ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಇಂತಹ ಒಂದು ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವ ಭಾಗವತರು ಸುರೇಶ್ ಶೆಟ್ಟಿ ಶಂಕರನಾರಾಯಣ.
೧೭.೦೨.೧೯೬೭ ರಂದು ಶಿವರಾಂ ಶೆಟ್ಟಿ ಹಾಗೂ ಕುಸುಮಾವತಿ ಇವರ ಮಗನಾಗಿ ಜನನ. ಶಾಲಾ ದಿನಗಳಲ್ಲಿ ಯಕ್ಷಗಾನ ವೇಷವನ್ನು ಮಾಡುತ್ತಿದ್ದರು ಹಾಗೂ ಮನೆಯಲ್ಲಿ ಎಲ್ಲರಿಗೂ ಯಕ್ಷಗಾನದ ಆಸಕ್ತಿ ಇದ್ದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ.
ಯಕ್ಷಗಾನ ಕ್ಷೇತ್ರಕ್ಕೆ ಮಹೋನ್ನತ ತಾರೆಗಳನ್ನು ನೀಡಿದ ಉಡುಪಿ ಯಕ್ಷಗಾನ ಕೇಂದ್ರ ಸೇರಿದ ಶೆಟ್ಟಿ ಅವರು ನೀಲಾವರ ರಾಮ ಕೃಷ್ಣಯ್ಯ, ಮಹಾಬಲ ಕಾರಂತ, ಹೇರಂಜಾಲು ವೆಂಕಟರಮಣ ಗಾಣಿಗ ಇವರಿಂದ ೧ ವರ್ಷ ತಾಳ, ನಾಟ್ಯ, ವೇಷ ಪ್ರಸಂಗದ ಬಗ್ಗೆ ಅಭ್ಯಾಸ. ನಂತರ ಐರೋಡಿ ಸದಾನಂದ ಹೆಬ್ಬಾರರ ನಿರ್ದೇಶನದಲ್ಲಿ ಕೆ.ಪಿ. ಹೆಗಡೆಯವರಲ್ಲಿ ಭಾಗವತಿಕೆ ಅಭ್ಯಾಸ. ನಂತರ ಕ್ರಮವಾಗಿ ಕಮಲಶಿಲೆ ಮೇಳ ೨ ವರ್ಷ, ಸಾಲಿಗ್ರಾಮ ೨ ವರ್ಷ, ಹಾಲಾಡಿ ೧ ವರ್ಷ ಹಾಗೂ ಪೆರ್ಡೂರು ಮೇಳದಲ್ಲಿ ೨೦ ವರ್ಷ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿ ಅನೇಕ ದಿಗ್ಗಜ ಕಲಾವಿದರ ಒಡನಾಟ ಇವರಿಗೆ ದಕ್ಕಿದೆ. ಪ್ರಸ್ತುತ ೧೨ ವರ್ಷದಿಂದ ಅತಿಥಿ ಕಲಾವಿದನಾಗಿ ತಿರುಗಾಟ ಮಾಡುತ್ತಿದ್ದಾರೆ ಸುರೇಶ್ ಶೆಟ್ಟಿ.
ಅಭಿಮನ್ಯು ಕಾಳಗ, ಶನೀಶ್ವರ ಮಹಾತ್ಮೆ, ಶಶಿಪ್ರಭಾ ಪರಿಣಯ ಹಾಗೂ ಹಳೆಯ ಹಾಗೂ ಹೊಸತು ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ದುರ್ಗಪ್ಪ ಗುಡಿಗಾರ್, ಗುಣವಂತೆ ಗಜಾನನ ದೇವಾಡಿಗ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು ಹಾಗೂ ಎಲ್ಲರು ನೆಚ್ಚಿನವರು ಎಂದು ಹೇಳುತ್ತಾರೆ.
ದಿ ಕಾಳಿಂಗ ನಾವಡ ಇವರ ನೆಚ್ಚಿನ ಭಾಗವತರು ಹಾಗೂ ನಾವಡರು ಸುರೇಶ್ ಶೆಟ್ಟಿ ಅವರ ತಂದೆಯ ಆತ್ಮೀಯರು ಹಾಗೂ ಫ್ಯಾಮಿಲಿ ಫ್ರೆಂಡ್ ಎಂದು ಹೇಳುತ್ತಾರೆ ಶೆಟ್ಟಿ ಅವರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ, ಯಕ್ಷಗಾನ ಪ್ರೇಕ್ಷಕರ ಹಾಗೂ ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದ ಇಂದಿನ ಸ್ಥಿತಿ ಚೆನ್ನಾಗಿದೆ, ಬದಲಾವಣೆ ಅನಿವಾರ್ಯ ಮೂಲ. ಸ್ವರೂಪಕ್ಕೆ ಧಕ್ಕೆ ಆಗದಿದ್ದರೆ ಒಳ್ಳೆಯದು.
ಯಕ್ಷಗಾನ ಪ್ರೇಕ್ಷಕರು ಯಾವುದು ಬೇಕಾದರೂ ಸ್ವೀಕರಿಸಬಹುದು what's up, face book ಪ್ರಪಂಚ ಏನು ಹೇಳಿಕ್ಕಲ್ಲಿ.
ಸದ್ಯ ಅತಿಥಿ ಕಲಾವಿದನಾಗಿ ಯಕ್ಷಗಾನ ರಂಗದಲ್ಲಿ ಮುಂದುವರೆಯುತ್ತೇನೆ, ಮತ್ತೆ ನೋಡಬೇಕಿದೆ ಎಂದು ಹೇಳುತ್ತಾರೆ ಸುರೇಶ್ ಶೆಟ್ಟಿ.
ಇವರ ಪ್ರತಿಭೆಯನ್ನು ನೋಡಿ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಓದುವುದು, ಯಕ್ಷಗಾನ ಪದ್ಯ ಕೇಳುವುದು, ಹಿಂದುಸ್ಥಾನಿ ಪದ್ಯ ಕೇಳುವುದು ಇವರ ಹವ್ಯಾಸಗಳು.
೦೧.೦೬.೨೦೦೧ ರಂದು ಶ್ರಂಗಾರಿ ಅವರನ್ನು ವಿವಾಹವಾಗಿ ಚಿರಾಗ್ ಹಾಗೂ ವಿಪುಲ್ ಇಬ್ಬರು ಗಂಡು ಮಕ್ಕಳ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ