ಎಸ್.ಡಿ.ಎಂ ಕಾಲೇಜು: ಆಹಾರ ಮೇಳ ಸಂಭ್ರಮ

Upayuktha
0

 

ಕಲಿಕೆಯ ಜ್ಞಾನಕ್ಕೆ ಹೆಣ್ಣು ಗಂಡೆಂಬ ತಾರತಮ್ಯವಿಲ್ಲ: ಡಾ. ಡಾ. ಸಲೀಪ್ ಕುಮಾರಿ


ಉಜಿರೆ: ಜೀವನ ವಿಜ್ಞಾನ ಪ್ರತಿಯೊಬ್ಬರ ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳಲು ದಿನನಿತ್ಯದ ಚಟುವಟಿಕೆಗಳನ್ನು ಶಿಸ್ತು ಮತ್ತು ಕ್ರಮಬದ್ಧವಾಗಿ ನಿರ್ವಹಿಸಲು ಸಹಕಾರಿಯಾಗಿದೆ ಎಂದು ಶ್ರೀ.ಧ.ಮ.ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಲೀಪ್ ಕುಮಾರಿ ಅಭಿಪ್ರಾಯಪಟ್ಟರು.


ಇವರು ಇತ್ತೀಚಿಗೆ ನಡೆದ ಉಜಿರೆಯ ಶ್ರೀ.ಧ.ಮ. ಪದವಿ ಕಾಲೇಜಿನ ಗೃಹ ವಿಜ್ಞಾನ ವಿಭಾಗ ಏರ್ಪಡಿಸಿದ್ದ ಆಹಾರಮೇಳ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆಯ ಜ್ಞಾನಕ್ಕೆ ಹೆಣ್ಣು - ಗಂಡೆಂಬ ತಾರತಮ್ಯವಿಲ್ಲ. ಅಡುಗೆ ತಯಾರಿಸುವಿಕೆ, ಮನೆ ನಿರ್ವಹಿಸುವಿಕೆ ಪ್ರತಿಯೊಬ್ಬರೂ ಕಲಿತುಕೊಳ್ಳಬೇಕು. ಅಡುಗೆಮನೆ ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯಚಂದ್ರ ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಜೀವನ ಪಾಠ ಇಂದು ವಿಭಾಗವಾಗಿ ಬೋಧಿಸುವ ಅಧ್ಯಾಯವಾಗಿ ಮಾರ್ಪಟ್ಟಿದೆ. ದೇಶಿಯ ಆಹಾರಗಳ ಮಹತ್ವ ಅರಿತುಕೊಳ್ಳಬೇಕು ಎಂದು ನುಡಿದರು.


ಕಾರ‍್ಯಕ್ರಮದಲ್ಲಿ ಸ್ವತಃ ವಿದ್ಯಾರ್ಥಿಗಳು ತಯಾರಿಸಿದ ನಾನಾ ರೀತಿಯ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ವ್ಯವಹಾರ ಶೈಲಿಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಯಿತು.


ಕಾರ‍್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವೇದಿಕೆಯಲ್ಲಿ ಗೃಹ ವಿಜ್ಞಾನ ವಿಭಾಗ ಮುಖ್ಯಸ್ಥೆಯಾದ ಸಹಪ್ರಾಧ್ಯಾಪಕಿ ಶೋಭಾ ಹಾಗೂ ಕಾಲೇಜಿನ ಅಕೌಂಟ್ಸ್ ಸೂಪರಿಡೆಂಟ್ ಯುವರಾಜ್ ಪೂವಣೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪ ನಿರೂಪಿಸಿ, ಲಾವಣ್ಯ ಸ್ವಾಗತಿಸಿದರು. ತೃಪ್ತಿ ವಂದಿಸಿದರು.


ವರದಿ: ಅರವಿಂದ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top