|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರುಡ್‌ಸೆಟ್‌ನಲ್ಲಿ ನಡೆಯುವ ಉಚಿತ ತರಬೇತಿಗಳು

ರುಡ್‌ಸೆಟ್‌ನಲ್ಲಿ ನಡೆಯುವ ಉಚಿತ ತರಬೇತಿಗಳು

 


ಉಜಿರೆ: ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್‌ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ/ ಉದ್ಯೋಗಳನ್ನು ಕಲ್ಪಿಸಿರುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ತರಬೇತಿಗಳ ವಿವರಗಳು ಹೀಗಿವೆ.


1. ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ: 09.12.2021 ರಿಂದ 18.12.2021 (10 ದಿನಗಳು)

2. ಸಿಸಿ ಕ್ಯಾಮರಾ ಮತ್ತು ಸೆಕ್ಯೂರಿಟಿ ಅಲಾರಮ್ ಅಳವಡಿಕೆ: 15.12.2021 ರಿಂದ 27.12.2021 (13 ದಿನಗಳು)


ಮುಂದಿನ ದಿನಗಳಲ್ಲಿ ವಿದ್ಯುತ್ ಉಪಕರಣಗಳ ದುರಸ್ಥಿ, ಮಹಿಳೆಯರ ಬ್ಯೂಟಿ ಪಾರ್ಲರ್, ಮಹಿಳೆಯರ ವಸ್ತ್ರ ವಿನ್ಯಾಸ, ಎಸಿ ಮತ್ತು ರೇಫ್ರೀಜರೇಟರ್ ದುರಸ್ಥಿ, ಉದ್ಯಮಶೀಲತಾ ತರಬೇತಿ, ಜೇನು ಕೃಷಿ, ರಬ್ಬರ್ ಟ್ಯಾಪಿಂಗ್, ಕಂಪ್ಯೂಟರ್ ಡಿಟಿಪಿ ಮತ್ತು ಕಂಪ್ಯೂಟರ್ ಹಾರ್ಡ್ವೇರ್ & ನೆಟ್‌ವರ್ಕಿಂಗ್ ಮುಂತಾದ ತರಬೇತಿಗಳನ್ನು ನಡೆಸಲಾಗುತ್ತದೆ. ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.


ಅಭ್ಯರ್ಥಿಗಳು ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರಬೇಕು, ಎ.ಪಿ.ಎಲ್. ಪಡಿತರ ಚೀಟಿ ಇರುವವರು, ಉದ್ಯೋಗ ಖಾತ್ರಿ ಚೀಟಿಯನ್ನು ಹೊಂದಿರಬೇಕು. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕರು ಅರ್ಜಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.rudsetujire.com) ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು 'ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ' ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಅಥವಾ 9591044014ಗೆ ಸಂಪರ್ಕಿಸಬಹುದು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post