ಕಲಾಮಾತೆಯ ಕೃಪಾಕಟಾಕ್ಷವನ್ನು ಪಡೆದಿರುವ ಇವರು ಕಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿ, ನಿದೇ೯ಶಕನಾಗಬೇಕೆಂಬ ಕನಸನ್ನು ಹೊಂದಿದ್ದರೂ, ಕರಾಟೆಯಲ್ಲಿ ತನ್ನ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದವರು ಮನೋಜ್ ಆನಂದ್.
ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ನಿವಾಸಿ ಆನಂದ್ ಮತ್ತು ಜಾನಕಿ ದಂಪತಿಗಳ ಪುತ್ರ.
ಸ್ವತಃ ನಿರ್ದೇಶಕರೂ ನಟರೂ ಆಗಿರುವ ಮನೋಜ್ ಕರಾಟೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅತ್ಯುತ್ತಮ ನೃತ್ಯಗಾರರೂ ಆಗಿರುವ ಇವರು ಸಾಹಿತ್ಯ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ.
2021ರಲ್ಲಿ ಬೆಳ್ತಂಗಡಿಯಲ್ಲಿ ನಡೆದ 18ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2022ರಲ್ಲಿ ಬೆಳ್ತಂಗಡಿಯಲ್ಲಿ ನಡೆದ 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಉತ್ತಮ ಕಬಡ್ಡಿ ಆಟಗಾರರೂ ಹೌದು.
ಮಾಯೆ ಎಂಬ ವೆಬ್ ಸಿರೀಸ್ ಗೆ ನಿದೇ೯ಶನ ಹಾಗೂ ಪಂಚಾವತಾರ ಎಂಬ ವೆಬ್ ಸಿರೀಸ್‌ಗೆ ನಾಯಕ ನಟನಾಗಿ ನಟಿಸಿದ್ದ ಇವರು ಅಕ್ಷಮ್ಯ ಎಂಬ ಕನ್ನಡ ಚಲನಚಿತ್ರಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
'think before action' ಎಂಬ ಕಿರುಚಿತ್ರಕ್ಕೆ ಬೆಸ್ಟ್ ಎಡಿಟರ್ ಅವಾರ್ಡ್ ಪಡೆದಿರುವ ಮನೋಜ್ ಸ್ವತಃ ತಾವೇ ಬರೆದು ನಿರ್ದೇಶಿಸಿರುವ ತೆಂಬಾರೆ ಎಂಬ ಕಿರುಚಿತ್ರಕ್ಕೆ ನ್ಯಾಷನಲ್ ಬೆಸ್ಟ್ ಪ್ರೊಡಕ್ಷನ್ ಡಿಸೈನ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
'ಆ ಕೇಶರಾಶಿಯ ಬೆಡಗಿ' ಎಂಬ ಕಾದಂಬರಿಯನ್ನು ಬರೆಯುತ್ತಿರುವ ಮನೋಜ್ ಈ ವರ್ಷ ಅದರ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.
ಕಲಾಕ್ಷೇತ್ರದ ಹಲವು ಮಜಲುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮನೋಜ್ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ದ. ಕ.ಜಿ.ಪ ಕಿರಿಯ ಪ್ರಾಥಮಿಕ ಶಾಲೆ ಮುಂಡ್ರುಪ್ಪಾಡಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಶ್ರೀ. ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ, ಪ್ರೌಡ ಶಿಕ್ಷಣವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದಲ್ಲಿ, ಪದವಿ ಪೂರ್ವಶಿಕ್ಷಣವನ್ನ SDM PU College Ujire, ಪದವಿ ಶಿಕ್ಷಣವನ್ನು SDM Degree College (Autonomous) Ujire ಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಕಂಪೆನಿ ಸೆಕ್ರೆಟರಿ ಕೋರ್ಸ್ ಅನ್ನು yes ಅಕಾಡೆಮಿಯಲ್ಲಿ ಪಡೆಯುತ್ತಿದ್ದಾರೆ.
"ತಾನೊಬ್ಬ ನಿರ್ದೇಶಕ ಮತ್ತು ನಟ ಹಾಗಾಗಿ ಮಾರ್ಷಲ್ ಆರ್ಟ್ ಕಲಿಯಬೇಕು ಎಂದು ಎನಿಸಿತು ಆದರೆ ಅದು ನನ್ನನು ಈ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದು ತಿಳಿದಿರಲಿಲ್ಲ.
ನಾನು ಇದುವರೆಗೂ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ಬೆನ್ನು ತಟ್ಟಿದ್ದು ನನ್ನ ತಂದೆ ತಾಯಿ ಹಾಗೂ ಗುರುಗಳು" ಎಂದು ಹೇಳುತ್ತಾರೆ ಮನೋಜ್.
ತನ್ನಲ್ಲಿನ ಕಲೆಯನ್ನು ಸಮಾಜದೆದುರು ತೆರೆದಿಟ್ಟಿರುವ ಮನೋಜ್ ರವರಿಗೆ ತಾನು ಕನ್ನಡ ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕನಾಗಬೇಕು ಎಂಬ ಕನಸನ್ನು ಹೊಂದಿದ್ದಾರೆ. ಅದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಇವರ ಶ್ರಮಕ್ಕೆ ಪ್ರತಿಫಲ ಸಿಗಲಿ, ಇವರ ಕನಸು ನನಸಾಗಲಿ ಎಂಬ ಆಶಯ ನಮ್ಮದು.
-ಸರೋಜ ಪಿ ಜೆ ನೆಲ್ಯಾಡಿ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ