ಯೋಗರತ್ನ ದೇಲಂಪಾಡಿ ಅವರ ಆನ್‌ಲೈನ್‌ ಯೋಗ ಕೈಪಿಡಿ, ಮರು ಮುದ್ರಣಗೊಂಡ ಕೃತಿ ಬಿಡುಗಡೆ

Upayuktha
0

 



ಮಂಗಳೂರು: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಆನ್ಲೈನ್ ಯೋಗದ ಕೈಪಿಡಿ ಹಾಗೂ ಮರುಮುದ್ರಣಗೊಂಡ ಯೋಗ ಆರೋಗ್ಯ ಪುಸ್ತಕವನ್ನು ಶುಕ್ರವಾರ (ಜ.7) ಮಂಗಳೂರಿನ ಜಿಲ್ಲಾ ಪಂಚಾಯತಿನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರು ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಬದುಕಿನ ಪರಿಪೂರ್ಣತೆಗೆ ಯೋಗ ಅಗತ್ಯ, ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಯೋಗ ಗುರು ಶ್ರೀ ದೇಲಂಪಾಡಿಯವರು ಉಚಿತವಾಗಿ ಆನ್ಲೈನ್ ಮೂಲಕ ಯೋಗ ತರಬೇತಿಯನ್ನು ನೀಡುತ್ತಿದ್ದಾರೆ. ಆರಂಭದಲ್ಲಿ ಆನ್ಲೈನ್‌ ತರಗತಿಯನ್ನು ಕೆಲವು ದಿನ ಗಮನಿಸಿ ಹಾಗೂ ಗುರುಗಳೊಂದಿಗೆ ಸಂವಾದ ನಡೆಸಿ ಕಲಿಯಬೇಕು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.


ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಡಾಕ್ಟರ್ ಕುಮಾರ್, ಕೌಶಲ್ಯಾಭಿವೃದ್ದಿ ಅಧಿಕಾರಿ ಹೇಮಚಂದ್ರ, ಆಡಿಟರ್ ಜಗನ್ನಾಥ ಕಾಮತ್‌, ಸಂಜನಾ ಕಾಮತ್‌, ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top