ಸ್ವಚ್ಛ ಪರಿಸರದಿಂದ ಸ್ವಾಸ್ಥ್ಯ ಸಮಾಜ: ಡಾ. ಚೂಂತಾರು

Upayuktha
0

ಮಂಗಳೂರು: ಇಲ್ಲಿನ ಗೃಹರಕ್ಷಕದಳ, ಉಳ್ಳಾಲ ಘಟಕದ ವತಿಯಿಂದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ಜನವರಿ 9ರಂದು ನಡೆಯಿತು. ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಹೊಂದಿರುವ ಗೃಹರಕ್ಷಕರು, ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕೆಲಸವನ್ನೂ ಮಾಡುತ್ತಿದ್ದಾರೆ. ಸ್ಚಚ್ಛ ಪರಿಸರದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ.


ಈ ಹಿನ್ನೆಲೆಯಲ್ಲಿ ಕಳೆದ ಎರಡು ವರುಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸದಸ್ಯರು ನಿರಂತರವಾಗಿ ನಗರದೆಲ್ಲೆಡೆ ಸ್ವಚ್ಛತಾ ಅಭಿಯಾನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. ಪರಿಸರವನ್ನು ಸ್ಚಚ್ಛವಾಗಿರಿಸುವುದರಿಂದ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘಿ, ಥೈಪಾಯ್ದ್, ಕಾಲರಾ ಮುಂತಾದ ರೋಗಗಳಿಂದ ಮುಕ್ತಿ ಸಿಗುತ್ತದೆ. ಈ ಹಿನ್ನಲೆಯಲ್ಲಿ ಗೃಹರಕ್ಷಕರು ಮಾಡುವ ಸ್ವಚ್ಛತಾ ಅಭಿಯಾನ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಬಹುಮುಖ್ಯ ಭೂಮಿಕೆ ವಹಿಸಿದೆ ಎಂದು ಅಭಿಪ್ರಾಯಪಟ್ಟರು.


ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ರಾಮ್‌ದಾಸ್ ಆಳ್ವ, ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್, ವೆಂಕಟೇಶ್ ಭಟ್, ವಿಷ್ಣುಮೂರ್ತಿ ಜನಾರ್ಧನ ಉಮಾಮಹೇಶ್ವರ ಸೇವಾ ಸಮಿತಿ ಸದಸ್ಯರಾದ ವಸಂತ ಕೋಡಿ, ಭಾಸ್ಕರ್ ಮಂಜನಾಡಿ, ಸತೀಶ್, ಯೋಗೀಶ್ ಶೆಟ್ಟಿ, ಉದ್ಯಮಿ/ ದಂತವೈದ್ಯ ಡಾ. ಗುಣರಂಜನ್, ಹಿರಿಯ ಗೃಹರಕ್ಷಕ ಸುನಿಲ್ ಪೂಜಾರಿ, ಸವೇರಾ ಡಿಸೋಜ, ಸೆಲೆಸ್ಟಿನ್ ಡಿಸೋಜ, ಸಮದ್, ದಿವಾಕರ್, ರೇವತಿ, ಧನಂಜಯ್, ಹಮೀದ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top