ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‌ಶೇರ್ ಇವರು ಘಟಕಾಧಿಕಾರಿಯಾಗಿದ್ದು ಗೃಹರಕ್ಷಕದಳದಲ್ಲಿ ದಿನಾಂಕ 01-03-1999 ರಂದು ಸೇವೆಗೆ ಸೇರಿದ್ದರು. ಸುಮಾರು 23 ವರ್ಷಗಳಿಂದ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೇಂದ್ರ ಕಛೇರಿಯಿಂದ ಲೀಡರ್ ಶಿಪ್ ತರಬೇತಿ, ರೈಫಲ್ ತರಬೇತಿ, ನಿಸ್ತಂತು ಚಾಲನ ತರಬೇತಿಗಳನ್ನು ಪಡೆದಿರುತ್ತಾರೆ.
ಇವರು ಅಗ್ನಿಶಾಮಕ ಇಲಾಖೆ, ಪ್ರವಾಹ ರಕ್ಷಣಾ ತಂಡ, ಬಂದೋಬಸ್ತ್ ಕರ್ತವ್ಯ, ಚುನಾವಣೆ ಕರ್ತವ್ಯ, ಪೊಲೀಸ್ ಠಾಣೆಗಳಲ್ಲಿ ಸೇವಾ ಹಿರಿತನ ಮತ್ತು ದಕ್ಷತೆಯನ್ನು ಆಧರಿಸಿ ಸೇವೆ ಸಲ್ಲಿಸಿರುತ್ತಾರೆ. ಇವರ ಈ ಸೇವೆಗೆ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರ ಶಿಫಾರಸ್ಸಿನ ಮೇರೆಗೆ ಕೇಂದ್ರ ಕಛೇರಿಯಿಂದ ದೊರೆತ ಸೀನಿಯರ್ ಫ್ಲಟೂನ್ ಕಮಾಂಡರ್ ಹುದ್ದೆಯ ಪದೋನ್ನತಿ ಪ್ರಮಾಣ ಪತ್ರವನ್ನು ದಿನಾಂಕ : 03-02-2022ನೇ ಗುರುವಾರದಂದು ಹಸ್ತಾಂತರಿಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹರಕ್ಷಕದಳ 1963ನೇ ಇಸವಿಯಲ್ಲಿ ಆರಂಭವಾಯಿತು, ಗೃಹರಕ್ಷಕರು ಪೊಲೀಸ್ ಇಲಾಖೆಯ ಜೊತೆ ಸೇರಿಕೊಂಡು ಜಿಲ್ಲಾಡಳಿತದ ಜೊತೆ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 40 ಗೃಹರಕ್ಷಕರಿಂದ ಆರಂಭವಾದ ಗೃಹರಕ್ಷಕದಳದ ಮಂಗಳೂರು ಘಟಕ ಇವತ್ತು 165 ಗೃಹರಕ್ಷಕರನ್ನು ಹೊಂದಿದೆ. ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ಮಾರ್ಕ್‌ಶೇರ್ ಅವರು 1999 ರಂದು ಗೃಹರಕ್ಷಕದಳ ಸಂಸ್ಥೆಗೆ ಸೇರಿ ಸುಮಾರು 23 ವರ್ಷಗಳ ಕಾಲ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರಂಭದಲ್ಲಿ ಗೃಹರಕ್ಷಕರಾಗಿದ್ದು, ನಂತರ ಪದೋನ್ನತಿ ಹೊಂದಿ ಪ್ಲಟೂನ್ ಕಮಾಂಡರ್ ಆಗಿ ಮಂಗಳೂರು ಘಟಕವನ್ನು ನಡೆಸಿರುತ್ತಾರೆ. ಇದೀಗ ಪ್ಲಟೂನ್ ಕಮಾಂಡರ್ ಹುದ್ದೆಯಿಂದ ಸೀನಿಯರ್ ಪ್ಲಟೂನ್ ಕಮಾಂಡರ್ ಆಗಿ ಬಡ್ತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕವು ಇನ್ನಷ್ಟು ಸಮಾಜ ಮುಖಿ ಕೆಲಸ ಮಾಡಿ ಗೃಹರಕ್ಷಕದಳ ಇಲಾಖೆಯ ಘನತೆ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಕೆಲಸವನ್ನು ಮಾಡಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿಯಾದ ಮಾರ್ಕ್‌ಶೇರ್ ಅವರು ಮಾತನಾಡಿ ನಾನು ಗೃಹರಕ್ಷಕದಳ ಇಲಾಖೆಯಲ್ಲಿ ಸುಮಾರು 23 ವರ್ಷಗಳಿಂದ ಸೇವೆ ಸಲ್ಲಿಸಿರುತ್ತೇನೆ. ಈ ಸೇವೆಯನ್ನು ಗುರುತಿಸಿ ಕೇಂದ್ರ ಕಛೇರಿಯ ಶಿಫಾರಸಿನ ಮೇರೆಗೆ ನನ್ನನ್ನು ಘಟಕಾಧಿಕಾರಿ ಹುದ್ದೆಯಿಂದ ಸೀನಿಯರ್ ಪ್ಲಟೂನ್ ಕಮಾಂಡರ್ ಹುದ್ದೆಗೆ ಮುಂಬಡ್ತಿ ನೀಡಿರುತ್ತಾರೆ. ಇದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್ ಅವರು ಮಾತನಾಡಿ ಮಾರ್ಕ್ಶೇರಾ ಅವರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದಲಾಯತ್ ಮೀನಾಕ್ಷಿ, ಮಂಗಳೂರು ಘಟಕದ ಸಾರ್ಜೆಂಟ್ ಸುನೀಲ್ ಕುಮಾರ್ ಪಿ, ಗೃಹರಕ್ಷಕರಾದ ಸತೀಶ್ ಕೆ.ಪಿ, ದಿವಾಕರ್, ದುಷ್ಯಂತ್, ಸುಲೋಚನ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ