A :ಸರಿ2 ಗ2 ಮ1 ಪದ1 ನಿ2 ಸ
Av :ಸದ1 ನಿ2 ಪಮ1 ಪಗ2 ಮ1 ರಿ2 ಸ
ರಾಗ ದರ್ಬಾರಿ ಕಾನಡವನ್ನು ಸಾಮಾನ್ಯವಾಗಿ ಹಿಂದೂಸ್ತಾನಿ ಸಂಗೀತದ ಕೃತಿಗಳಲ್ಲಿ ಬಳಸಲಾಗುತ್ತದೆ, ಇದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕಾನಡರಾಗ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇದು 20ನೇ ಮೇಳಕರ್ತ ನಟಭೈರವಿಯ ಜನ್ಯ ರಾಗವಾಗಿದೆ.
ಈ ರಾಗವನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ವಿವಿಧ ಥೆರಫಿಗಳಲ್ಲಿ (Therapy) ಬಳಸಲಾಗುತ್ತದೆ. ಇದು ಜನರನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ರಾಗವನ್ನು ಸಂಗೀತ ಚಿಕಿತ್ಸೆಯಲ್ಲಿ (music therapy) ಬಳಸಿ ರೋಗಿಯನ್ನು ಕೋಮಾದಿಂದ ಹೊರಬರಲು ಸಹಾಯ ಮಾಡಿ ವೈದ್ಯಕೀಯ ಪವಾಡಕ್ಕೆ ಸಾಬೀತಾಯಿತು.
ಈ ರಾಗದ ಉಪಯೋಗ :
• ಉದ್ವೇಗ, ಆತಂಕವನ್ನು ಕಡಿಮೆ ಮಾಡುತ್ತದೆ.
• ದುಃಖವನ್ನು ಕಡಿಮೆ ಮಾಡುತ್ತದೆ.
• ರೋಗಿಯನ್ನು ಮಾನಸಿಕ ಆಘಾತದಿಂದ ಹೊರಬರಲು ಸಹಾಯ ಮಾಡುತ್ತದೆ.
• ಮನಸ್ಸಿನ ಏಕಾಗ್ರತೆಯನ್ನು ಉತ್ತೇಜಿಸುತ್ತದೆ.
• ನೋವು, ಮೈಗ್ರೇನ್ ತಲೆನೋವು ನಿವಾರಿಸುತ್ತದೆ.
• ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.
ಈ ರಾಗವು ನಿಯಂತ್ರಿತ ಶಕ್ತಿಯನ್ನು ಹೊಂದಿದೆ, ಗ ಮತ್ತು ದ ಪುನರಾವರ್ತಿತ ಸ್ವರಗಳ ಉಪಸ್ಥಿತಿಯು ಈ ರಾಗವನ್ನು ಸುಂದರಗೊಳಿಸುತ್ತದೆ.
-ಡಾ. ರಶ್ಮಿ ಭಟ್,
ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ, ಮಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ