಠಿಯಲ್ಲಿ ಸುಮಾರು 31 ಕವಿಗಳು ಭಾಗವಹಿಸಿದ್ದು ಜಿಲ್ಲೆಯ ವಿವಿಧ ಕಡೆಗಳಿಂದ ಹೆಚ್ಚಿನ ಯುವ ಕವಿಗಳು ಆಗಮಿಸಿರೋದು ವಿಶೇಷ ಆಕರ್ಷಣೆ ಎನಿಸಿತು.


ಚಿಗುರೆಲೆ ಸಾಹಿತ್ಯ ಬಳಗದ ನಿರ್ವಾಹಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಗದ ನಿರ್ವಾಹಕರಾದ ಚಂದ್ರಮೌಳಿ, ಪ್ರಜ್ಞಾ ಕುಲಾಲ್ ಕಾವು, ಇಬ್ರಾಹಿಂ ಖಲೀಲ್, ಅಪೂರ್ವ ಎನ್. ಕಾರಂತ್, ಅಖಿಲಾ ಶೆಟ್ಟಿ ವಿವಿಧ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರತೀಕ್ಷಾ ಕಾವು ಹಾಗೂ ಚೈತ್ರಾ ಮಾಯಿಲಕೊಚ್ಚಿ ಪ್ರಾರ್ಥಿಸಿದರು. ಸೌಜನ್ಯ ಬಿ.ಎಂ. ಕೆಯ್ಯೂರು ಸ್ವಾಗತಿಸಿ, ಕವಿಗೋಷ್ಠಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.


ಉಪತಹಶೀಲ್ದಾರ್‌ ಅವರಿಂದ ಕವನ ವಾಚನ:


ಕವಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಉಪತಹಶೀಲ್ದಾರ್ ಸುಲೋಚನಾರವರು ಸ್ವರಚಿತ ಕವನ ವಾಚಿಸುವ ಮೂಲಕ ಕಾರ್ಯಕ್ರಮ ಮತ್ತಷ್ಟು ಮೆರುಗು ನೀಡಿತು.


ಯುವದನಿ ಅದೃಷ್ಟವಂತ ಕವಿ - 2022:


ಕಾರ್ಯಕ್ರಮದ ಕೊನೆಗೆ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳ ಪೈಕಿ ಒಬ್ಬರನ್ನು `ಯುವದನಿ ಅದೃಷ್ಟವಂತ ಕವಿ - 2022’ ಅನ್ನು ಲಕ್ಕಿಡಿಪ್ ಚೀಟಿ ಎತ್ತುವ ಮೂಲಕ ಆಯ್ಕೆಗೊಳಿಸಲಾಯಿತು. ಈ ಬಾರಿಯ `ಯುವದನಿ ಅದೃಷ್ಟವಂತ ಕವಿ-2022’ ಯುವ ಕವಯತ್ರಿ ಚೈತ್ರಾ ಮಾಯಿಲಕೊಚ್ಚಿರವರು ಪಡೆದುಕೊಂಡರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post