ವಿವಿ ಕಾಲೇಜು: ಹಿಂದಿ ಪಠ್ಯಕ್ರಮ ಕುರಿತು ಕಾರ್ಯಾಗಾರ ಸಂಪನ್ನ

Upayuktha
0

 

ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗ ಮತ್ತು ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘದ ಜಂಟಿ ಸಹಯೋಗದಲ್ಲಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಇತ್ತೀಚೆಗೆ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳ ಎನ್‌ಇಪಿ ಪಠ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.


ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಹಿಂದಿ ಪ್ರಾಧ್ಯಾಪಿಕೆ, ರಾಜ್ಯ ಮಟ್ಟದ ಹಿಂದಿ ಅಧ್ಯಯನ ಮಂಡಳಿಯ ಮುಖ್ಯಸ್ಥೆಯೂ ಆಗಿದ್ದ ಪ್ರೊ. ಪ್ರತಿಭಾ ಮುದಲಿಯಾರ್‌, ನೂತನ ಪಠ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಅಲ್ಲದೆ, ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಭಾಷೆ ಮತ್ತು ಸಾಹಿತ್ಯವನ್ನು ಓದುವುದರ ಅಗತ್ಯತೆಯನ್ನು ಒತ್ತಿ ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ರಾಷ್ಟ್ರ ಮಟ್ಟದಲ್ಲಿ ಹಿಂದಿಗಿರುವ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಪಠ್ಯಕ್ರಮ ರಚಿಸಿದ ಸಮಿತಿಯ ಅಧ್ಯಯನ ಮಂಡಳಿಯ ಮುಖ್ಯಸ್ಥರಾಗಿದ್ದ ಡಾ. ಸುಮಾ ಟಿ ಆರ್‌ ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿದರು. ಹಿಂದಿ ಪದವಿ ವಿಭಾಗದ ಮುಖ್ಯಸ್ಥೆ, ಮಂಗಳೂರು ವಿವಿ ಮಟ್ಟದ ಹಿಂದಿ ಅಧ್ಯಯನ ಮಂಡಳಿಯ (ಪದವಿ ಮತ್ತು ಸ್ನಾತಕೋತ್ತರ) ಮುಖ್ಯಸ್ಥೆ ಡಾ. ನಾಗರತ್ನಾ ಎನ್‌. ರಾವ್ ಅತಿಥಿಗಳನ್ನು ಸ್ವಾಗತಿಸಿದರು.


ಐಕಳದ ಪೊಂಪೈ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ, ಹಿಂದಿ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಡಾ. ಮಂಜುನಾಥ ಎಸ್‌ ಎ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಪ್ರಾಧ್ಯಾಪಿಕೆ ಡಾ. ನಾಗರತ್ನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಠ್ಯಕ್ರಮ, ಪ್ರಶ್ನಾವಳಿ ಕುರಿತು ಚರ್ಚೆ ನಡೆಸಿ ಅಂತಿಮಗೊಳಿಸಲಾಯಿತು.


ಸಂಘದ ಪದಾಧಿಕಾರಿಗಳ ಆಯ್ಕೆ:


ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘದ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಕೆನರಾ ಕಾಲೇಜಿನ ಡಾ. ಕಲ್ಪನಾ ಪ್ರಭು ಅಧ್ಯಕ್ಷೆಯಾಗಿ, ವಿವಿ ಕಾಲೇಜಿನ ಡಾ. ಸುಮಾ ಟಿ ಆರ್‌ ಉಪಾಧ್ಯಕ್ಷೆಯಾಗಿ, ಕುಂದಾಪುರದ ಭಂಡಾರ್ಕರ್ಸ್‌ ಕಾಲೇಜಿನ ಪ್ರಫುಲ್ಲಾ ಕಾರ್ಯದರ್ಶಿಯಾಗಿ, ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಜೊತೆ ಕಾರ್ಯದರ್ಶಿಯಾಗಿ ಹಾಗೂ ಮೂಡಬಿದ್ರೆಯ ಆಳ್ವಾಸ್‌ ಕಾಲೇಜಿನ ಡಾ. ರಾಜೀವ ಖಜಾಂಜಿಯಾಗಿ ಆಯ್ಕೆಯಾದರು. ಕಟೀಲಿನ ಎಸ್‌ಡಿಪಿಟಿ ಕಾಲೇಜಿನ ಡಾ. ಸುನೀತಾ ಬಿ ಹೆಚ್‌, ಶಿರ್ವದ ಸೈಂಟ್‌ ಮೇರೀಸ್‌ ಕಾಲೇಜಿನ ಡಾ. ವಿಠ್ಠಲ ನಾಯಕ್‌, ವಿವೇಕಾನಂದ ಕಾಲೇಜಿನ ಡಾ. ದುರ್ಗಾರತ್ನಾ, ಎಸ್‌ಡಿಎಂ ಕಾಲೇಜಿನ ಡಾ. ಜ್ಯೋತಿ, ಸೈಂಟ್‌ ಫಿಲೋಮಿನಾ ಕಾಲೇಜಿನ ಡಾ.ಡಿಂಪಲ್‌ ಪದಾಧಿಕಾರಿಗಳಾಗಿ ಆಯ್ಕೆಯಾದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top