ಮಂಗಳೂರು ವಿವಿ: ನುಡಿಕನ್ನಡ ಪುಸ್ತಕ ಬಿಡುಗಡೆ

Upayuktha
0

 


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಪ್ರಕಟಿಸಲಾದ ನುಡಿಕನ್ನಡ, ಕನ್ನಡೇತರರಿಗೆ ಕನ್ನಡ ಪಠ್ಯ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಬುಧವಾರ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.


ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿಯ ಪ್ರಸಾರಾಂಗದ ವತಿಯಿಂದ ಪ್ರಕಟಿಸಲಾಗಿರುವ 'ನುಡಿಕನ್ನಡ' ಪುಸ್ತಕ  ಕನ್ನಡೇತರರಿಗೂ ಅತ್ಯಂತ ಸುಲಭವಾಗಿ ಕನ್ನಡ ಕಲಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.


ಇದರಲ್ಲಿ ಅಕ್ಷರಗಳ ಪರಿಚಯ, ವ್ಯಂಜನಗಳು, ಕಾಗುಣಿತ, ಒತ್ತಕ್ಷರಗಳು, ಪದಸಂಪತ್ತು, ಸರ್ವನಾಮಗಳು ಹಾಗೂ ಸಾಮಾನ್ಯವಾಗಿ ಜನಬಳಕೆಯ ಪದಗಳ ಬಗ್ಗೆ ಬಹಳ ಅತ್ಯುತ್ತಮ ಮಾಹಿತಿ ದೊರೆಯುತ್ತದೆ. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.


ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ಕೃತಿ ರಚನೆಯ ಅಧ್ಯಯನ ಮಂಡಳಿ ಹಾಗೂ ಸಂಪಾದಕ ಮಂಡಳಿ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯನಿರ್ವಾಹಕ ಸಂಪಾದಕ ಡಾ ಮಾಧವ ಎಂ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾರಾಂಗದ ನಿರ್ದೇಶಕ ಪ್ರೊ ಸೋಮಣ್ಣ ಸ್ವಾಗತಿಸಿದರು. ಪ್ರೊ ಪ್ರಶಾಂತ್ ನಾಯ್ಕ ವಂದಿಸಿದರು. ಪ್ರಸಾರಾಂಗದ ಸಿಬ್ಬಂದಿ ಭರತ್ ವಿ‌.ಜೆ ಹಾಗೂ ಜೆಸ್ಸಿ ಮೇರಿ ಡಿ ಸೋಜಾ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top