ಆಳ್ವಾಸ್ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಬರವಣಿಗೆಯ ಕಾರ್ಯಗಾರ

Upayuktha
0

 

ಮಿಜಾರು ಫೆ.10: ಆಳ್ವಾಸ್ ಪದವಿ ಪತ್ರಿಕೋದ್ಯಮ ವಿಭಾಗದಿಂದ Write- right ಕಾರ್ಯಗಾರವನ್ನು ಮಿಜಾರು ಶೋಭಾವನದಲ್ಲಿ ನಡೆಸಲಾಯಿತು. ದುಬೈ ಮೂಲದ ಕಾನೂನು ಆಧಾರಿತ ಜಾಲತಾಣದ ಲಾ ರಿಪೋರ್ಟರ್ಸ್ ನ ಮುಖ್ಯ ಸಂಪಾದಕರು ಶ್ರೀನಿವಾಸನ್ ನಂದಗೋಪಾಲ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ, ಸಾಮರ್ಥ್ಯ, ಬರವಣಿಗೆಯ ಕುರಿತು ವಿಶೇಷ ರೀತಿಯಲ್ಲಿ ಚಟುವಟಿಕೆಯ ಮೂಲಕ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ಮಾತುಗಾರಿಕೆ, ಕೇಳುವಿಕೆ ಮತ್ತು ಗ್ರಹಿಸುವಿಕೆ ಬರವಣಿಗೆಯಲ್ಲಿ ಬಹಳ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಕ್ರಿಯಾಶೀಲಾತ್ಮಕ ಬರವಣಿಗೆಯ ಮಹತ್ವ ಮತ್ತು ಬರೆಯುವ ರೀತಿಯನ್ನು ತಿಳಿಸಿಕೊಟ್ಟರು. ಪ್ರತಿಯೊಬ್ಬರಲ್ಲಿಯೂ ಬರವಣಿಗೆಯ ಕಲೆ ಅಡಗಿರುತ್ತದೆ. ಆ ಸುಪ್ತ ಪ್ರತಿಭೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ಸೂಕ್ಷ್ಮ ರೀತಿಯಲ್ಲಿ ಹಾಗೂ ಬಹಳ ಸುಂದರವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.


ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್, ಉಪನ್ಯಾಸಕಿ ರಕ್ಷಿತಾ ಕುಮಾರಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಗಾರವನ್ನು ಪವಿತ್ರ ಸ್ವಾಗತಿಸಿದರು. ರುಧೀರ್ ವಂದಿಸಿ, ಪ್ರಿಯಾಂಕಾ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top