|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳು ಅಕಾಡೆಮಿಯಲ್ಲಿ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ತುಳು ಅಕಾಡೆಮಿಯಲ್ಲಿ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ಮಂಗಳೂರು: ತುಳು ಭಾಷಾಭಿಮಾನ ಹೆಚ್ಚಬೇಕಾದರೇ ಮಕ್ಕಳಲ್ಲಿ ಅದರ ಆಸಕ್ತಿ ಮೂಡಿಸುವುದು ಉತ್ತಮ ಅಕಾಡೆಮಿಯು ತುಳು ಶಿಕ್ಷಕರ ಮೂಲಕ ತುಳು ಅಭಿರುಚಿಯನ್ನು ವಿಸ್ತರಿಸುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ತುಳು ಭಾಷೆ, ಸಂಸ್ಕೃತಿ, ರಂಗಕಲೆ ಸಹಿತ ಪರಂಪರೆಯನ್ನು ಪ್ರೋತ್ಸಾಹಿಸುವುದು ಅಕಾಡೆಮಿಯ ಜವಬ್ದಾರಿ. ಅದನ್ನು ಪ್ರಸ್ತುತ ಅಕಾಡೆಮಿಯ ಸದಸ್ಯರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಪರ-ವಿರೋಧ ಸಮಾಜದಲ್ಲಿ ಸಹಜ. ಆದರೆ ನಮ್ಮ ಕೆಲಸ ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಸಿಕ್ಕ ಗೌರವಾದರಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನಮ್ಮಲ್ಲಿರುತ್ತದೆ ಎಂದು ಮಂಗಳೂರು ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕ ಎಸ್.ಆರ್. ಬಂಡಿಮಾರ್ ಹೇಳಿದರು.


ಅವರು ಉರ್ವಸ್ಟೋರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆದ 'ತುಳು ಕಲ್ಪಾದಿಲೆನ ಓದು - ಬರವುದ ಕಜ್ಜಕೊಟ್ಯ' ತುಳುವನ್ನು ತೃತೀಯ ಭಾಷೆಯನ್ನಾಗಿ ಭೊಧಿಸಲಾಗುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಶೈಕ್ಷಣಿಕ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ತುಳು ಶಿಕ್ಷಕರ ಶ್ರೇಯಸ್ಸಿಗೆ ಅಕಾಡೆಮಿ ಎಂದೆಂದಿಗೂ ಬದ್ಧರಾಗಿದ್ದೇವೆ. ಅವರಿಗೆ ಭವಿಷ್ಯದಲ್ಲಿ ಭದ್ರತೆಯನ್ನು ನೀಡುವ ಪ್ರಯತ್ನ ಸಂಘಟನಾತ್ಮಕವಾಗಿ ನಡೆಯಬೇಕು. ತಾಲ್ಲೂಕುವಾರು ತುಳು ಸಂಘದ ಸಮಿತಿಯನ್ನು ರಚಿಸಿಕೊಂಡು ತುಳು ಶಿಕ್ಷಕರ ಸಹಿತ ತಾಲೂಕಿನಲ್ಲಿ ತುಳು ಭಾಷೆ, ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುವ ಕೆಲಸ ನಡೆಯಬೇಕು. ಇದಕ್ಕೆ ಸ್ಥಳೀಯ ಶಾಸಕರ ಮೂಲಕ ಸರಕಾರದಿಂದಲೂ ಅನುದಾನ ನಿರಂತರವಾಗಿ ಸಿಗುವಂತಾದಲ್ಲಿ ಇದಕ್ಕೋಂದು ಭದ್ರ ಬುನಾದಿಯಾಗುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಶುಭ ಹಾರೈಸಿದರು.


ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಇದರ ಉಪ ನಿರ್ದೇಶಕ ಸುಧಾಕರ್ ಕೆ. ಮಾತನಾಡಿ, ಶಾಲೆ ಶಾಲೆಗಳಲ್ಲಿ ಮಂಜೂರಾದ ಹೆಚ್ಚುವರಿ ಹುದ್ದೆಗಳಿದ್ದಲ್ಲಿ ಮಾತ್ರ ಅತಿಥಿ ಶಿಕ್ಷಕರ ನೇಮಕಾತಿ ಸಾಧ್ಯವಿದೆ. ತುಳು ಸಂಘಟನೆಗಳು ಸಂಘಟಿತರಾಗಿ ಈ ಕೆಲಸವನ್ನು ಸರಕಾರದ ಮೂಲಕ ನಡೆಸಿದಲ್ಲಿ ಶಿಕ್ಷಕರನ್ನು ಕಾಡುತ್ತಿರುವ ಸಮಸ್ಯೆ ಬಗೆಹರಿಬಹುದು ಎಂದರು.


ಪದವಿ ಪೂರ್ವ ಕಾಲೇಜು ಉಪ್ಪುಂದ ಇದರ ಪ್ರಾಂಶುಪಾಲ ಬಿ. ಯಾದವ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಇದರ ಶಿಕ್ಷಣ ಸಂಯೋಜಕ  ಡಾ. ಮಾಧವ ಎಂ.ಕೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ, ನಾಗೇಶ್ ಕುಲಾಲ್, ಶ್ರೀಮತಿ ಕಲಾವತಿ ದಯಾನಂದ, ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ಸಂತೋಷ್ ಪೂಜಾರಿ ಕಾರ್ಕಳ, ರಿಜಿಸ್ಟ್ರಾರ್ ಕವಿತಾ,  ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ಇದರ ಕಾರ್ಯದರ್ಶಿ ಕೆ. ಸೇಸಪ್ಪ ರೈ ಉಪಸ್ಥಿತರಿದ್ದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post