ಸಿನಿಮಾ ವರದಿಗಾರನಾಗಲು ಸಮಯಪ್ರಜ್ಞೆ ಮುಖ್ಯ: ಕಿರಣ್ ಚಂದ್ರ

Upayuktha
0

 

ಉಜಿರೆ: ಚಿತ್ತಾವಧಾನ, ಸಮಯಪ್ರಜ್ಞೆ, ಏಕಾಗ್ರತೆ ವರದಿಗಾರನಿಗೆ ಬಹಳ ಅಗತ್ಯವಾದ ಅಂಶಗಳಾಗಿದ್ದು ಭಿನ್ನ ಯೋಚನಾ ಕ್ರಮದಿಂದಲೇ ಉತ್ತಮ ವರದಿಗಾರನಾಗಬಹುದು ಎಂದು ಝೀ ಕನ್ನಡ ವಾಹಿನಿಯ ಸಿನಿಮಾ ಬರಹಗಾರ, ಮೂವಿ ಕಂಟೆಂಟ್ ರೈಟರ್ ಕಿರಣ್ ಚಂದ್ರ ಹೇಳಿದರು.


ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗೂಗಲ್ ಮೀಟ್ ನ ಮೂಲಕ ಏರ್ಪಡಿಸಿದ್ದ 'ಸಿನೆಮಾ ವರದಿ' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪ್ರೆಸ್ ಮೀಟ್ ಗಳಲ್ಲಿ ಪ್ರಶ್ನೆ ಕೇಳುವ ಸಂದರ್ಭ ವಹಿಸಬೇಕಾದ ಎಚ್ಚರಿಕೆ ಹಾಗೂ ಪೂರ್ವ ತಯಾರಿಯ ಬಗೆಗೆ ಅವರು ಮಾಹಿತಿ ನೀಡಿದರು.


ಸಿನಿಮಾ ತಂಡ ಅಥವಾ ನಿರ್ದೇಶಕ, ನಿರ್ಮಾಪಕರೊಂದಿಗೆ ಒಳ್ಳೆಯ ಸಂಪರ್ಕ ಹೊಂದಿರಬೇಕು. ಸಾಮಾಜಿಕ ಜಾಲತಾಣವನ್ನು ಗಮನಿಸುವ ಹಾಗೂ ವಾರ್ತೆಗಳನ್ನು ವೀಕ್ಷಿಸುವ ಮೂಲಕ ಅಪ್ಡೇಟ್ ಆಗಿರಬೇಕು ಎಂದು ಅವರು ತಿಳಿಸಿದರು.


ವಿಭಾಗದ ಪ್ರಾಧ್ಯಾಪಕಿ ಶೃತಿ ಜೈನ್ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಶ್ರವಣ್ ಉಪಾಧ್ಯಾಯ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top