'ಯುನೊಯ' ಸ್ಟೂಡೆಂಟ್ ಕೌನ್ಸಿಲ್ ಚಟುವಟಿಕೆಗಳಿಗೆ ಚಾಲನೆ

Upayuktha
0

ಮೂಡುಬಿದಿರೆ: ಪೂರ್ವಾಗ್ರಹ ಪೀಡಿತ ಆಲೋಚನೆಗಳಿಂದ ನಡೆಸುವ ಸಂಹವನ, ಸಂಬಂಧಗಳ ನಡುವೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಸಫೀಕ್ ಎ. ಟಿ ಹೇಳಿದರು.


ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗದ 'ಯುನೊಯ' ಸ್ಟೂಡೆಂಟ್ ಕೌನ್ಸಿಲ್‌ನ 2022ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಕ್ತಿಗಳ ನಡುವಿನ ಸಂಹವನ ಪ್ರಕ್ರಿಯೆಯಲ್ಲಿ ಪರಸ್ಪರ ಮಾತುಗಳನ್ನು ಕೇಳುವ ತಾಳ್ಮೆ ಹಾಗೂ ವಿವರಿಸುವ ರೀತಿ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ವಿಚಾರಗಳಿಗೆ ಪ್ರತಿಕ್ರಯಿಸುವ ಮುನ್ನ ನಮ್ಮ ಭಾವನೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಇದರಿಂದ ಆತ್ಮ ಗೌರವಕ್ಕೂ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಓರ್ವ ವ್ಯಕ್ತಿಯ ಕುರಿತಾದ ಪಕ್ಷಪಾತೀಯ ನಿಲುವುಗಳು ಹಾಗೂ ಪೂರ್ವಾಗ್ರಹ ಪೀಡಿತ ಆಲೋಚನೆಗಳು ಸಂಬಂಧಗಳ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಲ ಡಾ. ಕುರಿಯನ್ ಮಾತನಾಡಿ, ಉತ್ತಮ ಸಂಹವನ ಅದ್ಭುತಗಳನ್ನು ಸೃಷ್ಠಿಸಬಲ್ಲದು ಆದರೆ ವ್ಯಕ್ತಿಗಳ ನಡುವೆಯುಂಟಾಗುವ ತಪ್ಪು ಗ್ರಹಿಕೆಗಳಿಂದ ಮಾನವ ಸಮೂಹವು ಅಪಾಯಕ್ಕೆ ಸಿಲುಕಬಹುದು. ಪರಸ್ಪರ ಮಾತಿನ ನಡುವೆ ಇತರರ ಭಾವನೆಗಳಿಗೂ ಪ್ರಾಮುಖ್ಯತೆ ನೀಡಬೇಕೆಂದರು.


ಕಾರ್ಯಕ್ರಮದಲ್ಲಿ ಸ್ಟೂಡೆಂಟ್ ಕೌನ್ಸಿಲ್‌ನ ಸದಸ್ಯರಿಗೆ ಬ್ಯಾಡ್ಜ್ ವಿತರಿಸಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ರಚಿಸಿದ ಭಿತ್ತಿಪತ್ರಗಳು ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ 'ಇಂಟರ್‌ಪರ್ಸನಲ್ ಇಫೆಕ್ಟಿವ್‌ನೆಸ್' ಮಾದರಿಯನ್ನು ಅನಾವರಣಗೊಳಿಸಲಾಯಿತು. ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್, ವಿಭಾಗ ಮುಖ್ಯಸ್ಥ ನಿತಿನ್ ಡಿಸಿಲ್ವಾ, ಉಪನ್ಯಾಸಕಿ ವೈಶಾಲಿ ಕಿಣಿ ಉಪಸ್ಥಿತರಿದ್ದರು. ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷ ವಿದ್ಯಾರ್ಥಿ ಪ್ರವೀಣ್ ಡಿಸೋಜ ಸ್ವಾಗತಿಸಿದರು, ವಿದ್ಯಾರ್ಥಿನಿ ರಿಯೋನಾ ವಂ ಒಥೆಲಿನಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top