ಮೋದಿ ಸೂಚನೆ- ಯೋಗಿ ಆಹ್ವಾನ: ಕಾಶಿ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕೆ ಪೇಜಾವರ ಶ್ರೀ

Upayuktha
0

ಉಡುಪಿ: ಡಿ. 13 ರಂದು ಹಿಂದೂಗಳ ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ ನಡೆಯಲಿರುವ ಐತಿಹಾಸಿಕ ಎನ್ನಬಹುದಾದ ಕೇಂದ್ರ ಸರ್ಕಾರ ಮತ್ತು ಉ. ಪ್ರ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆ ಕಾಶಿ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ. 


ಈ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಸಾಧು ಸಂತರನ್ನು ಆಹ್ವಾನಿಸುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಉ ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಯೋಗಿಯವರು ಪೇಜಾವರ ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದರು.  


ಅದರಂತೆ ಶ್ರೀಗಳು ಭಾನುವಾರ ರಾತ್ರಿ ಮಂಗಳೂರಿನಿಂದ ಮುಂಯಿಗೆ ತೆರಳಿ ಸೋಮವಾರ ಮುಂಜಾನೆ ಮಠದ ಪಟ್ಟದ ದೇವರ ಪೂಜಾದಿಗಳನ್ನು ಮುಂಬಯಿ ಶಾಖಾ ಮಠದಲ್ಲೇ ಪೊರೈಸಿದ ಬಳಿಕ ಕಾಶಿಗೆ ತೆರಳಲಿರುವರು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.


ರಾಜ್ಯದಿಂದ ಶ್ರೀ ರವಿಶಂಕರ್ ಗುರೂಜಿಯವರಿಗೂ ಆಹ್ವಾನ ಬಂದಿruವ ಬಗ್ಗೆ ಮಾಹಿತಿ ಇದೆ. ಅಲ್ಲದೇ ದೇಶಾದ್ಯಂತ ಅನೇಕ ಪ್ರಮುಖ ಸಾಧು ಸಂತರನ್ನು ಆಹ್ವಾನಿಸಲಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ರ ಕಚೇರಿ ಮೂಲಗಳು ತಿಳಿಸಿವೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top