||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ

 


ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲೂಕಿನ ಅಳಿಕೆಯ ಡಾ. ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಶ್ರೀಮತಿ ಲತಾ ಉಬರಡ್ಕ ಇವರ ಮಗನಾಗಿ 01-02-1995 ರಂದು ಇವರ ಜನನ. ಪ್ರಸ್ತುತ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇಲ್ಲಿ ಅಂತಿಮ ವರ್ಷದ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಪದವಿ ಅಭ್ಯಾಸ (MDS) ವ್ಯಾಸಂಗ ಮಾಡುತ್ತಿದ್ದಾರೆ.


ಸುಮಾರು 2002- 2003ರ ಇಸವಿಯ ಸಂದರ್ಭದಲ್ಲಿ ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯಲ್ಲಿ ಪ್ರಸಿದ್ಧ ಯಕ್ಷಗುರುಗಳಾಗಿದ್ದ ಡಾ. ಕೋಳ್ಯೂರು ರಾಮಚಂದ್ರ ರಾವ್ ಹಾಗೂ ಉಬರಡ್ಕ ಉಮೇಶ್ ಶೆಟ್ಟಿಯವರು ಅಲ್ಲಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯಾಭ್ಯಾಸಕ್ಕೆ ಆಗಾಗ ಬರುತ್ತಿದ್ದರು. ಆ ಸಂದರ್ಭದಲ್ಲಿ ಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕರೂ, ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿದ್ದ ಇವರ ತಂದೆ, ಅಲ್ಲಿನ ಯಕ್ಷಗಾನ ಕಾರ್ಯಕ್ರಮದ ಮೇಲ್ವಿಚಾರಕರಾಗಿದ್ದರು. ಹಾಗಾಗಿ ವಿದ್ಯಾರ್ಥಿಗಳ ನಾಟ್ಯಾಭ್ಯಾಸದ ಸಂದರ್ಭ ಇವರು ತಂದೆಯ ಜೊತೆ ಹೋಗಿ ನೋಡುತ್ತಾ, ಇನ್ನೊಂದು ಬದಿಯಲ್ಲಿ ಒಬ್ಬನೇ ಕುಣಿಯುತ್ತಿದ್ದೆ. ಇದನ್ನು ಗಮನಿಸಿದ ಇವರ ಸೋದರ ಮಾವ (ಅಮ್ಮನ ಅಣ್ಣ) ಉಬರಡ್ಕ ಉಮೇಶ್ ಶೆಟ್ಟಿಯವರು ಮೊದಲಾಗಿ ಪ್ರಾಥಮಿಕ ಹೆಜ್ಜೆಗಾರಿಕೆ   ಕಲಿಸಿದರು.


ಆ ನಂತರ 2003 ರಲ್ಲಿ ಅಳಿಕೆ ವಿದ್ಯಾಸಂಸ್ಥೆಯಿಂದ ಭಗವಾನ್ ಸತ್ಯಸಾಯಿ ಬಾಬಾರವರ ಸನ್ನಿಧಿ ಪುಟ್ಟಪರ್ತಿಯಲ್ಲಿ ಶ್ರೀ ಕೃಷ್ಣ ಲೀಲೆ ಎನ್ನುವ ಯಕ್ಷಗಾನ ರೂಪಕದಲ್ಲಿ ಬಾಲಕೃಷ್ಣನಾಗಿ ಪ್ರಪ್ರಥಮವಾಗಿ ಗೆಜ್ಜೆ ಕಟ್ಟಿ ಆಶೀರ್ವಾದ ಪಡೆದು ಆ ನಂತರ ಸತತವಾಗಿ ಹತ್ತು ವರ್ಷಗಳ ಕಾಲ ಯಕ್ಷಗಾನದಲ್ಲಿ ಪುಂಡು ವೇಷ ಪಾತ್ರ ಮಾಡುತ್ತಿದ್ದರು.


ಕೋಳ್ಯೂರು ರಾಮಚಂದ್ರ ರಾವ್ ಹಾಗೂ ಉಬರಡ್ಕ ಉಮೇಶ್ ಶೆಟ್ಟಿ ಇವರ ನಾಟ್ಯ ಗುರುಗಳು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಇವರ ಭಾಗವತಿಕೆಯ ಗುರುಗಳು. 2012ರಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಲ್ಲಿ, ವಗೆನಾಡು ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ಭಾಗವತಿಕೆಯ ಬಾಲಪಾಠದಿಂದ ಅಭ್ಯಾಸ ಆರಂಭಿಸಿದ ಇವರು 2016 ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 5ನೇ ಮೇಳದಲ್ಲಿ ಸಂಗೀತಗಾರನಾಗಿ ಪಟ್ಲ ಭಾಗವತರ ಜೊತೆ ಬಿಡುವಿನ ವೇಳೆಯಲ್ಲಿ ಹೋಗುತ್ತಿದ್ದರು.


ಶ್ರೀರಾಮ, ಅರ್ಜುನ, ಷಣ್ಮುಖ, ಸುದರ್ಶನ, ಅಭಿಮನ್ಯು, ಹನೂಮಂತ, ಹೀಗೆ ಹಲವು ಪ್ರಸಂಗದ ಮುಖ್ಯ ಪಾತ್ರವನ್ನು ಇವರು ಮಾಡಿದ್ದಾರೆ. ಮಾನಿಷಾದ, ದೇವಿ ಮಹಾತ್ಮೆ, ಸುದರ್ಶನ ವಿಜಯ, ಸುಧನ್ವ ಮೋಕ್ಷ, ವೀರಮಣಿ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಮಧ್ಯಮಾವತಿ, ಶುಧ್ಧ ಸಾವೇರಿ, ಗಂಭೀರ ನಾಟಿ, ಸಿಂಧೂ ಭೈರವಿ, ಅಮೃತ ವರ್ಷಿಣಿ ಇವರ ನೆಚ್ಚಿನ ರಾಗಗಳು.


ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಇವರ ನೆಚ್ಚಿನ ಭಾಗವತರು.

ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.


ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಹಾಗೂ ಇಂದಿನ ಸ್ಥಿತಿ ಗತಿ  ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಕಾಲಮಿತಿ ಪ್ರದರ್ಶನಕ್ಕೆ ಹೆಚ್ಚು ಆಸಕ್ತಿ ಹೊಂದಿರುವ ಕಲಾಭಿಮಾನಿಗಳು ಜೊತೆಗೆ ಕಲೆಯನ್ನು ಅತಿಯಾಗಿ ಪ್ರೀತಿಸುವ ಆರಾಧಿಸುವ ಹಾಗೂ ವಿಮರ್ಶಿಸುವ ಪ್ರೇಕ್ಷಕ ವರ್ಗವನ್ನು ಕಾಣುವಂತಾಗಿದೆ.

ಯಕ್ಷಗಾನ ಕರಾವಳಿಯ ಗಂಡುಕಲೆ ಎಂಬುದನ್ನು ಮನಸಾರೆ ಒಪ್ಪಿಕೊಂಡು ಆ ನಿಟ್ಟಿನಲ್ಲಿ ಸ್ಪಂದಿಸುವ ಕಲಾಸಕ್ತರು ಹಾಗೂ ಅವರ ಪ್ರೋತ್ಸಾಹದಿಂದ ಇಂದು ಯಕ್ಷಗಾನ ಕ್ಷೇತ್ರ ದಿಗಂತದಾಚೆಗೂ ಹೆಸರುವಾಸಿಯಾಗಿದೆ.


ಯಕ್ಷಗಾನ ಭಾಗವತಿಕೆ ಕ್ಷೇತ್ರದಲ್ಲಿ ಇನ್ನಷ್ಟು ಹೊಸತನವನ್ನು ಅಳವಡಿಸುವ ಚಿಂತನೆ.

ಯಕ್ಷಗಾನದ ಮೂಲ ಸೊಗಡಿಗೆ ಧಕ್ಕೆಯಾಗದಂತೆ ಉಳಿಸಿ ಬೆಳೆಸುವ ಬಧ್ಧತೆ.

ಮುಂದಿನ ವಿದ್ಯಾವಂತ ಯುವಜನರಲ್ಲಿ ಯಕ್ಷಗಾನದ ಅರಿವು ಹಾಗೂ ಆಸಕ್ತಿ ಮೂಡಿಸುವ ಪ್ರಯತ್ನ.

ಯಕ್ಷಧ್ರುವ ಪಟ್ಲ ಭಾಗವತರ ಫೌಂಡೇಶನ್ ಜೊತೆಗೂಡಿ ಯಕ್ಷಗಾನ ಕಲಾವಿದರಿಗೆ ನನ್ನ ಕೈಲಾದ ಸಹಾಯ ಮಾಡುವ ಪ್ರಯತ್ನ. ವಿದ್ಯಾವಂತ ವಿಮರ್ಶಾತ್ಮಕ ಚಿಂತನೆಯುಳ್ಳ ಕಲಾಸಕ್ತರೊಂದಿಗೆ ಒಡನಾಟ.

ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


2011 ಹಾಗೂ 2012ರಲ್ಲಿ ಪದವಿ ಪೂರ್ವ ಕಾಲೇಜಿನ ರಾಜ್ಯ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಪಡೆದಿರುತ್ತಾರೆ ಪ್ರಖ್ಯಾತ್.


ಕಟೀಲು ಹಾಗೂ ಪಾವಂಜೆ ಮೇಳಗಳಲ್ಲಿ ಭಾಗವತರ ರಜಾದಿನಗಳಲ್ಲಿ ಬದಲಿ ಭಾಗವತರಾಗಿಯೂ, ಸಸಿಹಿತ್ಲು ಶ್ರೀ ಭಗವತಿ ಮೇಳ ಹಾಗೂ ಮಾಣಿಲ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಗಳಲ್ಲಿ ಅತಿಥಿ ಭಾಗವತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಪ್ರಖ್ಯಾತ್.


ಬಿಡುವಿನ ವೇಳೆಯಲ್ಲಿ ಗುರುಗಳಾದ ಪಟ್ಲ ಭಾಗವತರ ಬಳಿ ರಾಗ, ತಾಳ ಹಾಗೂ ಯಕ್ಷಗಾನ ಛಂದಸ್ಸಿನ ಅಧ್ಯಯನ. ಪ್ರಸಂಗ ಪುಸ್ತಕ ಅಭ್ಯಾಸ, ಹೊಸ ಸಂಗೀತ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸುವ ಪ್ರಯತ್ನ ಇವರ ಹವ್ಯಾಸಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by: Dhanu K.P, Pooja Studio, G.P Bhat Photography, Sumukha Focus.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post