ಉಜಿರೆಯ ಎಸ್. ಡಿ.ಎಂ ಕಾಲೇಜು ವತಿಯಿಂದ ಪ್ರಸ್ತುತ ವಿಜ್ಞಾನ ವಿಷಯಗಳ ಕುರಿತು ವೆಬಿನಾರ್ ಸರಣಿ

Upayuktha
0

ಉಜಿರೆ: ಎಸ್.ಡಿ.ಎಂ ಮತ್ತು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಇವರ ಜಂಟಿ ಆಶ್ರಯದಲ್ಲಿ ವಿವಿಧ ಜನಪ್ರಿಯ ವಿಜ್ಞಾನ ವಿಷಯಗಳ ಕುರಿತು ಇತ್ತೀಚಿಗೆ ವೆಬಿನಾರ್ ಸರಣಿಯನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕರಾದ ಡಾಕ್ಟರ್ ಕೆವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿಜ್ಞಾನ ವಿಭಾಗದ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಉಪನ್ಯಾಸ ನೀಡಿ ಸಂವಾದ ನಡೆಸಿದರು.


ಆರು ದಿನಗಳ ಕಾಲ ನಡೆದ ವೇಬಿನಾರ್ ಸರಣಿಯಲ್ಲಿ ಸ್ಟಾರ್ ಗೆಜಿಂಗ್ ಕುರಿತು ಬೆಂಗಳೂರಿನ ಏರೋಸ್ಪೇಸ್ ಇಂಜಿನಿಯರ್ ಹಾಗೂ ಖಗೋಳ ತಜ್ಞ ಸತ್ಯಕುಮಾರ್, ಕಿಚನ್ ಕೆಮೆಸ್ಟ್ರೀ ಕುರಿತು ಸುರತ್ಕಲ್ ಎನ್.ಐ. ಟಿ.ಕೆ ಕೆಮಿಸ್ಟ್ರಿ ಪ್ರಾಧ್ಯಾಪಕ ಡಾ.ಅರುಣ್ ಮೋಹನ್ ಇಸ್ಲೂರ್, ಇಕೋ ಸೈಕೋಲೊಜಿ ಕುರಿತು ಮಂಗಳೂರು ಸರಕಾರಿ ಫಸ್ಟ್ ಗ್ರೇಡ್ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ಜಯಕರ ಬಂಡಾರಿ , ಗಣಿತ ಮತ್ತು ಸಾಮಾನ್ಯ ಜ್ಞಾನದ ಕುರಿತು ಉಡುಪಿ ಪಿ.ಪಿ.ಸಿ ಕಾಲೇಜು ಪ್ರಾಂಶುಪಾಲ ಡಾ.ರಾಘವೇಂದ್ರ ಎ, ರೋಬೋ ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಡುಪಿ ಬಂಟ್ಕಲ್ ಎಸ್.ಎಂ.ವಿ.ಐ ಟಿ.ಎಂ ಸ್ಟೂಡೆಂಟ್ ವೆಲ್ ಫೇರ್ ಆಫೀಸರ್ ಡಾ.ಸಿ.ಕೆ ಮಂಜುನಾಥ್ , ಹಾಗೂ ಇಂರ‍್ನೆಟ್ ಥಿಂಗ್ಸ್ ಇನ್ ಡೈಲಿ ಲೈಫ್ ವಿಷಯದ ಕುರಿತು ಉಜಿರೆ ಎಸ್.ಡಿ.ಎಂ.ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ ಶೈಲೇಶ್ ಕುಮಾರ್ ಉಪನ್ಯಾಸ ನೀಡಿದರು.


ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸೇರಿದಂತೆ ಬೆಳ್ತಂಗಡಿ ಪರಿಸರದ ವಿವಿಧ ಪ್ರೌಢಶಾಲೆಗಳ ವಿದ್ಯರ‍್ಥಿಗಳು ಮತ್ತು ಪ್ರಾಧ್ಯಾಪಕರು ಒಟ್ಟು ಅಂದಾಜು 500 ಮಂದಿ ಈ ವೇಬಿನಾರ್ ಸರಣಿಯ ಪ್ರಯೋಜನ ಪಡೆದುಕೊಂಡರು.


ಶ್ರೀ ಧ ಮ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕುಮಾರ್ ಹೆಗ್ಡೆ ವೆಬಿನಾರ್ ಸರಣಿಯನ್ನು ಸಂಯೋಜಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top