ಮೌನಿಯಾಗಿದ್ದು ನೀ ವಾಗ್ಮಿಯಾಗು...

Arpitha
0

ಸಮಾಜ ಹೀಗೆಂದರೆ ಏನನ್ನುತ್ತೋ, ಹಾಗೆ ಮಾಡಿದರೆ ಏನು ನುಡಿಯುತ್ತೋ ಎಂದು ಯೋಚಿಸುತ್ತಾ ಕುಳಿತರೆ ನಾವಂದುಕೊಂಡಂತೆ  ಅದೇನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಜೀವನ ದೊಡ್ಡದಿದೆ, ಸಾಧಿಸುವುದು ಅಗಾಧವಿದೆ. ಹಾಗಿರುವಾಗ ಅದೇಕೆ ಟೀಕೆಗಳತ್ತ ಗಮನ ಅಲ್ಲವೇ......??

ಮನುಷ್ಯ ಸಂಘಜೀವಿ. "ಮಾತು" ಅವನ ಆಯುಧ. ಒಂದು ಮಾತಿಂದ ಮನಸ್ಸು ಖುಷಿಯಾಗಬಹುದು, ಇನ್ನೊಮ್ಮೆ ಅದೇ ಮಾತಿಂದ ಮನಸ್ಸೂ ಒಡೆಯಬಹುದು. 'ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು ' ಎಂಬ ಗಾದೆ ಬಹುಶಃ ಅದಕ್ಕೆ ಅನ್ಸುತ್ತೆ ಸೃಷ್ಠಿಯಾಗಿರುವುದು.

ಅನುಭವಗಳಿಂದ ಪಾಠ ಕಲಿತ ಮಾನವ ಮನವನ್ನು ತಿದ್ದುವುದಿಲ್ಲ, ವಿದ್ಯೆ ಕಲಿತ ಮಾನವ ತನ್ನ ನಡತೆಯ ಬಗ್ಗೆ ತಿಳಿದುಕೊಳ್ಳಲು  ಹೋಗುವುದಿಲ್ಲ....

ಟೀಕೆಗಳು ಸಾವಿರವಿರಲಿ, ವಾದ ವಿವಾದಗಳು ಅದೆಷ್ಟೇ ಬರಲಿ....ಗುರಿಯತ್ತ ಮಾತ್ರ ನಮ್ಮ ದೃಷ್ಠಿಯಿದ್ದರೆ, ಸಾಧನೆಯೇ ಜೀವನ ಎಂಬ ಉಕ್ತಿ ತಲೆಯಲ್ಲಿ ಅಚ್ಚೊತ್ತಿದ್ದರೆ ಯಾವ ಮಾತು ನೋವು ಕೊಡುವುದಿಲ್ಲ.

ಅದಕ್ಕೆ ಮೌನಿಯಾಗಿದ್ದು ಕೆಲಸ ಮಾಡಬೇಕು. ನಾವು ಮಾಡುವ ಕಾರ್ಯ ನಮ್ಮ ಜೀವನಕ್ಕೆ ಶೋಭೆ ತರಬೇಕು. ಒಟ್ಟಾರೆಯಾಗಿ ಮೌನಿಯಾಗಿದ್ದು ನಾವು ವಾಗ್ಮಿಗಳಾಗಬೇಕು. ಮಾತು ಬಲ್ಲವರ ಮಾತಿನಲ್ಲಿ ನಮ್ಮ ಹೆಸರೇ ಮಾತಾಗಿರಬೇಕು. ಏನಂತೀರಾ...?

-ಅರ್ಪಿತಾ ಕುಂದರ್


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top