ಮೂಡುಬಿದಿರೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರಾಮ್ಕೊ ಸಿಮೆಂಟ್ ಕಂಪೆನಿಯ ಸಹಾಯಕ ಜನರಲ್ ಮ್ಯಾನೇಜರ್ ಸೂರಜ್ ಕುಮಾರ್ ಹೇಳಿದರು.
ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕ್ವಾಲಿಟಿ ಎಶುರೆನ್ಸ್, ಕ್ವಾಲಿಟಿ ಕಂಟ್ರೋಲ್ ಹಾಗೂ ಕ್ವಾಟಿಂಟಿ ಸರ್ವಯರ್ ಕೋರ್ಸಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಟಿಫಿಕೇಟ್ ಕೋರ್ಸುಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನ ಆದ್ಯತೆಯೂ ಆಗಿದೆ. ವಿಶ್ವಮಟ್ಟದಲ್ಲಿ ಉದ್ಯೋಗ ಗಳಿಸಲು ತಾಂತ್ರಿಕ ಶಿಕ್ಷಣದ ಜತೆಯಲ್ಲಿ ಕೌಶಲ್ಯಾಭಿವೃದ್ಧಿಯೂ ಆಗಬೇಕೆಂದರು.
ಕಾರ್ಯಕ್ರಮದ ಸಂಯೋಜಕ ಪ್ರೊ. ವರದರಾಜ ಕೆ ಎಸ್ ಅವರು ಕೋರ್ಸ್ ನ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಮಧ್ಯಪ್ರಾಚ್ಯ ರಾಷ್ಟçಗಳಲ್ಲಿ ಬಹುಬೇಡಿಕೆಯಲ್ಲಿರುವ ಫಯರ್ ಆ್ಯಂಡ್ ಸೇಫ್ಟಿ, ಎಮ್‌ಇಪಿ, ಆಯಿಲ್ ಹಾಗೂ ಗ್ಯಾಸ್ ಮುಂತಾದ ವಿಷಯಗಳನ್ನು ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ಆಳವಡಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಮಂಗಳೂರಿನ ಸಿಐಸಿ ರೆಡಿಮಿಕ್ಸ್ ಸಂಸ್ಥೆಯ ಸುಧೀರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಸಿವಿಲ್ ವಿಭಾಗ ಮುಖ್ಯಸ್ಥ ಡಾ. ಅಜಿತ್ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರೊ. ಅರುಣ್ ಕುಮಾರ್ ವಂದಿಸಿದರು, ವಿದ್ಯಾರ್ಥಿ ನಳನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ