ಮುಳಿಯ ಆ್ಯಂಟಿಕ್ ಕಲೆಕ್ಷನ್ ಗೆ ಚಾಲನೆ

Upayuktha
0

 

ಪುತ್ತೂರು: ಇಲ್ಲಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ ನಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮುಳಿಯ ಆ್ಯಂಟಿಕ್ ಫೆಸ್ಟ್ ನ ಉದ್ಘಾಟನೆಯನ್ನು ಶ್ರೀಮತಿ ಸೌಮ್ಯಲತ, ನಿರೀಕ್ಷಕರು ಅಬಕಾರಿ ಇಲಾಖೆ, ಬೆಳ್ತಂಗಡಿ ತಾಲೂಕು ಇವರು ನೆರವೇರಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮುಳಿಯ ಸಂಸ್ಥೆ ಆಯೋಜಿಸಿದ ಆ್ಯಂಟಿಕ್ ಫೆಸ್ಟ್ ಗೆ ಶುಭ ಹಾರೈಸಿದರು ಮತ್ತು ಮುಳಿಯದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.


ಡಿಸೆಂಬರ್ 25ರಿಂದ ಪ್ರಾರಂಭವಾಗಲಿರುವ ಈ ಉತ್ಸವವು ಜನವರಿ 3ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ವಿನ್ಯಾಸಗಳನ್ನೊಳಗೊಂಡ ಆ್ಯಂಟಿಕ್ ನೆಕ್ಲೇಸ್, ಆ್ಯಂಟಿಕ್ ಜುಮ್ಕ, ಆ್ಯಂಟಿಕ್ ಬಳೆ ಆ್ಯಂಟಿಕ್ ಹಾರ, ಆ್ಯಂಟಿಕ್ ಕಿವಿಯೋಲೆ, ಆ್ಯಂಟಿಕ್ ಪೆಂಡೆಂಟ್ ಹಾಗೂ ವಿಶಿಷ್ಟ ವಿನ್ಯಾಸದ 10 ಇನ್ 1 ಆಭರಣಗಳು, 5 ಇನ್ 1 ಆಭರಣಗಳು, 2 ಗ್ರಾಂನಿಂದ 150 ಗ್ರಾಂ ವರೆಗಿನ ಆಭರಣಗಳು, ಮೈಕ್ರೋ ಆ್ಯಂಟಿಕ್ ಆಭರಣಗಳು, ಮಹತಿ ಕಲೆಕ್ಷನ್ಸ್, ಬೋರ್ಮಲ ಡಿಸೈನ್, ಬೀಡೆಡ್ ಆ್ಯಂಟಿಕ್ ಆಭರಣಗಳ ವಿಶಿಷ್ಟ ಸಂಗ್ರಹವಿರುತ್ತದೆ.


ಟೆನ್ ಇನ್ ವನ್ ಆಭರಣ ಮತ್ತು ಫೈ ಇನ್ ವನ್ ಆಭರಣಗಳ ವಿಶೇಷತೆ


ಆ್ಯಂಟಿಕ್ ಆಭರಣಗಳು ವಿಶೇಷ ವಿನ್ಯಾಸಗಳಿಂದ ಕೂಡಿದ್ದು ಅತ್ಯಂತ ಪ್ರಾಮುಖ್ಯತೆಯಿಂದ ಕೂಡಿರುವ ಆಭರಣಗಳು ಇದಾಗಿದ್ದು, ಆಧುನಿಕ ಯುಗದಲ್ಲಿ ಹೆಚ್ಚು ಪ್ರಖ್ಯಾತೆಗೊಂಡಿರುತ್ತದೆ. 10 ಇನ್ 1 ಆಭರಣವನ್ನು ದ್ವಿಮುಖವಾಗಿ ಸೊಂಟ ಪಟ್ಟಿ, ಕೈತೋಳುಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 10 ವಿಭಾಗಗಳಲ್ಲಿ ಉಪಯೋಗಿಸಬಹುದು. 5 ಇನ್ 1 ಆಭರಣಗಳನ್ನು ಏಕಮುಖವಾಗಿ ಸೊಂಟ ಪಟ್ಟಿ, ತೋಳಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 5 ವಿಭಾಗಗಳಲ್ಲಿ ಉಪಯೋಗಿಸಬಹುದು.


ಸಂಸ್ಥೆಯ ಪ್ರಬಂಧಕರಾದ ಶ್ರೀ ಗುರುರಾಜ್ ಅವಭೃತ ಅವರು ಸ್ವಾಗತಿಸಿ, ಫೆಸ್ಟ್ ವಿಶೇಷತೆಯನ್ನು ತಿಳಿಸಿದರು. ಉಪ ಶಾಖಾ ಪ್ರಬಂಧಕರಾದ ಶ್ರೀ ಸತ್ಯ ಗಣೇಶ್ ಅವರು ವಂದಿಸಿದರು. ಸಿಬ್ಬಂದಿ ಕು. ದೀಪಿಕ ಅವರು ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಶ್ರೀ ಜಯಂತ್‌ರವರು ಉಪಸ್ಥಿತರಿದ್ದರು. ಪುತ್ತೂರು ಶಾಖಾ ಪ್ರಬಂಧಕರಾದ ನಾಮ್‌ದೇವ್ ಮಲ್ಯ, ಉಪ ಪ್ರಬಂಧಕರಾದ ಪ್ರವೀಣ್, ಯತೀಶ್‌ರವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top