ಪುತ್ತೂರು: ವಿವೇಕಾನಂದರದ್ದು ಅದ್ಭುತ ಪಾಂಡಿತ್ಯ. ವಿದೇಶಿಯರೂ ಸ್ವಾಮೀಜಿಯ ಪಾಂಡಿತ್ಯಕ್ಕೆ ಮಾರುಹೋಗಿ ಜಗತ್ತಿನ ಜ್ನಾನದ ಸಾಗರ ನಿಮ್ಮ ಮೆದುಳಿನಲ್ಲಿ ತುಂಬಿಸಿಕೊಂಡಂತಹ ತಾವು ಯಾರು ಎಂದು ಕೇಳಿದಾಗ, ಜಗತ್ತಿನ ರಾಷ್ಟ್ರಗಳು ಕೋಮು ಗಲಭೆಯ ಕಚ್ಚಾಟದಲ್ಲಿ ಆಶ್ರಯ ಬಯಸಿ ಭಾರತಕ್ಕೆ ಬಂದಾಗ ಜಾತಿ, ಧರ್ಮ ಬೇಧವಿಲ್ಲದೆ ಆಶ್ರಯ ಕೊಟ್ಟ ದೇಶದಿಂದ ಬಂದವ ನಾನು ಎಂದು ಹೆಮ್ಮೆಯಿಂದ ಹೇಳಿದವರು. ವಿವೇಕಾನಂದರು ಜಗತ್ತಿನ ಜನ ಮನ ಗೆದ್ದವರು. ಅವರು ಜ್ಜಾನವನ್ನು ಭಾಷಣದ ಮೂಲಕ ಜನರಿಗೆ ತಲುಪಿಸುವ ಸಾಮರ್ಥ್ಯ ಅಸಾಮಾನ್ಯವಾದದ್ದು, ಹಾಗೂ ಎಲ್ಲರನ್ನೂ ತನ್ನತ್ತ ಆಕರ್ಷಿಸುವ ವಾಕ್ ವ್ಯೆಖರಿ ಅವರದಾಗಿತ್ತು. ಇದರಿಂದ ಧರ್ಮ ಬೇಧವಿಲ್ಲದ ಮಹಾನ್ ಸಂತ ದೇಶಭಕ್ತ, ತತ್ವಜ್ಜಾನಿಯಾದ ವಿವೇಕಾನಂದರು ಎಲ್ಲರಿಗೂ ಆದರ್ಶಪ್ರಾಯರು. ಅವರನ್ನು ಅನುಸರಿಸಿ ಎಂದು ವಾಗ್ಮಿ, ಚಿಂತಕ ಶ್ರೀಕೃಷ್ಣ ಉಪಾಧ್ಯಾಯರು ಹೇಳಿದರು.
ಅವರು ನಟ್ಟೋಜ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಇಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತವನ್ನು ಪ್ರತಿನಿಧಿಸಿ ವಿಶ್ವ ಭಾತ್ರತ್ವದ ಭಾವನೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರ ಅನುಯಾಯಿಗಳು ನಾವೆಲ್ಲ. ಜಗತ್ತಿನಲ್ಲೇ ಭಾರತ ಮಹಾನ್ ಎಂದು ಗುರುತಿಸಿಕೊಟ್ಟ ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ, ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ. ಅಂಜಿಕೆ, ಹಿಂಜರಿಕೆ ಇಲ್ಲದೆ ವಿವೇಕಾನಂದರ ನುಡಿಯಂತೆ ಆದರ್ಶದಂತೆ ನಡೆಯೋಣ. ಇದಕ್ಕಾಗಿಯೇ ಅಂಬಿಕಾ ಮಹಾವಿದ್ಯಾಲಯ ದಲ್ಲಿ ತತ್ವಶಾಸ್ತ್ರದ ಅಧ್ಯಯನಕ್ಕೂ ಮಹತ್ವಕೊಟ್ಟು ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರು ವಿವೇಕಾನಂದರ ವಿಚಾರಧಾರೆಯ ಮಹತ್ವವನ್ನು ಸಾರಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟನ ಖಜಾಂಜಿ ರಾಜಶ್ರೀ ನಟ್ಟೋಜ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ಜಯಂತಿಯ ಪ್ರಯುಕ್ತ ಹಮ್ಮಿಕೂಂಡ ಸ್ಪರ್ಧೆಯಲ್ಲಿ ವಿಜೇತರಾದ ಕೌಟಿಲ್ಯ ಹಾಗೂ ಕಪಿಲ ತಂಡದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನವಿತ್ತು ಗೌರವಿಸಿದರು.
ವಿದ್ಯಾರ್ಥಿಗಳಾದ ಶ್ರೀಶ ಹಾಗೂ ಅಭಿಲಾಶ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ರಂಜಿತಾ ಅತಿಥಿಗಳನ್ನು ಸ್ವಾಗತಿಸಿ , ಜಿತಿನ್ ರೈ ವಂದಿಸಿದರು. ವಿದ್ಯಾರ್ಥಿ ನಾಯಕಿ ಕನ್ಯಾ ಸಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಿಬ್ಬಂದಿ ಮುರಳಿ ಮೋಹನ ಸಹಕರಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ