ಉಡುಪಿ ಡಿಸೆಂಬರ್ 3: ಉಡುಪಿ ನಗರಸಭಾ ವ್ಯಾಪ್ತಿಯ ಸೂಚಿತ ಪ್ರದೇಶವನ್ನು ಹೊರತುಪಡಿಸಿ, ರಸ್ತೆ ಬದಿ ಹಾಗೂ ಪುಟ್‌ಪಾತ್‌ಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿ ಹೂವು, ಹಣ್ಣು, ತಿಂಡಿ ತಿನಿಸು ಹಾಗೂ ಇತರ ವಸ್ತುಗಳ ಮಾರಾಟ ಮಾಡುವ, ಅಂಗಡಿಗಳ ಮುಂಭಾಗ ಹೆಚ್ಚುವರಿ ಶೀಟ್ ಅಳವಡಿಸಿ ಸಾಮಾಗ್ರಿ ಇಟ್ಟಿರುವುದು ಹಾಗೂ ಕಟ್ಟಡಗಳ ಪಾರ್ಕಿಂಗ್ ಸ್ಥಳ ಅತಿಕ್ರಮಣವನ್ನು ತೆರವುಗೊಳಿಸಬೇಕು.
ಇಲ್ಲದಿದ್ದಲ್ಲಿ, ದಂಡ ವಿಧಿಸಿ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ