ಬಿಬಿಎಂಪಿ, ಬಿಡಿಎ ಹಾಗೂ ಸರ್ಕಾರದ ನಾನಾ ಇಲಾಖೆಗಳು ಸೇರಿದಂತೆ ಕನ್ನಡ ಪರ ಸಂಸ್ಥೆಗಳು ಹಾಗೂ ಕನ್ನಡ ಶಾಲೆಗಳಿಗೆ ನಿವೇಶನಗಳನ್ನು ಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆ ಅವಧಿ ಮುಗಿದ ಬಳಿಕ ನಿವೇಶನಗಳ ನವೀಕರಣ ಸಂದರ್ಭದಲ್ಲಿ ಯಾವುದೇ ಷರತ್ತು ವಿಧಿಸದೆ ಪಾಲಿಕೆಯು ನಿರ್ಣಯ ಕೈಗೊಂಡಿದೆ.ಇದಕ್ಕೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.
ಇದು ಕನ್ನಡದ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದ್ದರಿಂದ ಕನ್ನಡ ಪರ ಸಂಘಟನೆಗಳು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿವೆ.