ಕರ್ನಾಟಕ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷೆಯ ತರಬೇತಿ: 20 ರಿಂದ ಪ್ರಾರಂಭ

Upayuktha
0

ಮಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳು ಮುಂಬರುವ 2022ರ ಜನವರಿ 4 ರಿಂದ ಪ್ರಾರಂಭವಾಗಲಿದೆ.


ಈ ಪರೀಕ್ಷೆಗಳಿಗೆ ಹಾಜರಾಗುವ ಸರಕಾರಿ ನೌಕರರಿಗೆ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ತರಬೇತಿ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ. 20 ರಿಂದ ಪ್ರತಿದಿನ ಸಂಜೆ 6 ಗಂಟೆಗೆ ನಗರದ ಮಿನಿ ವಿಧಾನ ಸೌಧದ ಹತ್ತಿರ ಇರುವ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ತರಬೇತಿ ತರಗತಿಗಳು ನಡೆಯಲಿವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top