||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸವೇರಾ ಅವರ ಸಮಾಜ ಸೇವೆ ಸ್ಮರಣೀಯ : ಡಾ. ಚೂಂತಾರು

ಸವೇರಾ ಅವರ ಸಮಾಜ ಸೇವೆ ಸ್ಮರಣೀಯ : ಡಾ. ಚೂಂತಾರು


ಗೃಹರಕ್ಷಕ ದಳದ ಉಳ್ಳಾಲ ಘಟಕದ ಸವೇರಾ ಡಿ’ಸೋಜಾ ರವರಿಗೆ ಸನ್ಮಾನ ಕಾರ್ಯಕ್ರಮ


ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕದ ಗೃಹರಕ್ಷಕರಾದ ಸವೇರಾ ಡಿ’ಸೋಜಾ, ಮೆಟಲ್ ಸಂಖ್ಯೆ 18, ಇವರಿಗೆ ದಿನಾಂಕ 15-12-2021ನೇ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಶಾಲು ಹೊದಿಸಿ, ಫಲಪುಷ್ಟ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.


ನಂತರ ಮಾತನಾಡಿ, ಗೃಹರಕ್ಷಕದಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರನ್ನು ಸಮಾಜ ಗುರತಿಸಬೇಕು ಎನ್ನುವ ದೃಷ್ಟಿಯಿಂದ ಕಳೆದ 5 ವರ್ಷಗಳಿಂದ ತಿಂಗಳ ಗೃಹರಕ್ಷಕ ಎಂದು ಸನ್ಮಾನ ಮಾಡುತ್ತಿದ್ದೇವೆ. ನಾವು ಈಗಾಗಲೆ ಸುಮಾರು 150 ಮಂದಿ ಗೃಹರಕ್ಷಕರನ್ನು ಗುರುತಿಸಿ ಸನ್ಮಾನ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಉಳ್ಳಾಲ ಘಟಕದ ಗೃಹರಕ್ಷರಾದ ಸವೇರಾ ಡಿ’ಸೋಜಾ ರವರು ಸುಮಾರು 25 ವರ್ಷಗಳಿಂದ ಗೃಹರಕ್ಷಕದಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


1996 ರಲ್ಲಿ ಗೃಹರಕ್ಷಕದಳ ಇಲಾಖೆಗೆ ಸೇರಿರುತ್ತಾರೆ. ಇವರು ಪೊಲೀಸ್ ಠಾಣಾ ಕರ್ತವ್ಯ, ಅಗ್ನಿಶಾಮಕ ದಳ ಕರ್ತವ್ಯ, ಅಂಚೆ ಕಛೇರಿ ಕರ್ತವ್ಯ, ವಿದ್ಯುತ್ ಜಾಗೃತಿ ದಳ, ರೈಲ್ವೆ ಇಲಾಖೆ, 1996 ರ ಬಳ್ಳಾರಿ ಲೋಕ ಸಭಾ ಚುನಾವಣೆ, ಮಧ್ಯಪ್ರದೇಶ, ಕೇರಳ, ಚೆನೈಯಲ್ಲಿ ನಡೆದ ವಿಧಾನ ಸಭಾ ಕರ್ತವ್ಯ ಹಾಗೂ ಈಗಿನ ಪ್ರಸ್ತುತ ಕೋವಿಡ್ ಮಾರ್ಷಲ್ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ನಾವು ಮಾಡುತ್ತಿರುವ ಸನ್ಮಾನದಿಂದ ಉತ್ತೇಜಿತರಾಗಿ ಇನ್ನಷ್ಟು ಸಮಾಜಸೇವೆ ಕೆಲಸಗಳನ್ನು ಮಾಡಲಿ ಎಂದು ನುಡಿದರು.


ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್, ಗೃಹರಕ್ಷಕರಾದ ಸುನೀಲ್ ಪೂಜಾರಿ, ಬಶೀರ್, ಸವದ್, ಖಾಲಿದ್, ಜೀವನ್, ಸುರೇಂದ್ರ, ಪುಷ್ಟಲತಾ, ದಿವ್ಯಾ, ರೇಖಾ, ನಳಿನಾಕ್ಷಿ, ಕತೀಜಮ್ಮ ಮುಂತಾದವರು ಉಪಸ್ಥಿತರಿದ್ದರು.


0 Comments

Post a Comment

Post a Comment (0)

Previous Post Next Post