ಗೋವು ಆಧರಿತ ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರ: ಫೆ.27ರಂದು ಪುತ್ತೂರಿನಲ್ಲಿ

Upayuktha
0

ಪುತ್ತೂರು: ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್‌ ನೇತೃತ್ವದಲ್ಲಿ 'ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು' - ಗೋವು ಆಧರಿತ ಉತ್ಪನ್ನಗಳ ತಯಾರಿಕಾ ತರಬೇತಿ ಕಾರ್ಯಾಗಾರವು ಫೆ.27ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಪುತ್ತೂರಿನ ಕಬಕ ಸಮೀಪದ ಓಜಾಲದಲ್ಲಿರುವ ಮುಳಿಯ ಗೋವಿಹಾರದಲ್ಲಿ ನಡೆಯಲಿದೆ.


ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಗೋಫಲ ಟ್ರಸ್ಟ್‌ನ ಟ್ರಸ್ಟಿ ಕೇಶವ ಪ್ರಸಾದ್ ಮುಳಿಯ ಅವರು ದೀಪೋಜ್ವಲನದ ಮೂಲಕ ಉದ್ಘಾಟಿಸಲಿದ್ದಾರೆ. ಗೋಫಲ ಟ್ರಸ್ಟ್‌ನ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್‌ ಅಧ್ಯಕ್ಷತೆವಹಿಸಲಿದ್ದಾರೆ.


ಗವ್ಯೋತ್ಪನ್ನ ತಯಾರಿಕೆ ಶಿಬಿರವು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಜರುಗಲಿದೆ. ಆಸಕ್ತ ಪುರುಷರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರಾರ್ಥಿಗಳು ಬರುವಾಗ ಪೆನ್ನು ಮತ್ತು ಪುಸ್ತಕ ತರುವಂತೆ ಕೋರಲಾಗಿದೆ. ಅಲ್ಲದೆ ಒಂದು ದಿನದ ಊಟ, ಉಪಾಹಾರ, ಪಾನೀಯ ಮತ್ತಿತರ ಖರ್ಚುಗಳಿಗಾಗಿ 100 ರೂ ಶುಲ್ಕ ನಿಗದಿಪಡಿಸಲಾಗಿದೆ.


ಗೋವಿನಿಂದಾಗಿ ಮನುಷ್ಯರಿಗೆ ದಿನನಿತ್ಯ ಬಳಕೆಯಾಗುವ ದಂತಮಂಜನ್, ಸೋಪು, ದೂಪಬತ್ತಿ, ಅಮೃತ್ ಮಲಂ ಅಲ್ಲದೆ ಇತರ ಸೌಂದರ್ಯ ವರ್ಧಕ ಸಾಮಗ್ರಿಗಳು, ಕೃಷಿ ಭೂಮಿಗೆ ಬೇಕಾಗುವ ಜೀವಾಮೃತ, ಕೀಟ ನಿಯಂತ್ರಕ, ಜೀವಾಮೃತ ಔಷಧಿಗಳನ್ನು ತಯಾರಿಸುವ ವಿಧಾನವನ್ನು ಈ ಶಿಬಿರದಲ್ಲಿ ಕಲಿಸಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಆಸಕ್ತ ಶಿಬಿರಾರ್ಥಿಗಳು ಮುಂದೆ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ 100 ರೂ ಶುಲ್ಕವನ್ನು ಪಾವತಿಸಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ. (ಮೊಬೈಲ್ ಸಂಖ್ಯೆ: 90089 28684)


ಗೋಸೇವಾ ಗತಿವಿಧಿ, ಮಂಗಳೂರು ವಿಭಾಗ ಹಾಗೂ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಪುತ್ತೂರು ಘಟಕಗಳು ಈ ಕಾರ್ಯಕ್ರಮವನ್ನು ಸಂಯೋಜಿಸಿವೆ.


ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ- ಗೋಸೇವಾ ಗತಿವಿಧಿ, ಗೋ ಉತ್ಪನ್ನ ತಯಾರಿ ಆಯಾಮ ವಿಷಯದ ಪ್ರಾಂತ ಪ್ರಮುಖರಾದ ಉಮೇಶ್ ಕುಲಕರ್ಣಿ, ಡಿಸಿಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಎಂ. ಯದುಕುಮಾರ್‌, ನಿವೃತ್ತ ಉಪನ್ಯಾಸಕ ಹಾಗೂ ಗೋ ಆಧರಿತ ಕೃಷಿಕರಾದ ಉದಯಶಂಕರ, ಗೋಉತ್ಪನ್ನಗಳ ತಯಾರಕರಾದ ಕೆ.ಟಿ ವೆಂಕಟೇಶ್, ಸ್ವರ್ಗಸಾರ ಗೋ ಉತ್ಪನ್ನಗಳ ತಯಾರಕರಾದ ಭಾಸ್ಕರ್‌ ರಾವ್ ಉಬರಡ್ಕ, ಹೈನುಗಾರಿಕಾ ಕೃಷಿಕರಾದ ಜಯಗುರು ಆಚಾರ್ಯ ಹಿಂದಾರು ಅವರು ಪಾಲ್ಗೊಳ್ಳಲಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free website counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top