|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊಪ್ಪ: ಸಹಕಾರ ಸಾರಿಗೆ ಸ್ಥಗಿತಗೊಂಡು ಬೀದಿಪಾಲಾದ ಕಾರ್ಮಿಕರಿಂದ ನೆರವಿಗಾಗಿ ಸರ್ಕಾರಕ್ಕೆ ಮೊರೆ

ಕೊಪ್ಪ: ಸಹಕಾರ ಸಾರಿಗೆ ಸ್ಥಗಿತಗೊಂಡು ಬೀದಿಪಾಲಾದ ಕಾರ್ಮಿಕರಿಂದ ನೆರವಿಗಾಗಿ ಸರ್ಕಾರಕ್ಕೆ ಮೊರೆ


ಚಿಕ್ಕಮಗಳೂರು: ತಾಲ್ಲೂಕಿನ ಕೊಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆ ಸ್ಥಗಿತಗೊಂಡು ಎರಡು ವಷಗಳು ಕಳೆದಿದೆ. ಇದರಿಂದ ಸ್ಥಳೀಯ ಕಾರ್ಮಿಕರು ಬೀದಿಪಾಲಾಗುತ್ತಿದ್ದು ಅವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್‌ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.


ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಮೂಲಕ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಹಾಗೂ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.


ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದು ಮಲೆನಾಡು ಹೆಗ್ಗಳಿಕೆಯ ಸಂಸ್ಥೆ ಎಂದು ಹೆಸರುವಾಸಿಯಾಗಿತ್ತು. ಸಂಸ್ಥೆ ಸ್ಥಗಿತಗೊಳ್ಳುವುದಕ್ಕಿಂತ ಮೊದಲು  ಕಳೆದ ಎರಡು ವರ್ಷಗಳ ಹಿಂದೆ ಲಾಭ ಗಳಿಸಿದೆ ಎಂದು ಲೆಕ್ಕ ಪರಿಶೋಧಕರ ವರದಿ ತಿಳಿಸಿದೆ ಎಂದರು.


ಕೆಲವು ವರ್ಷಗಳ ನಂತರ ಸಾರಿಗೆ ಸಂಸ್ಥೆ ಕೋಟ್ಯಾಂತರ ರೂ.ಗಳು ಆರ್ಥಿಕ ನಷ್ಟ ಉಂಟಾಗಿದೆ ಎಂಬ ನೆಪವೊಡ್ಡಿ ಆಡಳಿತ ಮಂಡಳಿಯ ಸಂಸ್ಥೆಯನ್ನು ಎರಡು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದೆ. ಈ ನಡುವೆ ಸ್ಥಳೀಯ ನೌಕರರು ಕೆಲಸವಿಲ್ಲದೇ ಕುಟುಂಬವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಬೀದಿಪಾಲಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ಹೇಳಿದರು.


ಸಾರಿಗೆ ಸಂಸ್ಥೆ ಸ್ಥಗಿತಗೊಳಿಸುವ ಮುನ್ನ ಒಂದು ವರ್ಷದ ಹಿಂದೆ ಆಡಳಿತ ಮಂಡಳಿಯು ಯಾವ ಬಸ್ಸುಗಳಿಗೂ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ಮಾರ್ಗ ಪರವಾನಿಗೆಗಳ ನವೀಕರಣ ಮಾಡಿಸಿಲ್ಲ. ನೌಕರರ ಭವಿಷ್ಯನಿಧಿ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿಸಿಲ್ಲ ಹಾಗಾದರೆ ಎರಡು ವರ್ಷಗಳಿಂದ ಬಸ್ಸಿನಲ್ಲಿ ದಿನನಿತ್ಯ ಬಂದ ಆದಾಯವನ್ನು ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.


ಇದನ್ನೆಲ್ಲಾ ಗಮನಿಸಿದರೆ ಆಡಳಿತ ಮಂಡಳಿಯವರು ಹಣ ದುರುಪಯೋಗ ಮಾಡಿಕೊಂಡಿ ರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಕಾರಣಕ್ಕಾಗಿ ಸಹಕಾರ ಕಾಯ್ದೆ 64ರ ಅನ್ವಯ ತನಿಖೆಗೆ ಅಲ್ಲಿನ ಷೇರುದಾರರು ಒತ್ತಾಯಿಸಿದ ಮೇರೆಗೆ ತನಿಖೆಗೆ ಆದೇಶವಾಗಿದ್ದು  ತನಿಖಾಧಿಕಾರಿಗಳು ಬಂದ ಸಂದರ್ಭದಲ್ಲಿ ಕೊಪ್ಪದ ಫೈನಾನ್ಸ್ ಕಂಪನಿಯೊಂದು ಆಡಳಿತ ಕಛೇರಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಂಡಿದ್ದು ತನಿಖೆಗೆ ಅಡಚಣೆಯಾಗಿದೆ ಎಂದರು.


ಜಿಲ್ಲಾಧಿಕಾರಿಗಳು ಕಛೇರಿಯ ಬೀಗ ತೆರವುಗೊಳಿಸಿ ತನಿಖೆಗೆ ಸಹಕಾರ ನೀಡಲು ಸಂಬಂಧಪಟ್ಟ ಫೈನಾನ್ಸ್‌ವರಿಗೆ ಸೂಚಿಸಿದ್ದರೂ ಸಹ ಅದಕ್ಕೆ ಅವರು ಬೆಲೆ ಕೊಡದೇ ಇರುವುದರಿಂದ ತನಿಖೆ ಮೂಲೆಗುಂಪಾಗಿದೆ ಎಂದು ದೂರಿದರು.


ಕೂಡಲೇ ಸಂಸ್ಥೆಯಲ್ಲಿ ಕಾರ್ಯಚಟುವಟಿಕೆ ನಡೆಸಲು ಆಡಳಿತ ಮಂಡಳಿ ಅವಶ್ಯವಿದ್ದು ವಿಶೇಷ ಅಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸಲು ಆದೇಶಿಸಬೇಕು. ಜೊತೆಗೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್.ಆರ್.ಸಂಜೀವ, ಉಪಾಧ್ಯಕ್ಷ ಹೆಚ್.ಸಿ. ಕಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಬಿ. ರಮೇಶ್‍ಗೌಡ, ನಾಗೇಶ್ ಸುಬ್ರಹ್ಮಣ್ಯ, ರಘುನಾಥ, ಹಾಲಪ್ಪಗೌಡ, ರಘು, ಪುಷ್ಪಾವತಿ, ಎಂ.ಸಿ. ಕುಮಾರ್ ಹಾಜರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post