ಆಳ್ವಾಸ್ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ

Upayuktha
0

 

ಮೂಡುಬಿದಿರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2021-22ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಸ್ನಾತಕ (ಯುಜಿ) ಶಿಕ್ಷಣ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ (ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್), ಬಿ.ಎಡ್ (ಸಿಇಟಿ ಪರೀಕ್ಷೆ ಮುಖಾಂತರ), ಬಿ.ಎಸ್‌ಸಿ (ಸಂಯೋಜನೆಗಳು), ಬಿ.ಎಸ್ಸಿ - ಹೋಮ್ ಸೈನ್ಸ್, ಬಿ.ಎಸ್‌ಸಿ -ಇನ್‌ಫರ್‌ಮೇಷನ್ ಟೆಕ್ನಾಲಜಿ (ಬಿ.ಎಸ್ಸಿ-ಐಟಿ), ಬಿ.ಸಿ.ಎ-ಬ್ಯಾಚುಲರ್ ಆಫ್ ಕಂಪ್ಯೂಟರ್ ಆಫ್ಲಿಕೇಷನ್ಸ್ ಹಾಗೂ ಸ್ನಾತಕೋತ್ತರ (ಪಿಜಿ) ಶಿಕ್ಷಣ ಕೋರ್ಸ್ ಗಳಾದ ಎಂ.ಎ (ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಉರ್ದು, ಸಂಸ್ಕೃತ, ಶಿಕ್ಷಣ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಬಿ.ಎ-(ಪ್ರವೇಶ ಪರೀಕ್ಷೆ ಇರುವುದಿಲ್ಲ) (ಸ್ಪೆಷಲೈಜೇಷನ್: ಫೈನಾನ್ಸ್ , ಮಾರ್ಕೆಂಟಿಂಗ್, ಹೆಚ್‌ಆರ್‌ಎಂ, ಆಫರೇಷನ್ಸ್, ಟೂರಿಸಂ,ಕಾರ್ಪುರೇಟ್ ಲಾ, ಇನ್‌ಫರ್‌ಮೇಷನ್ ಟೆಕ್ನಾಲಜಿ ಕೋರ್ಸ್ಗಳು ಲಭ್ಯವಿದೆ.


ಹಾಗೆಯೇ ಎಂ.ಕಾಂ –ಡ್ಯುಯೆಲ್ ಸ್ಪೆಷಲೈಜೇಷನ್ : (ಅಂಟಿಂಗ್ ಮತ್ತು ಫೈನಾನ್ಸ್ /ಹೆಚ್‌ಆರ್‌ಎಂ, ಮಾರ್ಕೆಂಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಹೆಚ್‌ಆರ್‌ಎಂ/ಫೈನಾನ್ಸ್, ಎಂ.ಲಿಬ್.ಐ.ಎಸ್.ಸಿ, ಎಂ.ಎಸ್.ಸಿ (ರಸಾಯನಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ & ಡಯೆಟೆಟಿಕ್ಸ್, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಞಾನ , ಭೂಗೋಳ ಶಾಸ್ತ್ರ, ಮೈಕ್ರೋ ಬಯಾಲಜಿ, ಮನಃಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಫುಡ್ & ನ್ಯೂಟ್ರಿಷನ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಅಲ್ಲದೆ ಒಂದು ವರ್ಷ ಅವಧಿಯ ಪಿ.ಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು, ಡಿಪ್ಲೋಮ ಕೋರ್ಸ್ಗಳು ಲಭ್ಯವಿವೆ.


ಹೆಚ್ಚಿನ ಮಾಹಿತಿಗಾಗಿ ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಆಳ್ವಾಸ್ ದೂರ ಶಿಕ್ಷಣ ಕೇಂದ್ರದ ಕಛೇರಿ ಸಂಖ್ಯೆ 7090715010 ವನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top