ಮಾ.26 ರಂದು ಮೈಸೂರಿನಲ್ಲಿ ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ

Upayuktha
0

ಮೈಸೂರು: ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ರವರ 83ನೇ ಜಯಂತಿ ಅಂಗವಾಗಿ ಮೈಸೂರಿನ ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿ ಮಾ.26 ರಂದು ಬೆಳಿಗ್ಗೆ 11.00 ಗಂಟೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ “ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ” ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಿದೆ.


ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ರವರು ಕಾರ್ಯಕ್ರಮ ಉಧ್ಘಾಟಿಸಲಿದ್ದು, ಸಾಂಸ್ಕೃತಿಕ ಚಿಂತಕ ಹಾಗು ಶ್ರೀವಾಸುದೇವ ಮಹಾರಾಜ್ ಫೌಂಡೇಷನ್ ಅಧ್ಯಕ್ಷ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರು ಪ್ರಾಸ್ತಾವಿಕ ನುಡಿಗಳನ್ನಾಡುವರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ನಿರ್ವಾಣ ಯೋಗಶಾಲೆ ಸಂಸ್ಥಾಪಕ ಡಾ.ಟಿ.ಎನ್ ಶಶಿಕುಮಾರ್ ಸಾಧಕರನ್ನು ಸನ್ಮಾನಿಸುವರು. ಹಿರಿಯ ಸಮಾಜ ಸೇವಕ  ಡಾ.ಕೆ ರಘುರಾಮ ವಾಜಪೇಯಿ ಹಾಗು ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ ಕುಮಾರ್ ಕರ‍್ಯಕ್ರಮದಲ್ಲಿ ಉಪಸ್ಥಿತರಿರುವರು.


ವಿವಿಧ ಕ್ಷೇತ್ರದ ಗಣ್ಯ ಸಾಧಕರಾದ ಶಾಸನ ಸಂಶೋಧನೆಗಾಗಿ ಫಿಲಿಯೋಜಾ ಮತ್ತು ವಸುಂಧರಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ; ಸಮಾಜ ಸೇವೆ - ಸಂಘಟನೆಗಾಗಿ ಬೆಂಗಳೂರಿನ ಎಂ.ಬಸವರಾಜು; ರಂಗಭೂಮಿ – ಡಾ.ಲೀಲಾ ಬಸವರಾಜು; ಯೋಗ - ಡಾ.ಪಿ.ಎನ್. ಗಣೇಶ ಕುಮಾರ್, ರಾಜಕೀಯ - ಸಮಾಜ ಸೇವೆ ಕೆ.ಪಿ.ಯೋಗೇಶ್ ರವರಿಗೆ “ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಆಯೋಜಕರಾದ ವಾಸುದೇವ ಮಹಾರಾಜ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಂ.ವಿ. ನಾಗೇಂದ್ರ ಬಾಬು -ಸಂಚಾಲಕರಾದ ಎನ್.ಅನಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ : 9035618076


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top