ಪುತ್ತೂರು ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆ

Upayuktha
0

 

ಪುತ್ತೂರು: ಪುತ್ತೂರು ಭಟ್ ಬಯೋಟೆಕ್ ಇಂಡಿಯಾ ಬೆಂಗಳೂರು ಮತ್ತು ಅಂಗ ಸಂಸ್ಥೆ ನವಚೇತನ್ ರಿಟಾಯರ್ಮೆಂಟ್ ಟೌನ್ ಶಿಪ್ ಶಾಂತಿಗೋಡು ವತಿಯಿಂದ ಸಂಸ್ಥೆಯ ಸ್ಥಾಪಕ ಮತ್ತು ಮ್ಯಾನಜಿಂಗ್ ಡೈರೆಕ್ಟರ್ ಡಾ. ಶಾಮ್ ಭಟ್ ಮತ್ತು ಸುಶೀಲ ಶಾಮ ಭಟ್ ಅವರು ಪುತ್ತೂರು ಸರಕಾರಿ ಅಸ್ಪತ್ರೆಗೆ 8 ಲಕ್ಷ ರೂ. ಮೌಲ್ಯದ 14 ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.


ಶಾಸಕ ಸಂಜೀವ ಮಠಂದೂರು ಅವರ ಮೂಲಕ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜನರ ಸಹಭಾಗಿತ್ವದಿಂದ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವಾಸದ ಸೇವೆಯೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಕೊಡುವ ಕೆಲಸ ಆಗುತ್ತಿದೆ ಎಂದರು.


ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಮತ್ತು ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಆಸ್ಪತ್ರೆಯ ಪರವಾಗಿ ಸ್ವೀಕರಿಸಿದರು.


ಭಟ್ ಬಯೋಟೆಕ್ ನ ಡಾ. ಶಾಮ ಭಟ್ ಮಾತನಾಡಿ, ತವರು ಜಿಲ್ಲೆಯ ಜನತೆಗೆ ಪುತ್ತೂರಿನಲ್ಲಿ ನವಚೇತನ ಹೆಸರಿನಲ್ಲಿ ಶಾಂತಿಗೋಡಿನಲ್ಲಿ ಬಡವಾಣೆಯೊಂದನ್ನು ನಿರ್ಮಿಸಿ ಹಿರಿಯರಿಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಿದ್ದೆವೆ. ಈ ನಡುವೆ ಕೋವಿಡ್ ಸಂದರ್ಭದಲ್ಲಿ 2ನೇ ಅಲೆಯ ಬಳಿಕ 3ನೇ ಅಲೆಯ ಜಾಗ್ರತೆಗಾಗಿ ಆರೋಗ್ಯದ ಸುರಕ್ಷತೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ನೆರವು ನೀಡಬೇಕೆಂದು ಈಗಾಗಲೇ 5 ಆಕ್ಸಿಜನ್ ಕ್ಕಾನ್ಸೆಂಟ್ರೇಟರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ನೀಡಿದ್ದು, ಹೆಚ್ಚುವರಿಯಾಗಿ 14 ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯಾಗಿ ನೀಡಿದ್ದೇವೆ ಎಂದರು.


ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಫೀಕ್ ದರ್ಬೆ, ಕೃಷ್ಣ ನಾಯ್ಕ್ ಪಿ. ಎಂ, ನವಚೇತನದ ಮ್ಯಾನೇಜರ್ ಗೋಪಾಲಕೃಷ್ಣ ಕೆ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top