||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷರಂಗದ ಯುವ ವೇಷಧಾರಿ ಮಧುರಾಜ್ ಎಡನೀರು

ಯಕ್ಷರಂಗದ ಯುವ ವೇಷಧಾರಿ ಮಧುರಾಜ್ ಎಡನೀರು


ಕಾಸರಗೋಡು ಜಿಲ್ಲೆ ಯಕ್ಷಗಾನ ರಂಗಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಕಲಾವಿದ ಶ್ರೀಯುತ ಮಧುರಾಜ್ ಎಡನೀರು. 


ಶ್ರೀ ಮಾಧವ ಎಡನೀರು ಹಾಗೂ ಶ್ರೀಮತಿ ಪ್ರಭಾವತಿ ಇವರ ಪ್ರೀತಿಯ ಮಗನಾಗಿ ಜನಿಸಿದ ಇವರು ರಕ್ತಗತವಾಗಿ ಯಕ್ಷಗಾನ ಕಲೆಯು ಇವರನ್ನ  ಹೆಚ್ಚು ಆಕರ್ಷಿಸಿತು. ತನ್ನ ವಿದ್ಯಾಭ್ಯಾಸವನ್ನೂ ಹಾಗೂ ಯಕ್ಷಗಾನ ಕಲೆಯನ್ನೂ ಬಹಳ ಉತ್ಸಾಹಿ ಆಗಿ ನೋಡುತ್ತಾ ಬಂದವರು ಇವರು. ಎಳವೆಯಿಂದಲೇ ಯಕ್ಷರಂಗವನ್ನು ಸೇರಿದ ಇವರ ಹಲವಾರು ವಿಭಿನ್ನ ಪಾತ್ರಗಳಲ್ಲಿ ಇವರ ವೇಷವನ್ನು ಕಾಣಲು  ಸಾಧ್ಯವಾಯಿತು. ಕಿರೀಟ ವೇಷ ಬಣ್ಣದ ವೇಷ ಪುಂಡು ವೇಷ ಸ್ತ್ರೀ ವೇಷ ವಿದ್ಯಾಭ್ಯಾಸದ ಜೊತೆ ಯಕ್ಷಗಾನವನ್ನೂ ನೋಡುತ್ತಾ ಬಂದ ಇವರು ವಿದ್ಯಾಭ್ಯಾಸದಲ್ಲಿ ಇಂಜಿನಿಯರ್ ಪದವೀಧರ. ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ಸ್ ವಿಭಾಗದಲ್ಲಿ ಇಂಜಿನಿಯರ್ ಪಡೆದ ಇವರು ಪ್ರಸ್ತುತ ಸಾಫ್ಟವೇರ್ ಇಂಜನಿಯರ್ ಆಗಿ Tech Mahindra ದಲ್ಲಿ ಉದ್ಯೋಗದಲ್ಲಿ ಇದ್ದಾರೆ. ತನ್ನ ವಿದ್ಯಾಭ್ಯಾಸ ಜೀವನದಲ್ಲಿ KSCST  VTU ಯೂನಿವರ್ಸಿಟಿಗೆ Best Project of year award ಅನ್ನು ಪಡೆದು ಕೊಂಡಿದ್ದಾರೆ. PUC ಸಮಯದಲ್ಲೂ ಎಲೆಕ್ಟ್ರಾನಿಕ್ಸ್ ವಿಭಾಗದ ಕಂಪಿಟೀಷನಲ್ಲಿ ರಾಜ್ಯ ಮಟ್ಟಕ್ಕೇರಿದರು ಇವರು. ಹೀಗೆ ಹಲವಾರು ಪ್ರಶಸ್ತಿಯನ್ನ  ಪಡೆದ ಇವರು ಇದಕ್ಕೆಲ್ಲಾ ಕಾರಣ ಯಕ್ಷಗಾನ ಕಲಾ ಮಾತೆಯ ಅನುಗ್ರಹ ಎನ್ನುತ್ತಾರೆ.


ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ತಂದೆ ಮಾಧವ ಎಡನೀರು ಇವರ ಗುರುಗಳು ಹೌದು. ತಂದೆಯವರು ಮಲ್ಲ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿದ್ದ ಸಂದರ್ಭದಲ್ಲಿ ಇವರು ಬಾಲ ವೇಷಗಳನ್ನು  ಮಾಡಿ, ಅಣ್ಣ ಮನೀಶ್ ಎಡನೀರು ಇವರ  ಜೊತೆ ಗೆಜ್ಜೆ ಕಟ್ಟಿ ರಂಗಕ್ಕೇರಿದವರು. ತನ್ನ ಯಕ್ಷಗಾನ ಬೆಳವಣಿಗೆಗೆ ಮಲ್ಲ ಮೇಳ, ಎಡನೀರು ಮಠವು ಪ್ರಧಾನ ಕಾರಣ ಎನ್ನುತ್ತಾರೆ. ಎಡನೀರು ವಠಾರದಲ್ಲಿ ಪ್ರತೀ ದಿನ ಯಕ್ಷಗಾನ ನಡೆಯುತ್ತಿದ್ದು, ಅದನ್ನು ವೀಕ್ಷಿಸುತ್ತಾ ಎಡನೀರು ಮೇಳದಲ್ಲಿಯೂ ಸೇವೆ ಸಲ್ಲಿಸುವ ಭಾಗ್ಯ ಇವರಿಗೆ ದೊರಕಿದೆ ಎನ್ನುತ್ತಾರೆ. ಇದಕ್ಕೆ ಅವಕಾಶ  ನೀಡಿದವರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ  ಸ್ವಾಮೀಜಿಗಳು. ಇವರ ಅನುಗ್ರಹದಿಂದ ಎಲ್ಲಾ ರೀತಿಯ ಪುಂಡು ವೇಷವಾಗಲಿ ಕಿರೀಟ ವೇಷವಾಗಲಿ ಬಣ್ಣದ ವೇಷವಾಗಲಿ ಸ್ತ್ರೀ ವೇಷಕ್ಕೂ ಅವಕಾಶ ದೊರಕಿದೆ ಅನ್ನುತಾರೆ.


ಯಾವುದೇ ವೇಷವನ್ನು ಮಾಡಿದರೂ ತಪ್ಪಿದಲ್ಲಿ ಯಕ್ಷಗಾನ ಪರಂಪರೆಗೆ ಲೋಪ ದೋಷ ಬರದಂತೆ ವೇಷ  ನಿರ್ವಹಿಸುವಂತೆ ಸಲಹೆ ನೀಡುತಿದ್ದರು. ಎಳವೆಯಲ್ಲಿ ಮಲ್ಲಮೇಳದ ಕಲಾವಿದರಾದ ದಿವಂಗತ ರಘುರಾಮ ಗೋಳಿಯಡ್ಕ ಹಾಗೂ ಮಲ್ಲ ಭಾಸ್ಕರ ಇವರನ್ನ ಎಳೆವೆಯಲ್ಲಿ ಪ್ರಹ್ಲಾದ, ಅಭಿಮನ್ಯು ಹೀಗೆ ಪುಂಡು ವೇಷಗಳಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಿದರು ಇದನ್ನ  ನೆನಪಿಸಿಕೊಳ್ಳುತ್ತಾರೆ.ಇವರ ಅಣ್ಣ ಮನೋಜ್ ಎಡನೀರು ಹಾಗೂ ಮನೀಶ್ ಎಡನೀರು ಕೂಡ ಯಕ್ಷಗಾನ ವೇಷಧಾರಿಗಳು ಹಾಗೂ ದೊಡ್ಡಪ್ಪ ಅಂಬಾಡಿ ಎಡನೀರು, ಮಾವ ಗೋಪಾಲಕೃಷ್ಣ ಮಾಸ್ಟರ್ ಹಾಗೂ ಮನೆಯವರು ಊರವರ ಪ್ರೋತ್ಸಾಹವು ತನೊಬ್ಬ ಕಲಾವಿದನಾಗಿ ರೂಪುಗೊಳ್ಳುದಕ್ಕೆ ಕಾರಣವಾಯಿತು. ಭಾವಂದಿರು ಸಚಿನ್ ಹಾಗೂ ಸಂದೇಶ್ ಇವರನ್ನೊಳಗೊಂಡ ಯಕ್ಷಗಾನ ಕುಟುಂಬ ಇವರದ್ದು.


ಎಡನೀರು  ಮೇಳದ ಯಜಮಾನರು ಜಯರಾಮಣ್ಣ  ಪ್ರಸ್ತುತ ಮಠದ ಪೀಠಾಧಿಕಾರಿಗಳಾದ ಶ್ರೀ ಶ್ರೀ ಶ್ರೀ  ಸಚ್ಚಿದಾನಂದ ಸ್ವಾಮೀಜಿ ಹಾಗೂ ಅವರ ತಮ್ಮ ರಘುವಣ್ಣ ಎಡನೀರು ಅವರ ಸಹಕಾರ ನಾನೊಬ್ಬ ಉತ್ತಮ ಕಲಾವಿದನಾಗಲು ಕಾರಣವಾಯಿತು ಎನ್ನುತ್ತಾರೆ. 


ಶ್ರೀ ಸಂತೋಷ್ ಕುಮಾರ್ ಮಾನ್ಯ ಇವರಿಂದಲೂ ನಾಟ್ಯಭ್ಯಾಸವನ್ನು ಕಲಿತು, ಬಣ್ಣದ ಹಾಗೂ ಕಿರೀಟವೇಶಕ್ಕೆ ಹೆಚ್ಚು ಒಲವು ಹೊಂದಿದ ಇವರು ಶ್ರೀ ಶಶಿಕಿರಣ್ ಕಾವು ಇವರಿಂದ ಹೆಚ್ಚಿನ ಮುಖವರ್ಣಿಕೆಯನ್ನು ಕಲಿತರು. ಮುಂದೆ ಬಣ್ಣದ ವೇಷಕ್ಕೆ ತಯಾರಾಗುತ್ತಿದ್ದ  ಇವರು ಬಣ್ಣದ  ವೇಷದ ನಡೆ ಪರಂಪರೆಯ ನಡೆ ಮುಖವರ್ಣಿಕೆಯನ್ನು ಶ್ರೀ ಸದಾಶಿವ ಶೆಟ್ಟಿಗಾರ್ ಇವರಿಂದ ಕಲಿತು ಶಿಷ್ಯತ್ವವನ್ನು ಸ್ವೀಕರಿಸಿದರು, ಅವರ  ಅಪಾರ ಅಭಿಮಾನಿಯು ಹೌದು ಹಾಗೂ ಯಕ್ಷಗಾನದಲ್ಲಿ ಬಟ್ಟೆಯನ್ನು ಕಟ್ಟುವವರು ಹಿಡಿದು ಎಲ್ಲರೂ ನನ್ನ ಮಿತ್ರರು ಗುರು ಸಮಾನರು ಎಂದು ಹೇಳುತ್ತಾರೆ.


ಯಕ್ಷಗಾನ ಒಂದು ದೊಡ್ಡ ಸಾಗರ. ನಾವು ಇದರ ಬಗ್ಗೆ ಕಲಿಯುವುದಕ್ಕೆ ಇನ್ನಷ್ಟು ಇದೆ, ಕಲಿಯುವ  ಹಂಬಲವು ಇನ್ನೂ ಇದೆ.


ಕೀರಿಟ ವೇಷ, ಬಣ್ಣದ ವೇಷ ಮಾಡುವುದು ಇವರಿಗೆ ತುಂಬಾ ಇಷ್ಟ. ರಾಜ ಬಣ್ಣದ ವೇಷಕ್ಕೆ  ಹೆಚ್ಚಿನ ಒಲವು. ರಾವಣ, ಶುಂಭ, ಯಮ ಹಾಗೂ ಕಿರೀಟ ವೇಷಗಳಾದ ರಕ್ತಬೀಜ, ಕೌರವ, ಜಾಂಬವ, ಕೌಂಡ್ಲಿಕ, ಕರ್ಣ, ಹಿರಣ್ಯಾಕ್ಷ, ಮಕರಾಕ್ಷ ಹೀಗೆ ಹಲವಾರು ವೇಷಗಳು ಇವರ ಇಷ್ಟದ ಪಾತ್ರಗಳು. 


ಎಳವೆಯಿಂದಲೇ ಎಡನೀರು ಆಟ ನೋಡುತಿದ್ದ ಇವರು, ಎಡನೀರು ಮೇಳದಲ್ಲಿ ಪ್ರಧಾನ ವೇಷಧಾರಿ ಆಗಿದ್ದ ಶ್ರೀ ರಾಧಾಕೃಷ್ಣ ನಾವಡರ ಅಪಾರ ಅಭಿಮಾನಿ.

ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಇವರು ಅನೇಕ ಅವಕಾಶಗಳನ್ನು ಕೊಟ್ಟು ಯಕ್ಷಗಾನ ರಂಗದಲ್ಲಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ ಎಂಬುದಾಗಿ ಹೇಳುತ್ತಾರೆ. ಪ್ರಧಾನ ಭಾಗವತರಾದ ಶ್ರೀ  ದಿನೇಶ ಅಮ್ಮಣ್ಣಾಯರು ಪ್ರಸಂಗ  ಮಾಹಿತಿಗಳನ್ನು ಹೇಳಿ ಕೊಡುತ್ತಿದ್ದರು.

ಶ್ರೀ  ಬಾಲಕೃಷ್ಣ ಮಣಿಯಾಣಿ ಯಾವುದೇ ವೇಷಕ್ಕೂ ಉತ್ತಮವಾದ ವಿವರಣೆ ಕೊಟ್ಟು ಪ್ರೋತ್ಸಾಹಿಸುತಿದ್ದರು.

ಹೆಚ್ಚಿನ ಜೊತೆ ವೇಷದಲ್ಲೂ ಕಾಣಿಸಿಕೊಳ್ಳುತಿದ್ದ ಶ್ರೀ ಶಶಿಧರ ಕುಲಾಲ್ ಕನ್ಯಾನ ಇವರ  ಮಾರ್ಗದರ್ಶನವು, ಶ್ರೀ ಗುಂಡಿಮಜಲು ಗೋಪಾಲ ಭಟ್ ಹಾಗೂ ಮೇಳದ ಕಲಾವಿದರ ಸಹಕರಣೆ ಸದಾ ಕಾಲ ಸ್ಮರಿಸುತ್ತಾರೆ.


ಎಡನೀರು ಮೇಳ, ಮಲ್ಲ ಮೇಳ, ಕೂಡ್ಲು ಮೇಳ, ಕೊಲ್ಲಂಗಾನ ಮೇಳ, ಪಾವಂಜೆ ಮೇಳ, ಹನುಮಗಿರಿ ಮೇಳ ಕಟೀಲು ಮೇಳ, ಬಪ್ಪನಾಡು ಮೇಳಗಳಲ್ಲಿ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎನ್ನುತಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 

ಪ್ರಸಂಗದ ಬಗ್ಗೆ ತಿಳಿದುಕೊಳ್ಳುತ್ತಿದ್ದೆ ಹಾಗೂ ಹೆಚ್ಚಿನ ಮಾಹಿತಿಗಳನ್ನು ತಂದೆಯಿಂದಲೂ, ನುರಿತವರಿಂದ ಕೇಳಿ ತಿಳಿದುಕೊಳ್ಳುತ್ತೇನೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 

ಯಕ್ಷಗಾನ ಬಹಳಷ್ಟು‌ ಅಭಿಮಾನಿಗಳನ್ನು ಹೊಂದಿ, ಬೆಳೆಯುತ್ತಲೇ ಇದೆ. ಯುವಜನರನ್ನು ಆಕರ್ಷಿಸಿದೆ. ಕಾಲಕ್ಕನುಗುಣವಾಗಿ ಬದಲಾಗುತ್ತಿದೆ. ಬದಲಾವಣೆ ತಪ್ಪಲ್ಲ. ಯಕ್ಷಗಾನ‌ದ ನೈಜತೆಯೊಂದಿಗಿನ ಬದಲಾವಣೆಗಳು ಯಾವತ್ತಿಗೂ ಸ್ವಾಗತಾರ್ಹವಾಗುತ್ತವೆ. ವೇಷದ ಪರಂಪರೆಯನ್ನು  ಬಿಡಕೂಡದು. ಯಕ್ಷಗಾನ ಇನ್ನಷ್ಟು ಬೆಳೆಯಬೇಕು, ಬೆಳೆಯುತ್ತದೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:- 

ಸಹೃದಯಿ ಪ್ರೇಕ್ಷಕರೇ ಯಕ್ಷಗಾನವನ್ನು ಬೆಳೆಸುವುದು. ಅದ್ಭುತ ಪ್ರೇಕ್ಷಕವರ್ಗವು ಇವತ್ತು ಯಕ್ಷಗಾನವನ್ನು ಉನ್ನತಿಗೇರಿಸುತ್ತದೆ. ಅಭಿಮಾನ ಒಂದೇ, ದೃಷ್ಟಿಕೋನ ಬೇರೆ ಬೇರೆ. ಯಕ್ಷಗಾನವನ್ನು ಪ್ರೋತ್ಸಾಹಿಸಿ, ಬೆಳೆಸುವ ಉದ್ದೇಶ ಮಾತ್ರ ಸಮಾನವಾಗಲಿ ಎಂಬ ಆಶಯ.


ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click: Murali navada, Shree Ranga Rao, Sandeep Photography, G.P Bhat Photography, Abhijith Kumar

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post