ವಿವಿ ಅಂತರ್ ಕಾಲೇಜು ಕ್ರೀಡಾಕೂಟದ ಪ್ರಮುಖ ಅಂಶಗಳು
• ಆಳ್ವಾಸ್ ಕ್ರೀಡಾಪಟುಗಳಿಂದ ಒಟ್ಟು 14 ಕೂಟ ದಾಖಲೆ
• ದಾಖಲಾದ ಎಲ್ಲಾ ಕೂಟ ದಾಖಲೆಗಳು ಆಳ್ವಾಸ್ ಪಾಲು
• 800ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ
• ಆಳ್ವಾಸ್ ಕಾಲೇಜಿಗೆ ಒಟ್ಟು 43 ಚಿನ್ನ ಸೇರಿದಂತೆ ಒಟ್ಟು 79 ಪದಕಗಳು
ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಮಂಗಳೂರು ವಿವಿ ಅಂತರ್ ಕಾಲೇಜು 41ನೇ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಗುರುವಾರ ಮುಕ್ತಾಯಗೊಂಡಿತು. ಅಂತಿಮ ದಿನದ 9 ಸೇರಿದಂತೆ, ಕೂಟದಲ್ಲಿ ಒಟ್ಟು 14 ಕೂಟ ದಾಖಲೆಗಳು ನಿರ್ಮಾಣಗೊಂಡಿತು.
ಕ್ರೀಡಾಕೂಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸತತ 19ನೇ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮೂರು ದಿನಗಳ ಕಾಲ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 800ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿ’ಸೋಜಾ, ಸಹನಿರ್ದೇಶಕ ಪ್ರಸನ್ನ ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಜೇಮ್ಸ್ ಒಲಿವರ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
• ಕೋವಿಡ್ ಮಾರ್ಗಸೂಚಿಯಂತೆ ಅಚುಕಟ್ಟಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
• ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಎಲ್ಲರಿಗೂ ಶುಚಿ, ರುಚಿಯಾದ ಉಪಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಮಗ್ರ ಪ್ರಶಸ್ತಿ:
1. ಆಳ್ವಾಸ್ ಕಾಲೇಜು, ಮೂಡುಬಿದಿರೆ – 487 ಅಂಕಗಳು
ತಂಡ ಪ್ರಶಸ್ತಿ - ಮಹಿಳೆಯರು - ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಟ್ರೋಫಿ:
1. ಆಳ್ವಾಸ್ ಕಾಲೇಜು, ಮೂಡುಬಿದಿರೆ – 240 ಅಂಕಗಳು.
2. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು – 47 ಅಂಕಗಳು.
3. ಎಸ್.ಡಿ.ಎಂ ಕಾಲೇಜು, ಉಜಿರೆ – 47 ಅಂಕಗಳು.
4. ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ – 19 ಅಂಕಗಳು
ತಂಡ ಪ್ರಶಸ್ತಿ - ಪುರುಷರು - ಸಂತ ಫಿಲೋಮಿನಾ ಕಾಲೇಜು ಅಸೋಸಿಯೇಶನ್ ಟ್ರೋಫಿ
1. ಆಳ್ವಾಸ್ ಕಾಲೇಜು, ಮೂಡುಬಿದಿರೆ – 247 ಅಂಕಗಳು.
2. ಎಸ್.ಡಿ.ಎಂ ಕಾಲೇಜು, ಉಜಿರೆ – 75 ಅಂಕಗಳು.
3. ಸಂತ ಫಿಲೋಮಿನಾ ಕಾಲೇಜು, ಪುತ್ತೂರು – 39 ಅಂಕಗಳು.
4. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು – 28 ಅಂಕಗಳು.
ಅತ್ಯುತ್ತಮ ಪಥಸಂಚಲನ:
1. ಮಂಗಳೂರು ಯುನಿವರ್ಸಿಟಿ ಕ್ಯಾಂಪಸ್ ಕಾಲೇಜು, ಕೊಣಾಜೆ
ಅತ್ಯುತ್ತಮ ಕ್ರೀಡಾಪಟು:
ಮಹಿಳಾ ವಿಭಾಗ: ಲಿಖಿತಾ, ಆಳ್ವಾಸ್ ಕಾಲೇಜು – 1061 ಅಂಕಗಳು
ಪುರುಷರ ವಿಭಾಗ: ವಿಘ್ನೇಶ್ ಎ, ಆಳ್ವಾಸ್ ಕಾಲೇಜು – 1072 ಅಂಕಗಳು
ಸಮಗ್ರ ಪ್ರಶಸ್ತಿ ವಿಜೇತ ಆಳ್ವಾಸ್ ಕಾಲೇಜು ತಂಡ ಗೆದ್ದ ಪದಕ ಪಟ್ಟಿ:
ಒಟ್ಟು: 79
ಚಿನ್ನ: 43
ಬೆಳ್ಳಿ: 32
ಕಂಚು: 04
ಪುರುಷರ ವಿಭಾಗ:
ಚಿನ್ನ: 21
ಬೆಳ್ಳಿ: 17
ಕಂಚು: 03
ಮಹಿಳೆಯರ ವಿಭಾಗ:
ಚಿನ್ನ: 22
ಬೆಳ್ಳಿ: 15
ಕಂಚು: 01
ಒಟ್ಟು ಕೂಟ ದಾಖಲೆಗಳು: 14
ತೃತೀಯ ದಿನದ ಕೂಟ ದಾಖಲೆಗಳು:
1. 10000ಮೀ ಪುರುಷರ ಓಟ – ಆದೇಶ್, ಆಳ್ವಾಸ್ ಕಾಲೇಜು – 30.09.6 ಸೆಕೆಂಡುಗಳು (ಆಳ್ವಾಸ್ ಕಾಲೇಜಿನ ರಾಬಿನ್ ಸಿಂಗ್ – 31.16.4 ಸೆ. – 2017-18)
2. ಪುರುಷರ ಹ್ಯಾಮರ್ ಥ್ರೋ– ಅಜಯ್ ಕುಮಾರ್, ಆಳ್ವಾಸ್ ಕಾಲೇಜು – 61.48 ಮೀ (ಆಳ್ವಾಸ್ ಕಾಲೇಜಿನ ಸುರೇಂದ್ರ ಕುಮಾರ್ – 55.88 ಮೀ – 2018-2019)
3. ಪುರುಷರ ಜ್ಯಾವಲಿನ್ ಥ್ರೋ – ವಿಕ್ರಾಂತ್ ಮಲಿಕ್, ಆಳ್ವಾಸ್ ಕಾಲೇಜು – 77.57 ಮೀ (ಆಳ್ವಾಸ್ ಕಾಲೇಜಿನ ಅರುಣ್ ಬೇಬಿ - 77.44 ಮೀ. – 2017-18)
4. ಮಹಿಳೆಯರ ಹೈಜಂಪ್ - ಸಿಂಚನಾ ಎಂ. ಎಸ್, ಆಳ್ವಾಸ್ ಕಾಲೇಜು – 1.80 ಮೀ (ಆಳ್ವಾಸ್ ಕಾಲೇಜಿನ ಎಸ್.ಬಿ.ಸುಪ್ರಿಯಾ – 1.79 ಮೀ. – 2018-19)
5. ಮಹಿಳೆಯರ 400 ಮೀ. ಹರ್ಡಲ್ಸ್ - ನನ್ನಿ, ಆಳ್ವಾಸ್ ಕಾಲೇಜು – 1.02.3 ಸೆಕೆಂಡುಗಳು (ಆಳ್ವಾಸ್ ಕಾಲೇಜಿನ ಅನು – 1.02.6 ಸೆಕೆಂಡುಗಳು – 2016-17)
6. ಮಹಿಳೆಯರ ಶಾಟ್‌ಪುಟ್ – ರೇಖಾ, ಆಳ್ವಾಸ್ ಕಾಲೇಜು – 14.02 ಮೀ. (ಆಳ್ವಾಸ್ ಕಾಲೇಜಿನ ಅನಾಮಿಕಾ ದಾಸ್ – 13.96 ಮೀ. – 2016-17)
7. ಮಹಿಳೆಯರ 10000 ಮೀ ಓಟ - ಲಕ್ಷ್ಮಿ, ಆಳ್ವಾಸ್ ಕಾಲೇಜು – 35.54.9 ಸೆಕೆಂಡುಗಳು (ಆಳ್ವಾಸ್ ಕಾಲೇಜಿನ ಶೀತಲ್ – 36.57.8 ಸೆಕೆಂಡುಗಳು – 2018-19)
8. ಮಹಿಳೆಯರ 200 ಮೀ. ಓಟ - ಲಿಖಿತಾ ಎಂ. ಆಳ್ವಾಸ್ ಕಾಲೇಜು – 24.2 ಸೆಕೆಂಡುಗಳು (ಆಳ್ವಾಸ್ ಕಾಲೇಜಿನ ಪ್ರಿಯಾಂಕ ಕಳಗಿ ಎಸ್ – 24.9 ಸೆಕೆಂಡುಗಳು – 2014-15)
9. ಮಹಿಳೆಯರ ಲಾಂಗ್ ಜಂಪ್ - ಶೃತಿಲಕ್ಷ್ಮಿ – 6.24 ಮೀ. (ಆಳ್ವಾಸ್ ಕಾಲೇಜಿನ ಐಶ್ವರ್ಯ ಜಿ.ಎಂ – 6.05 ಮೀ – 2015-16)
ಕೂಟ ದಾಖಲೆ ಮಾಡಿದ ಎಲ್ಲಾ 14 ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಮಂಗಳೂರು ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಡೆಯುವ ಒಟ್ಟು 47 ಸ್ಪರ್ಧೆಗಳ ಪೈಕಿ 46 ಕೂಟ ದಾಖಲೆಗಳು ಆಳ್ವಾಸ್ ಹೆಸರಿನಲ್ಲಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ