ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘಕ್ಕೆ 49 ಲಕ್ಷ ರೂ.ಲಾಭಾಂಶ: ಪ್ರಭಾಕರ ಪ್ರಭು

Upayuktha
0

ಸಿದ್ಧಕಟ್ಟೆ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದಲ್ಲಿ 2020-21 ನೇ ಸಾಲಿನಲ್ಲಿ 194.85 ಕೋಟಿ ವ್ಯವಹಾರ ನಡೆದಿದ್ದು, ಸುಮಾರು 49 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ರೂ.ಶೇ.10 ಡಿವಿಡೆಂಡ್ ನೀಡಲಾಗುವುದು, 28.38 ಕೋಟಿಗೆ  ಠೇವಣಿ ಹೆಚ್ಚಿಸಲಾಗಿದ್ದು, ಸಾಲ ಹೊರಬಾಕಿ 39.08 ಕೋಟಿಯಾಗಿದ್ದು, ಹೂಡಿಕೆ ರೂ. 3.88 ಕೋಟಿಯಿಂದ ರೂ. 6.27 ಕೋಟಿಗೆ ಏರಿಕೆ ಕಂಡಿದ್ದು, ದುಡಿಯುವ ಬಂಡವಾಳ ರೂ.28.32 ಕೋಟಿಯಿಂದ 48.68 ಕೋಟಿಗೆ ಏರಿಕೆಯಾಗಿದೆ ಎಂದು ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿರುತ್ತಾರೆ.


ಆಡಿಟ್ ವರ್ಗೀಕರಣದಲ್ಲಿ 'A' ತರಗತಿ ಪಡೆದಿದ್ದು, 2020-21 ನೇ ಸಾಲಿನಲ್ಲಿ 262 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿರುತ್ತಾರೆ. ರೂ.1.52 ಕೋಟಿ ಪಾಲು ಬಂಡವಾಳ ಜಮೆಯಾಗಿದೆ. ಸದ್ರಿ ವರ್ಷದಲ್ಲಿ 4105 'ಎ' ತರಗತಿಯ ಸದಸ್ಯರು ರೂ.4.11 ಕೋಟಿ ಪಾಲು ಬಂಡವಾಳ ಹೊಂದಿದೆ.


ಸಂಘದ ಸದಸ್ಯರ ಅವಶ್ಯಕತೆಗಳಿಗೆ ಅನುಗುಣವಾಗಿ ಒಟ್ಟು ರೂ.43.51 ಕೋಟಿ ಸಾಲ ನೀಡಲಾಗಿದ್ದು, ಇವರಲ್ಲಿ 1396 ರೈತ ಸದಸ್ಯರಿಗೆ ರೂ. 19.50 ಕೋಟಿ ಬೆಳೆಸಾಲ ವಿತರಿಸಲಾಗಿದೆ. 295 ರೈತ ಸದಸ್ಯರಿಗೆ ರೂ.7.64 ಕೋಟಿ ಕೃಷಿ ಅಭಿವೃದ್ದಿ ಸಾಲ ವಿತರಿಸಲಾಗಿದ್ದು, ರೂ.16.37 ಕೋಟಿ ಅಡವು ಸಾಲ ಸೇರಿದಂತೆ ಇನ್ನಿತರ ಸಾಲ ನೀಡಲಾಗಿದೆ. ಸಂಘದಲ್ಲಿ ಪಡಿತರ ಸಾಮಾಗ್ರಿ ರಾಸಾಯನಿಕ ಗೊಬ್ಬರ, ಕೀಟನಾಶಕ ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಸಿದ್ಧಕಟ್ಟೆ ಪ್ರಧಾನ ಕಛೇರಿಯ ಬಳಿ ಎಮ್. ಎಸ್. ಸಿ. ಯೋಜನೆಯಡಿಯಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಗೋದಾಮು ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಬಾಡಿಗೆ ಕಟ್ಟಡದಲ್ಲಿದ್ದ ಸಂಘದ ಅಣ್ಣಳಿಕೆ ಶಾಖೆಯು ರಾಯಿ ಗ್ರಾಮದ ಸಂಘದ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಸಂಘದ ಆರಂಬೋಡಿ ಮತ್ತು ರಾಯಿ ಶಾಖಾ ಕಛೇರಿಗಳು ಉತ್ತಮ ವ್ಯವಹಾರ ನಡೆಸುತ್ತಿವೆ.


ಹಡೀಲು ಬಿದ್ದ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡಲು ಉತ್ತೇಜನ ನೀಡುವ ಸಲುವಾಗಿ ಆಧಾರ ರಹಿತ ಸಾಲ ವಿತರಣೆ ಮಾಡಲಾಗಿದೆ. ರೈತ ಸದಸ್ಯರಿಗಾಗಿ 'ರೈತ ರಕ್ಷಾ' ಆರೋಗ್ಯ ವಿಮೆ ಯೋಜನೆ ಜಾರಿ ಮಾಡಲಾಗಿದೆ. ಗರಿಷ್ಟ ಪ್ರಮಾಣದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ನೋಂದಣಿ ಮಾಡಿಸಲಾಗಿದೆ. ಭತ್ತ ಬೇಸಾಯ ಮಾಡಲು ರೈತರ ಅನುಕೂಲಕ್ಕೆ ಗದ್ದೆ ಉಳುಮೆ ಮಾಡಲು 2 ಟ್ರಾಕ್ಟರ್ ಖರೀದಿಸಿ ಬಾಡಿಗೆಗೆ ನೀಡಲಾಗುತ್ತಿದೆ.


ಕೋವಿಡ್ -19 ಲಾಕ್ ಡಾನ್ ನಿಂದಾಗಿ ಆರ್ಥಿಕತೆಯಲ್ಲಿ ಏರಿಳಿತಗಳಿದ್ದರೂ ರೈತ ಸದಸ್ಯರು ಸಂಘದೊಂದಿಗೆ ಒಳ್ಳೆಯ ರೀತಿಯಲ್ಲಿ ಸಂಬಂಧ ಬೆಳೆಸಿಕೊಂಡಿದ್ದು ಉತ್ತಮವಾಗಿ ಸ್ಪಂದಿಸಿದ್ದಾರೆ. ಸಂಘದ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ/ದ್ವಿತೀಯ ಶ್ರೇಣಿ ಪಡೆದವರಿಗೆ ಅಭಿನಂದಿಸಲಾಗಿದೆ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಧನದೊಂದಿಗೆ ಗೌರವಿಸಲಾಗಿದೆ.


ಪ್ರಸ್ತುತ ಸಂಘದಲ್ಲಿ ಉಪಾಧ್ಯಕ್ಷರಾಗಿ ಸತೀಶ್ ಪೂಜಾರಿ, ನಿರ್ದೇಶಕರಾಗಿ ಶ್ರೀ ಪದ್ಮರಾಜ್ ಬಲ್ಲಾಳ್ ಮಾವಂತೂರು, ಶ್ರೀ ಸಂದೇಶ್ ಶೆಟ್ಟಿ ಪೊಡುಂಬ, ಶ್ರೀ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶ್ರೀ ಹರೀಶ್ ಆಚಾರ್ಯ, ಶ್ರೀ ದಿನೇಶ್ ಪೂಜಾರಿ, ಶ್ರೀ ಉಮೇಶ್ ಗೌಡ, ಶ್ರೀ ಜಾರಪ್ಪ ನಾಯ್ಕ, ಶ್ರೀ ವೀರಪ್ಪ ಪರವ, ಶ್ರೀ ದೇವರಾಜ್ ಸಾಲ್ಯಾನ್, ಶ್ರೀಮತಿ ಅರುಣಾ ಎಸ್. ಶೆಟ್ಟಿ, ಶ್ರೀಮತಿ ಮಂದಾರತಿ ಎಸ್.ಶೆಟ್ಟಿ, ಶ್ರೀ ಮಾಧವ ಶೆಟ್ಟಿಗಾರ್, ಶ್ರೀ ಕೇಶವ ಕಿಣಿ ಸೇವೆ ಸಲ್ಲಿಸುತ್ತಿದ್ದು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಶ್ರೀಮತಿ ಆರತಿ ಶೆಟ್ಟಿಯವರು ಕಾರ್ಯ ನಿರ್ವಹಿಸುತ್ತಿರುತ್ತಾರೆ.


ಸೂ: 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 19/12/2021 ನೇ ಆದಿತ್ಯವಾರದಂದು ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಶಾಲೆಯ ಸಭಾಂಗಣದಲ್ಲಿ ಜರಗಲಿರುವುದು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top