'ಸಮ್ಮಿಲನ'ದಿಂದ ಪ್ರೇಮ ಕವಿಗೋಷ್ಠಿ; ಪ್ರೇಮ ಗೀತಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Upayuktha
0

 

ಶೇಷಾದ್ರಿಪುರಂ: ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆ 'ಸಮ್ಮಿಲನ' ವತಿಯಿಂದ 252ನೇ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 13, ಭಾನುವಾರ ನಗರದ ಶೇಷಾದ್ರಿಪುರ ಅಂಚೆ ಕಚೇರಿ ಪಕ್ಕದ ಕೆನ್ ಕಲಾ ಶಾಲೆಯಲ್ಲಿ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸಮಾರಂಭದಲ್ಲಿ ಕನ್ನಡ ಪುಸ್ತಕ ಪರಿಚಾರಕ, ಸಮ್ಮಿಲನ ಸಂಸ್ಥಾಪಕ ಕುವರ ಯಲ್ಲಪ್ಪರವರು  ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ 'ಶಾರದಾ ಸುಪುತ್ರ ಪ್ರಶಸ್ತಿ' ಹಾಗು ಕಲಾವಿದ ಕೆ.ಜಿ.ಸಂಪತ್ ಕುಮಾರ್ ರವರಿಗೆ 'ಗಾಯಕ ಎಸ್.ಯಲ್ಲಪ್ಪ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಿದರು.


ಖ್ಯಾತ ಕವಿ ಕತೆಗಾರ ಜಯಶಂಕರ್ ಪ್ರಕಾಶ್ ಬೆಮೆಲ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅಪರಿಮಿತ ಜೀವನೋತ್ಸಾಹವಿರುವ ಹಿರಿಯ ಚೇತನಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಿ, ಭಾವನೆಗಳಿಗೆ ಅಕ್ಷರ ರೂಪಕೊಟ್ಟು, ಸಾಮಾಜಿಕ ಸ್ಥಿತ್ಯಂತರಗಳಿಗೆ ದನಿಯಾದ ವಿಶಿಷ್ಠ ಕಾರ್ಯಕ್ರಮದಲ್ಲಿ ಹಳೆಬೇರು ಹೊಸಚಿಗರು ಎಂಬಂತೆ ಸಾಧಕರನ್ನು ಗೌರವಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.


ಹಿರಿಯ ಸಾಹಿತಿ - ಗಾಯಕ ಟಿ.ಕೆ.ವೆಂಕಟರಾಮ್ ಭಾರತಿ, ಕವಿಯತ್ರಿ ಹಾ.ವಿ.ಮಂಜುಳಾ ಶಿವಾನಂದ, ಪ್ರಭಾಕರ ಗಂಗೋಳ್ಳಿ, ಗುಡಿಬಂಡೆ ಮಧುಸೂಧನ ಇನ್ನಿತರ 30ಕ್ಕೂ ಅಧಿಕ ಸಾಹಿತ್ಯಾಸಕ್ತರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top