|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆ - ಕೆಬಿಲ್ ಕೌನ್ ಬನೇಗಾ ಉದ್ಯಮಪತಿಯ ಬಹುಮಾನ ವಿತರಣ ಸಮಾರಂಭ

ನಿಟ್ಟೆ - ಕೆಬಿಲ್ ಕೌನ್ ಬನೇಗಾ ಉದ್ಯಮಪತಿಯ ಬಹುಮಾನ ವಿತರಣ ಸಮಾರಂಭ

ನಿಟ್ಟೆ: ಕೆಬಿಲ್ ಕೌನ್ ಬನೇಗಾ ಉದ್ಯಮಪತಿಯ ಬಹುಮಾನ ವಿತರಣ ಸಮಾರಂಭ ಡಿ. 28ರಂದು ಮಂಗಳೂರಿನ ಓಷನ್ ಪರ್ಲ್ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು. ಈ ದೆಸೆಯಲ್ಲಿ ಎ.ಐ.ಸಿ- ನಿಟ್ಟೆ ಹಾಗು ಕರ್ನಾಟಕ ಬ್ಯಾಂಕ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದರು.


ತಮಗೆಲ್ಲ ತಿಳಿದಿರುವ ಹಾಗೆ ಹಿಂದೆ ಕೌನ್ ಬನೇಗಾ ಉದ್ಯಮಪತಿ ಸ್ಪರ್ಧೆಯನ್ನು ಅದರಲ್ಲಿ ಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಉದ್ಯಮಶೀಲತೆಯನ್ನು ಬೆಂಬಲಿಸಲು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಭಾಗದ ಯುವಕರು ಹಾಗು ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಂಗಳೂರು, ಕಾರವಾರ, ಉಡುಪಿ ಜಿಲ್ಲೆಗಳಿಗೆ ಈ ಸ್ಪರ್ಧೆ ಸೀಮಿತವಾಗಿತ್ತು. ಸುಮಾರು 300 ಹೊಸ ಹೊಸ ವಿಚಾರಗಳ ಯೋಜನಾ ಪ್ರಸ್ತಾವನೆಗಳನ್ನು ಬೇರೆ ಬೇರೆ ವ್ಯಕ್ತಿಗಳು ಸಲ್ಲಿಸಿದರು. ಅದರಲ್ಲಿ ಸುಮಾರು 20 ಸೂಕ್ತವಾಗಿರುವಂತಹ ವಿಚಾರಗಳನ್ನು ಆಯ್ಕೆ ಮಾಡಲಾಗಿ ತದನಂತರ ಆಯ್ಕೆಗೊಂಡ ಸ್ಪರ್ದಿಗಳು ತಮ್ಮ ವಿಚಾರಗಳನ್ನು ಹಾಗು ಯೋಜನೆಗಳನ್ನು ನಿರ್ಣಾಯಕ ತಂಡದ ಮುಂದೆ ಮಂಡಿಸಿದರು. ಇದರಲ್ಲಿ ಮುಖ್ಯವಾಗಿ ಕೃಷಿ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ, ಹಾಗು ವಿಶೇಷ ಕೆಟಗರಿಗೆ ಸಂಬಂದಿಸಿದ ವಿಚಾರಗಳನ್ನು ಮಂಡಿಸಲಾಗಿತ್ತು. ಆ ಒಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ಅಭ್ಯರ್ಥಿಗಳಿಗೆ ಇಂದು ಒಂದು ಲಕ್ಷ ರೂಪಾಯಿ ಬಹುಮಾನ ಹಣವನ್ನು ಹಾಗು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.


ವಿಶೇಷ ಕೆಟಗರಿಯಲ್ಲಿ ಸೇಮ್ ಇಕೋಲ ಫ್ಯೂಚರಿಸ್ಟಿಕ್ ನಾನೋ ಸಿಮೆಂಟ್ ಕಂಪನಿಯವರು ತಮ್ಮ ವಿಚಾರಗಳನ್ನು ಮಂಡಿಸಿದರು. ಅದೇ ರೀತಿ ಆರೋಗ್ಯ ತಂತ್ರಜ್ಞಾನದಲ್ಲಿ ಹಿಮೋಡಿಲಿಝೆರ್ , ಕೃಷಿ ತಂತ್ರಜ್ಞಾನ ವಿಭಾಗದಲ್ಲಿ ಆತ್ಮ ನಿರ್ಭರ್ ಗೌ ಶಾಲಾ ವಿಭಾಗದಲ್ಲಿ ಕಾರ್ಬಾರ್ ಎಂಬ ಒಟ್ಟು 4 ಹೊಸ ಯೋಜನಾ ವಿಚಾರಗಳನ್ನು ಆಯ್ಕೆ ಮಾಡಲಾಗಿತ್ತು. ಇದಲ್ಲದೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಬಹುಮಾನವನ್ನು ಕೂಡ ನೀಡಲಾಗಿತ್ತು. ಈ ವಿಶೇಷ ಬಹುಮಾನವನ್ನು ಡಾ. ಅರುಣ್ ಮಯ್ಯರವರ ಲೆಜಿರ್ ಶೂ ಅನ್ನುವ ಉತ್ಪನಕ್ಕೆ ನೀಡಲಾಗಿದೆ.


ಈ ಒಂದು ಬಹುಮಾನವಿತಾರನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ಬ್ಯಾಂಕಿನ ನಿರ್ವಾಹಕ ನಿರ್ದೇಶಕರು ಹಾಗು ಮುಖ್ಯ ಕಾರ್ಯ ನಿರ್ವಾಣ ಅಧಿಕಾರಿಗಳಾದ ಶ್ರೀ. ಎಂ. ಎಸ್ ಮಹಾಬಲೇಶ್ವರ್ ರವರು ಮುಖ್ಯ ಅತಿಥಿಗಳಾಗಿ ಅವರೊಂದಿಗೆ ಡಾ. ಮ್ ಶಾಂತಾರಾಮ್ ಶೆಟ್ಟಿ ಸಹಕುಲಾಧಿಪತಿ, ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿ , ಶ್ರೀ ಶಶಿಧರ್ ಪೈ ಮಾರೂರ್, ಅಧ್ಯಕ್ಷರು, ಕೆನರಾ ಚೇಂಬರ್ ಒಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಹಾಗು ಶ್ರೀ ಉಲ್ಲಾಸ್ ಕಾಮತ, ಜಂಟಿ ನಿರ್ವಾಹಕ ನಿರ್ದೇಶಕರು ಜ್ಯೋತಿ ಲ್ಯಾಬೊರೇಟರೀಸ್ ಲಿಮಿಟೆಡ್ , ಶ್ರೀ ಮಹಾದೇವ ಗೌಡ ಕಾರ್ಯನಿರ್ವಾಹಕ ನಿರ್ದೇಶಕರು ಡೀ ಮಂಡಲ ಪ್ರಾಪರ್ಟೀಸ್ ಹಾಗು ಡಾ. ಅಶೋಕ್ ಆಲೂರ್ ನಿರ್ದೇಶಕರು ರೈತ ಉತ್ಪದಕ ಸಂಸ್ಥೆಗಳ ಉತ್ಕ್ರಷ್ಟ ಕೇಂದ್ರ ಕರ್ನಾಟಕ ಸರಕಾರ ಬೆಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.


ಡಾ. ಎ.ಪಿ ಆಚಾರ್ ಈ ಕಾರ್ಯಕ್ರಮದ ಹಿನ್ನಲೆಯನ್ನು ಮಂಡಿಸುತ್ತಾ ಸಭೆಯಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ವರದಿಯನ್ನು ಸಲ್ಲಿಸಿದರು. ತದನಂತರ ಮಾತನಾಡಿದ ಶ್ರೀ ಮ್.ಸ್. ಮಹಾಬಲೇಶ್ವರ್ ರವರು ತಮ್ಮ ಅತಿಥಿಯ ಭಾಷಣದಲ್ಲಿ ಕರ್ನಾಟಕದಲ್ಲಿ ಅದರಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಈ ಸ್ಟಾರ್ಟ್- ಅಪ್ ಗಳ ಉತ್ತೇಜನ ಮಾಡುವಂತದು ತುಂಬಾ ಅವಶ್ಯಕತೆಯಿದೆ ಹಾಗು ಇದಕ್ಕೆ ಸಂಬಂಧಿಸಿದಂತೆ ಎ.ಐ.ಸಿ- ನಿಟ್ಟೆ ಕೇಳಿರುವ, ಎಲ್ಲ ಸಾಧ್ಯವಿದ್ದ ಬೆಂಬಲವನ್ನು ನೀಡಲಾಗುವುದೆಂದು ತಿಳಿಸಿದರು.


ಶ್ರೀ ಉಲ್ಲಾಸ್ ಕಾಮಾತ್ ರವರು ತಮ್ಮ ಭಾಷಣದಲ್ಲಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದ ಎಲ್ಲ ಸ್ಟಾರ್ಟ್- ಅಪ್ ಗಳಿಗೆ ಮುಂಬರುವ ದಿನಗಳಲ್ಲಿ ಅವರಿಗೆ ಬೇಕಾಗಿರುವಂತಹ ಎಲ್ಲ ಮಾರ್ಗದರ್ಶನವನ್ನು ನೀಡುವಮುಕಾಂತರ ವಿಶ್ವದಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಸ್ಟಾರ್ಟ್- ಅಪ್ ಗಳಾಗಿ ಪ್ರಾರಂಭವಾಗಲು ಅವರಿಗೆ ಸಹಾಯ ಮಾಡುವುದಾಗಿ ಘೋಷಿಸಿದರು. ಅದೇ ರೀತಿ ಶ್ರೀ ಮಹಾದೇವ ಗೌಡ ಮಾತನಾಡುತ್ತಾ ಕೃಷಿ ವಿಭಾಗದಲ್ಲಿರುವ ಸ್ಟಾರ್ಟ್- ಅಪ್ ಗಳು ಅದರಲ್ಲಿಯು ವಿಶೇಷವಾಗಿ ಯುವ ಉದ್ಯಮಶೀಲರಿಗೆ ತಮ್ಮ ಬೆಂಬಲವನ್ನು ನೀಡುವುದಾಗಿಯೂ ಹಾಗು ಒಟ್ಟು ೧೦ ಸ್ಟಾರ್ಟ್-ಅಪ್ ಗಳಿಗೆ ಹಣಕಾಸು ನೀಡುವುದಾಗಿ ಘೋಷಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ. ಅಶೋಕ್ ಆಲೂರ್ ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಕೌನ್ ಬನೇಗಾ ಉದ್ಯಮಪತಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಎಲ್ಲ ರೀತಿಯ ಬೆಂಬಲ ಹಾಗು ಆಶಾದಾಯಕ ಭರವಸೆಯನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಮಹಾ ವ್ಯವಸ್ಥಾಪಕರಾದ ಶ್ರೀ ವಿನಯ ಭಟ್ ನಮ್ಮ ಕುಡ್ಲ ಚನ್ನೆಲಿನ ಮುಖ್ಯಸ್ಥರಾದ ಶ್ರೀ ಲೀಲಾಕ್ಷ ಕರ್ಕೇರ, ವಿಗ್ನಾರ್ತ ಹಿಂದೂಸ್ತಾನ್ ಆಗ್ರೋ ಟೆಕ್ನಾಲಾಜಿನ ನಿರ್ದೇಶಕರು ಶ್ರೀ ತಿಲಕ್ ಭಾಗವಹಿಸಿದ್ದರು. ಎ.ಐ.ಸಿ- ನಿಟ್ಟೆಯ ಪುನೀತ್ ರೈ ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ದೀಕ್ಷಾ ರೈ ವಂದನಾರ್ಪಣೆಯನ್ನು ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post