||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಸಾಮೂಹಿಕ ಸೂರ‍್ಯ ನಮಸ್ಕಾರ

ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಸಾಮೂಹಿಕ ಸೂರ‍್ಯ ನಮಸ್ಕಾರ

 

ಮೂಡುಬಿದಿರೆ: ಆಯುಷ್ ಮಂತ್ರಾಲಯ ಮತ್ತು ಪುಣೆಯ ನಾಷನಲ್ ಇನಸ್ಟಿಟ್ಯೂಟ್ ಆಫ್ ನಾಚುರೋಪತಿಯ ಸಹಯೋಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ವಿಭಾಗದ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಅಂಗ ಸಂಸ್ಥೆಗಳಲ್ಲಿ ಸೂರ‍್ಯ ನಮಸ್ಕಾರವನ್ನು ಮಕರ ಸಂಕ್ರಾಂತಿಯ ದಿನದಂದು ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಸಕಲ ಜೀವ ಜಗತ್ತಿಗೆ ಶಕ್ತಿಯ ಆಕರವಾದ ಸೂರ‍್ಯನಿಗೆ ವಿಶೇಷ ಆಸನಗಳ ಸಂಯೋಜನೆಯ ಮೂಲಕ ನಮಸ್ಕರಿಸುವ ವಿಧಾನವೇ ಸೂರ‍್ಯ ನಮಸ್ಕಾರ. ಅನುದಿನ ಅಭ್ಯಾಸದ ಮೂಲಕ ಸ್ವಾಸ್ಥ್ಯ ಸಂರಕ್ಷಣೆ ಸಾಧ್ಯ ಎನ್ನುವುದು ಈಗಾಗಲೇ ಸಾಬೀತಾಗಿದ್ದು ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯ ವರ್ಧನೆಗಾಗಿ ಸೂರ‍್ಯ ನಮಸ್ಕಾರದ ಅಭ್ಯಾಸವನ್ನು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹು ಮುಖ್ಯ ಎಂದರು.


ವಿವಿಧ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸುಮಾರು 800 ಕ್ಕೂ ಅಧಿಕ ಜನರು ಯೋಗದಲ್ಲಿ ಭಾಗಿಯಾದರು. ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳು ಆನ್ ಲೈನ್ ವೇದಿಕೆಯ ಮೂಲಕವೂ ಸುಮಾರು 200 ಜನರಿಗೆ ಸೂರ‍್ಯ ನಮಸ್ಕಾರ ತರಬೇತಿ ನೀಡಿದರು.


ಯೋಗ ವಿಭಾಗದ ಡೀನ್ ಡಾ. ವೃಂದಾ ಬೇಡೆಕರ್ ಮಕರ ಸಂಕ್ರಾಂತಿಯ ದಿನದಂದು ಸೂರ್ಯ ನಮಸ್ಕಾರದ ಅಭ್ಯಾಸದ ಔಚಿತ್ಯವನ್ನು ವಿವರಿಸಿದರು. ಯೋಗ ವಿಭಾಗದ ಉಪನ್ಯಾಸಕಿ  ಸಹನಾ ಕಾರ‍್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅರ್ಚನಾ, ಡಾ. ನಿತೇಶ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post